More

    ಅಪ್ಪು ನಿಜಕ್ಕೂ ಪುಣ್ಯಾತ್ಮ ಎಂದಿದ್ದೇಕೆ ನಿರ್ದೇಶಕ ರಾಜಮೌಳಿ?

    ಬೆಂಗಳೂರು: ಜನಮೆಚ್ಚಿದ ನಟ ಪುನೀತ್ ಇಂದು ನಮ್ಮ ನಡುವೆ ಇರದೇ ಇರಬಹುದು. ಆದರೆ ಅವರನ್ನು ಪ್ರತಿದಿನ ನೆನೆಯುವ ಮನಸ್ಸುಗಳು ಮಾತ್ರ ಕೋಟಿ ಕೋಟಿ ಎಂದೇ ಹೇಳಬೇಕು. ಜನರ ಮನದಲ್ಲಿ ಅಪ್ಪು ಶಾಶ್ವತವಾಗಿ ಬದುಕಿದ್ದಾರೆ. ಇನ್ನು ಅಪ್ಪು ನಿಧನರಾಗಿ ಒಂದು ತಿಂಗಳು ಕಳೆದರೂ ಇಂದಿಗೂ ಪುನೀತ್ ನೆನೆದು ಪ್ರತಿ ದಿನ ಕಣ್ಣೀರು ಹಾಕುತ್ತಿರುವ ಸೆಲೆಬ್ರಿಟಿಗಳಿಗೆ ಸಹ ಲೆಕ್ಕವೇ ಇಲ್ಲ. ಆರ್​​​ಆರ್​​ಆರ್ ಸಿನಿಮಾ ಪ್ರವಾರಕ್ಕೆಂದು ಬೆಂಗಳೂರಿಗೆ ಬಂದ ನಿರ್ದೇಶಕ ರಾಜಮೌಳಿ ಸಹ ಅಪ್ಪುರನ್ನು ನೆನೆದು ಭಾವುಕರಾಗಿದ್ದಾರೆ. ಪುನೀತ್ ಬಗ್ಗೆ ರಾಜಮೌಳಿ ಹೇಳಿರುವ ಒಂದು ಒಂದು ಮಾತು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಅಪ್ಪು ಅಭಿಮಾನಿಗಳನ್ನು ಕಣ್ಣೀರು ಹಾಕಿಸುತ್ತಿದೆ.

    ಬೆಂಗಳೂರಿಗೆ ಬಂದ ದೇಶದ ಖ್ಯಾತ ನಿರ್ದೇಶಕ ರಾಜಮೌಳಿ ಪುನೀತ್ ರಾಜ್​​ಕುಮಾರ್ ಮನೆಗೆ ಭೇಟಿ ಕೊಟ್ಟು ಅಶ್ವಿನಿ ಪುನೀತ್ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ರಾಜಮೌಳಿ ಅಪ್ಪು ಅವರೊಂದಿಗೆ ಇರುವ ಅವರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ನಾನು ಮೊದಲು ಅಪ್ಪು ಸರ್ ಅನ್ನು ಅವರ ಮನೆಯಲ್ಲೇ ನಾಲ್ಕು ವರ್ಷದ ಹಿಂದೆ ಭೇಟಿಯಾಗಿದ್ದೆ.

    ಆದರೆ, ಅವರು ನನ್ನ ಜೊತೆ ಮಾತಾಡಿದಾಗ ನಾನು ಒಬ್ಬ ಸೆಲೆಬ್ರಿಟಿ ಜೊತೆ ಮಾತಾಡುತ್ತಿದ್ದೇನೆ ಅಂತ ಒಂದು ನಿಮಿಷದಲ್ಲೂ ಅನಿಸಿಲ್ಲ. ಬದಲಿಗೆ ನಾನು ನನ್ನ ಸ್ನೇಹಿತನೊಬ್ಬನ ಒಟ್ಟಿಗೆ ಮಾತಾಡಿದ ಫಿಲಿಂಗ್ ನನಗೆ ಇತ್ತು. ಅಂತಹ ವ್ಯಕ್ತಿ ಇವತ್ತು ನಮ್ಮ ಜೊತೆ ಇಲ್ಲದೇ ಇರುವುದು ನನಗೆ ಅರಗಿಸಿಕೊಳ್ಳಲು ಯಾವತ್ತಿಗೂ ಸಾಧ್ಯವಿಲ್ಲ. ಅಷ್ಟು ಒಳ್ಳೆಯ ವ್ಯಕ್ತಿ ನಮ್ಮೊಟ್ಟಿಗೆ ಇಲ್ಲ ಎಂಬುದು ನೆನಪಿಕೊಂಡರೆ ಎದೆ ಒಡೆದಂತೆ ಭಾಸವಾಗುತ್ತೆ.

    ತಮ್ಮ ಮಾತುಗಳನ್ನು ಮುಂದುವರಿಸಿದ ರಾಜಮೌಳಿ, ಪುನೀತ್ ರಿಂದ ಸಾಮಾನ್ಯ ಜನ ಜತೆ ಸೆಲೆಬ್ರಿಟಿಗಳು ಸಹ ಕಲಿಯ ಬೇಕಾಗಿರುವುದ ಬಹಳಷ್ಟು ಇದೆ ಎಂದಿದ್ದಾರೆ. ‘ನಟ ಪುನೀತ್ ಎಷ್ಟು ಜನರ ಬೆಂಬಲಕ್ಕೆ ನಿಂತಿದ್ದರು, ಎಷ್ಟು ಸಾಮಾಜ ಸೇವೆ ಮಾಡಿದ್ದಾರೆಂಬುದು ನಿಧನದ ನಂತರ ಗೊತ್ತಾಗಿದೆ. ಆದರೆ, ನಾವು ಹಲವರು ಒಬ್ಬ ವ್ಯಕ್ತಿಗೆ ಸಹಾಯ ಮಾಡಿದರು ಅದು ಇಡೀ ಪ್ರಪಂಚಕ್ಕೆ ಗೊತ್ತಾಗ ಬೇಕೆಂದು ಬಯಸುತ್ತೆವೆ.

    ‘ತಾವು ಮಾಡಿರುವ ಸಹಾಯದ ಬಗ್ಗೆಯೂ ಪ್ರಚಾರ ಗಿಟ್ಟಿಸಿಕೊಳ್ಳುವ ಮನುಷ್ಯತ್ವ ಹಲವರದ್ದು. ಪುನೀತ್ ಮಾತ್ರ ಯಾವುದೇ ಪ್ರಚಾರ ಭಯಸಿಲ್ಲ. ಆ ಪುಣ್ಯಾತ್ಮ ಒಂದು ಕೈಯಲ್ಲಿ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗದೆ ಮಾಡಿದ್ದಾರೆ. ಇದನ್ನು ನಾವು ಎಲ್ಲರು ಅವರಿಂದ ಕಲಿಯಬೇಕು. ಪುನೀತ್​​ರಿಂದ ಕಲಿಯುವುದು ಇನ್ನೂ ತುಂಬಾನೆ ಇದೆ’ ಎಂದಿದ್ದಾರೆ ರಾಜಮೌಳಿ. ಅಪ್ಪುರನ್ನು ರಾಜಮೌಳಿ ಭೇಟಿಯಾಗಿರುವುದು ಕೇವಲ ನಾಲ್ಕ ರಿಂದ ಐದು ಬಾರಿ ಇರಬುಹುದು. ಹಾಗಿದ್ದರೂ, ರಾಜಮೌಳಿ ಮತ್ತು ಹಲವು ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ಕುಟುಂಬಗಳಿಗೆ ಅಪ್ಪು ಬಹಳಷ್ಟು ಆತ್ಮೀಯರು. ಪುನೀತ್ ರಾಜ್​​ಕುಮಾರ್ ನಿಧನ ತೆಲುಗು ಸಿನಿಮಾರಂಗದ ಸೆಲೆಬ್ರಿಟಿಗಳಿಗೂ ತೀರದ ನೋವು ಉಳಿಸಿದೆ ಎಂದರೆ ತಪ್ಪಾಗುವುದಿಲ್ಲ.

    ಮತ್ತೆ ಕೋಟ್ಯಧೀಶನಾದ ಮಲೈ ಮಹದೇಶ್ವರ: ಚಿನ್ನ, ಬೆಳ್ಳಿ, ಕಾಂಚಾಣ ಝಣಝಣ…ತಡರಾತ್ರಿಯವರೆಗೂ ಎಣಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts