More

    ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ

    ಮುನವಳ್ಳಿ: ಸಮೀಪದ ಹಿಟ್ಟಣಗಿ ಗ್ರಾಮದಲ್ಲಿ ಸಂಗಮೇಶ್ವರ ಅಜ್ಜನವರ ಜಾತ್ರಾ ಮಹೋತ್ಸವ ಹಾಗೂ ಲಿಂ. ಸಂಗಮೇಶ್ವರ ಶಿವಾಚಾರ್ಯರ 86 ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಸವದತ್ತಿ ಮೂಲಿಮಠದ ಶ್ರೀಗಳು, ಪ್ರವಚನಕಾರ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಗುರುವಾರ ಉದ್ಘಾಟಿಸಿದರು.

    ನಂತರ ಮಾತನಾಡಿದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಪ್ರವಚನ ಆಲಿಸುವುದರಿಂದ ಜೀವನ ಉತ್ತಮಗೊಳಿಸಿಕೊಳ್ಳಬಹುದು ಎಂದರು. ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ಭಾರತ ಶರಣ ಸಂಸ್ಕೃತಿಯ ತವರಾಗಿದೆ. ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಲು ಇಂಥ ಧಾರ್ಮಿಕ ಕಾರ್ಯಕ್ರಮಗಳು ಪ್ರೇರೇಪಿಸುತ್ತವೆ ಎಂದರು. ಏಣಗಿ ಬಂಗಾರಜ್ಜನವರ ಮಠದ ವಿರೂಪಾಕ್ಷ ಸ್ವಾಮೀಜಿ, ಪತ್ರೆಪ್ಪ ಅಂಗಡಿ, ಸಣ್ಣಸಂಗಪ್ಪ ಕಬ್ಬೂರ, ಸಂಗಪ್ಪ ತಳವಾರ, ಬಸವರಾಜ ರಾಮನಗೌಡ್ರ, ಸಂಗಪ್ಪ ಹುಲಗಪ್ಪನವರ, ಯಲ್ಲಪ್ಪ ಗೌಡರ, ಈಶ್ವರ ಚಚಡಿ, ಶಿಕ್ಷಕ ಬಿ.ಬಿ. ಹುಲಿಗೊಪ್ಪ, ಗಂಗಾಧರ ಗೊರಾಬಾಳ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts