More

    ಬಾಕಿ ವಸೂಲಿಗೆ ಮುಂದಾದ ಕಾಲೇಜು !

    ಕುಷ್ಟಗಿ: ಪದವಿ ಪೂರ್ಣಗೊಳಿಸಿ ಹೆಚ್ಚಿನ ವ್ಯಾಸಂಗಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳಿಂದ ಪ್ರವೇಶ ಹಾಗೂ ಪರೀಕ್ಷಾ ಶುಲ್ಕದ ಬಾಕಿ ವಸೂಲಿಗೆ ಮುಂದಾಗಿರುವ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಕಿ ಪಾವತಿಸಿದ ನಂತರವೇ ಅಂಕಪಟ್ಟಿ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    ಪ್ರವೇಶ ನೀಡುವಾಗ ಹಾಗೂ ಪರೀಕ್ಷೆ ವೇಳೆ ಶುಲ್ಕದಲ್ಲಿ ರಿಯಾಯಿತಿ (ಲೋ ಇನ್ ಕಮ್) ನೀಡಲಾಗಿರುತ್ತದೆ. ಶಿಷ್ಯವೇತನ ಖಾತೆಗೆ ಜಮಾ ಆಗುತ್ತಿದ್ದಂತೆ ವಿದ್ಯಾರ್ಥಿಗಳು ಉಳಿದ ಶುಲ್ಕ ಪಾವತಿಸಬೇಕು. ಶಿಷ್ಯವೇತನ ಜಮಾ ಆದ ನಂತರವೂ ವಿದ್ಯಾರ್ಥಿಗಳು ಬಾಕಿ ಶುಲ್ಕ ನೀಡಿಲ್ಲ. ಸದ್ಯ ವಿವಿಧ ವಿದ್ಯಾರ್ಥಿಗಳ ಒಟ್ಟು 74 ಲಕ್ಷ ರೂ.ಗಳನ್ನು ವಿವಿಗೆ ಪಾವತಿಸಬೇಕಿದೆ ಎಂದು ಕಾಲೇಜಿನ ಮುಖ್ಯಸ್ಥರು ಹೇಳುತ್ತಿದ್ದಾರೆ. ಕರೊನಾ ತೀವ್ರತೆ ಹೆಚ್ಚಿದ ಸಂದರ್ಭ ಶಿಷ್ಯವೇತನ ಜಮಾ ಆಗಿಲ್ಲ. ಪೂರ್ಣ ಪ್ರಮಾಣದ ಶುಲ್ಕ ಪಾವತಿಸಿದರೂ ಬಾಕಿ ಇದೆ ಎಂದು ಹೇಳಿ ಅಂಕ ಪಟ್ಟಿ ನೀಡುತ್ತಿಲ್ಲ. ಒಟ್ಟಿಗೆ 10-12 ಸಾವಿರ ರೂ. ಕೊಡುವುದು ಕಷ್ಟ ಎಂದು ವಿದ್ಯಾರ್ಥಿಗಳು ಅಲವತ್ತುಕೊಳ್ಳುತ್ತಿದ್ದು, ಹಾಲಿ-ಮಾಜಿ ಶಾಸಕರ ಕಚೇರಿ ಹಾಗೂ ನಿವಾಸಕ್ಕೆ ತೆರಳಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.

    ಬಿ.ಇಡಿ ಕೌನ್ಸೆಲಿಂಗ್‌ಗೆ ಕೊನೆಯ ದಿನವಾಗಿದೆ. ವಿವಿಧ ಸೆಮಿಸ್ಟರ್‌ನ 13,500 ರೂ. ಬಾಕಿ ಶುಲ್ಕ ಪಾವತಿಸಿದ ನಂತರವೇ ಅಂಕಪಟ್ಟಿ ನೀಡುವುದಾಗಿ ಹೇಳುತ್ತಿದ್ದಾರೆ. ಕಾಲಾವಕಾಶ ಕೇಳಿದರೂ ನೀಡುತ್ತಿಲ್ಲ. ಬಾಕಿ ಪಾವತಿಸುವುದು ಅನಿವಾರ್ಯವಾಗಿದೆ.
    ಶ್ರೀದೇವಿ ತಳವಾರ್
    ವಿದ್ಯಾರ್ಥಿನಿ

    ಪ್ರತಿ ಸೆಮಿಸ್ಟರ್‌ಗೆ ಜಮಾ ಆಗಿರುವ ಶಿಷ್ಯ ವೇತನ, ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕದ ವಿವರವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ. ಬಾಕಿ ಇರಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಬಾಕಿ ನೀಡಿದ ನಂತರವೇ ವಿವಿ ಅಂಕಪಟ್ಟಿ ಕೊಡುತ್ತದೆ. ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತಿದೆ.
    ಡಾ.ಎಸ್.ವಿ.ಡಾಣಿ
    ಪ್ರಾಚಾರ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts