More

    ಅಂಗವಿಕಲರಿಗೆ ಬೇಕಿಲ್ಲ ಅನುಕಂಪ: ಬಿಆರ್‌ಸಿ ತಿಪ್ಪೇಸ್ವಾಮಿ ಹೇಳಿಕೆ

    ಮೊಳಕಾಲ್ಮೂರು: ಅಂಗವಿಕಲರಿಗೆ ಅನುಕಂಪ ಬೇಕಿಲ್ಲ. ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರ, ಪೋತ್ಸಾಹ ನೀಡುವ ಜತೆಗೆ ಸರ್ಕಾರಿ ಸೌಲಭ್ಯ ಬೇಕಿದೆ ಎಂದು ಬಿಆರ್‌ಸಿ ತಿಪ್ಪೇಸ್ವಾಮಿ ಹೇಳಿದರು.

    ಪಟ್ಟಣದ ಸರ್ವ ಶಿಕ್ಷಣ ಅಭಿಯಾನ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವೈದ್ಯಕೀಯ ತಪಾಸಣೆ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಹುಟ್ಟು ಆಕಸ್ಮಿಕ; ಸಾವು ಖಚಿತ. ಈ ಮಧ್ಯೆ ಬದುಕಿ ಬಾಳುವ ಮಾನವ ಕುಲದಲ್ಲಿ ಸವಾಲಾಗಿರುವ ಅಂಗವಿಕಲರ ಬದುಕು ಅತ್ಯಂತ ಶೋಚನೀಯ ಸಂಗತಿ.

    ಇದನ್ನು ಸವಾಲಾಗಿ ಸ್ವೀಕರಿಸಿ ವಿಶ್ವಮಟ್ಟದಲ್ಲಿ ಗಮನಸೆಳೆಯುವ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು.

    ಅವರುಗಳ ಈ ಕಾರ್ಯಕ್ಕೆ ಪಾಲಕರು, ಶಿಕ್ಷಕರು, ಸ್ಥಳೀಯರ ಸಹಕಾರ ಬಹಳ ಅಗತ್ಯ ಎಂದರು.

    ಸಮಗ್ರ ಶಿಕ್ಷಣದ ವ್ಯವಸ್ಥೆ, ಅಗತ್ಯವಿರುವ ಸಾಧನ, ಸಲಕರಣೆ ಹಾಗೂ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಹಲವು ಸೌಲಭ್ಯಗಳನ್ನ ಕಲ್ಪಿಸುವ ಮೂಲಕ ಆರೋಗ್ಯ ಪೂರ್ಣ ಜೀವನಕ್ಕೆ ಎಲ್ಲ ರೀತಿಯ ನೆರವು ಸರ್ಕಾರ ನೀಡುತ್ತಿದೆ ಎಂದು ತಿಳಿಸಿದರು.

    ಶಿಬಿರದಲ್ಲಿ ದೃಷ್ಠಿ ದೋಷ-15, ದೈಹಿಕ ಸಮಸ್ಯೆ- 47, ಶ್ರವಣದೋಷ ಇರುವವರು 11 ಮಕ್ಕಳಿಗೆ ತಪಾಸಣೆ ಮಾಡಲಾಯಿತು.

    ತಾಲೂಕು ಆರೋಗ್ಯಾಧಿಕಾರಿ ಡಾ. ಮಧುಕುಮಾರ್, ಡಾ.ಪಾಪರಾಜ್, ಡಾ. ಅಭಿಷೇಕ್, ಅಧಿಕಾರಿಗಳಾದ ಯಶ್ವಂತ್, ದಾದಾಪೀರ್, ಆದಿಬಸಪ್ಪ, ಶ್ರೀಕಾಂತ್ ಇತರರಿದ್ದರು.

    ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಆಡಿಷ್ ಯೋಜನೆಯಡಿ ಸಾಧನ, ಸಲಕರಣೆಗಳನ್ನು ವಿತರಿಸಲಾಯಿತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts