More

    70 ವರ್ಷಗಳಲ್ಲಿ ಲತಾ ಮಂಗೇಶ್ಕರ್ ಸಂಪಾದಿಸಿದ ಆಸ್ತಿ ಎಷ್ಟು? ಅಷ್ಟು ಆಸ್ತಿ ಈಗ ಯಾರ ಪಾಲಾಗುತ್ತೆ?

    ಭಾರತ ದೇಶದ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಅವರ ಹೆಸರೇ ಒಂದು ಬ್ರ್ಯಾಂಡ್. ಇದೇ ಕಾರಣಕ್ಕೆ ಅವರನ್ನು ಕ್ವೀನ್ ಆಫ್ ಮೆಲೋಡಿಎಂದು ಕರೆಯಲಾಗುತ್ತೆ. ಲತಾ ಮಂಗೇಶ್ಕರ್ ಅವರ ಧ್ವನಿಗೆ ಮರುಳಾಗಿ ಭಾರತ ಸರ್ಕಾರ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನವನ್ನು ನೀಡಿ ಗೌರವಿಸಿದೆ.
    ಅದರೆ, ಸದ್ಯ ಲತಾ ಮಂಗೇಶ್ಕರ್ ಅವರ ನಿಧನದ ಬಳಿಕ ಅವರ ಸಾಧನೆಗಳಿಗಿಂತ ಹೆಚ್ಚು ಅವರು ಸಂಪಾಧಿಸಿದ ಆಸ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಹೌದು, ಕಳೆದ ಏಳು ದಶಕಗಳಲ್ಲಿ ಲತಾ ಮಂಗೇಶ್ಕರ್ ಅವರು ಸುಮಾರು 368 ಕೋಟಿ ರೂ. ಸಂಪಾದಿಸಿದ್ದಾರೆ ಎಂದು ಹಲವು ಮಾದ್ಯಮ ವರದಿಗಳು ತಿಳಿಸುತ್ತಿವೆ.
    ಇವರ ಆಸ್ತಿಯ ಮೌಲ್ಯ ಕೇಳಿ ಬಹುತೇಕ ಎಲ್ಲರಿಗೂ ಶಾಕ್ ಆಗಿದೆ. ಇನ್ನು, ಸಹಜವಾಗಿಯೇ ಮದುವೆಯಾಗದ ಲತಾ ಅವರ ಈ ದೊಡ್ಡ ಮೊತ್ತದ ಆಸ್ತಿ ಯಾರ ಪಾಲಾಗುತ್ತೆ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಇದಿಷ್ಟೇ ಅಲ್ಲದೇ, ಲತಾ ಅವರ ಅದ್ದೂರಿ ಮನೆ, ಐಷಾರಾಮಿ ಕಾರುಗಳು, ಹಾಡುಗಳಿಂದ ಬರುವ ರಾಯಲ್ಟಿಗಳ ಬಗ್ಗೆ ಚರ್ಚೆ ಮತ್ತು ಕುತೂಹಲ ಆರಂಭವಾಗಿದೆ.
    ಲತಾ ಮಂಗೇಶ್ಕರ್ ಅವರು ಹೆಚ್ಚು ಕಡಿಮೆ 70 ವರ್ಷಗಳ ಕಾಲ ನಿರಂತರವಾಗಿ ಭಾರತ ಸಿನಿರಂಗದಲ್ಲಿ ದುಡಿದಿದ್ದಾರೆ. ಹಾಗಾಗಿ, ಇಷ್ಟು ವರ್ಷಗಳಲ್ಲಿ ಅವರು ಹಾಡುಗಳ ಮೂಲಕ ಗಳಿಸಿದ ಒಟ್ಟು ಆಸ್ತಿ ಮೌಲ್ಯ ಒಂದೆರಡು ಕೋಟಿಯಲ್ಲ, ಬದಲಿಗೆ ಬರೋಬ್ಬರಿ 368 ಕೋಟಿ ರೂ. ಎಂಬುದು ನಂಬಲೇ ಬೇಕಾದ ಸತ್ಯ.
    ಲತಾ ಅವರಿಗೆ ಕಾರುಗಳು ಮೇಲೆ ಒಲವಿತ್ತು. ಹಾಗಾಗಿ ಅವರ ಬಳಿ ದುಬಾರಿ ಕಾರುಗಳಿತ್ತು. ಜತೆಗೆ, ಚಿನ್ನದ ಆಭರಣಗಳೆಂದರೆ ಲತಾ ಅವರಿಗೆ ತುಂಬಾ ಇಷ್ಟ ಎನ್ನಲಾಗಿದೆ. ಮತ್ತೊಂದೆಡೆ, ಮುಂಬೈನ ಪೆಡ್ಡಾರ್ ರಸ್ತೆಯಲ್ಲಿ ಒಂದು ವಿಂಟೇಜ್ ಬಂಗ್ಲೇ ಇದೆ. ಇದಲ್ಲದೆ, ಲತಾ ಅವರು ಬೇರೆ ಆಸ್ತಿ ಹೊಂದಿದ್ದಾರಂತೆ. ಈ ಎಲ್ಲಾ ಆಸ್ತಿ ಲತಾ ಅವರ ಸಹೋದರ, ಸಹೋದರಿ ಅವರ ಮಕ್ಕಳಿಗೆ ಸೇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
    ಲತಾ ಅವರು ಕಳೆದ ಒಂದೆರಡು ದಶಕಗಳಿಂದ ಹಾಡುವುದನ್ನು ನಿಲ್ಲಿಸಿದ್ದರು. ಆದರೂ, ಅವರು ಈ ಹಿಂದೆ ಹಾಡಿರುವ ಹಲವು ಹಾಡುಗಳಿಂದ ಈಗಲೂ ಪ್ರತಿ ವರ್ಷಕ್ಕೆ 5 ಕೋಟಿಯಷ್ಟು ರಾಯಲ್ಟಿ ಪಡೆಯುತ್ತಿದ್ದಾರೆ. ಇನ್ನು ಮುಂದೆನೂ ಇಷ್ಟೇ ಮೊತ್ತದ ರಾಯಲ್ಟಿ ಹಣ ಸಿಗಲಿದೆ. ಅದು, ಲತಾ ಅವರು ಬದುಕಿದ್ದಾಗಲೇ ಆರಂಭಿಸಿದ ಅವರ ಚಾರಿಟಬಲ್ ಟ್ರಸ್ಟ್​ಗೆ ಸೇರಲಿದೆ ಎಂದು ಹೇಳಲಾಗುತ್ತಿದೆ

    70 ವರ್ಷಗಳಲ್ಲಿ ಲತಾ ಮಂಗೇಶ್ಕರ್ ಸಂಪಾದಿಸಿದ ಆಸ್ತಿ ಎಷ್ಟು? ಅಷ್ಟು ಆಸ್ತಿ ಈಗ ಯಾರ ಪಾಲಾಗುತ್ತೆ?

    ಟಾಲಿವುಡ್ ಪ್ರಿನ್ಸ್ ಜತೆ ತೆರೆ ಹಂಚಿಕೊಳ್ಳಲಿದ್ದಾರಾ ಕನ್ನಡದ ಬೆಡಗಿ ಶ್ರೀಲೀಲಾ?

    ಬಿಕಿನಿ ತೊಟ್ಟ ಮಲೈಕಾ: ಬಾಯ್​ಫ್ರೆಂಡ್ ಅರ್ಜುನ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts