More

    ತಾಯ್ತನದ ಬಳಿಕ ಸ್ಕ್ವಾಷ್​ಗೆ ಮರಳಲು ಸಜ್ಜಾದ ದೀಪಿಕಾ ಪಲ್ಲಿಕಲ್

    ನವದೆಹಲಿ: ಮೇರಿ ಕೋಮ್, ಸಾನಿಯಾ ಮಿರ್ಜಾ, ಗೀತಾ ಪೋಗಟ್ ಮುಂತಾದ ಭಾರತೀಯ ಕ್ರೀಡಾಪಟುಗಳ ಹಾದಿಯಲ್ಲಿ ಸ್ಕ್ವಾಷ್​ ತಾರೆ ದೀಪಿಕಾ ಪಲ್ಲಿಕಲ್ ಕೂಡ ತಾಯ್ತನದ ಬಳಿಕ ಕ್ರೀಡೆಗೆ ಮರಳಲು ಸಜ್ಜಾಗಿದ್ದಾರೆ. ಕಳೆದ 4 ವರ್ಷಗಳಿಂದ ಸ್ಕ್ವಾಷ್​ ಆಟದಿಂದ ದೂರವಿರುವ ದೀಪಿಕಾ, ಕಳೆದ ವರ್ಷ ಅಕ್ಟೋಬರ್‌ನಲ್ಲಷ್ಟೇ ಅವಳಿ ಮಕ್ಕಳ ತಾಯಿಯಾಗಿದ್ದರು. ಇದೀಗ ಅವರು ಪ್ರಸಕ್ತ ವರ್ಷದ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಸಿದ್ಧತೆ ಆರಂಭಿಸಿದ್ದಾರೆ.

    ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ಪತ್ನಿಯಾಗಿರುವ ದೀಪಿಕಾ, ಸ್ಕ್ವಾಷ್​ನಿಂದ ದೂರವಿದ್ದ ಸಮಯದಲ್ಲಿ ಇಂಟೀರಿಯರ್ ಡಿಸೈನಿಂಗ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. 2014ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಜೋಶ್ನಾ ಚಿನ್ನಪ್ಪ ಜತೆಗೂಡಿ ಸ್ವರ್ಣ ಪದಕ ಜಯಿಸುವ ಮೂಲಕ ಇತಿಹಾಸ ಬರೆದಿದ್ದ ದೀಪಿಕಾ, ಮುಂಬರುವ ಬರ್ಮಿಂಗ್‌ಹ್ಯಾಂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಡಬಲ್ಸ್ ಮತ್ತು ಹಂಗ್‌ರೆೌ ಏಷ್ಯಾಡ್‌ನಲ್ಲಿ ಸಿಂಗಲ್ಸ್‌ನಲ್ಲೂ ಸ್ಪರ್ಧಿಸುವ ಗುರಿ ಹೊಂದಿದ್ದಾರೆ.

    ಕ್ರೀಡಾಪಟುವೂ ಆಗಿರುವ ಪತಿ ಹಾಗೂ ಕುಟುಂಬದ ಬೆಂಬಲದಿಂದಾಗಿ ತಾಯಿಯಾದ ನಾಲ್ಕೇ ತಿಂಗಳಲ್ಲಿ ಮತ್ತೆ ತಮಗೆ ಕ್ರೀಡೆಯತ್ತ ಗಮನಹರಿಸಲು ಸಾಧ್ಯವಾಗಿದೆ ಎಂದು 31 ವರ್ಷದ ದೀಪಿಕಾ ಹೇಳಿದ್ದಾರೆ. ಅವರು ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆಯೂ ಆಗಿದ್ದಾರೆ.

    ಕಿರಿಯರ ವಿಶ್ವಕಪ್ ವಿಜೇತ ತಂಡದ 8 ಆಟಗಾರರು ಐಪಿಎಲ್ ಹರಾಜಿಗೆ ಅರ್ಹರಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts