More

    ಪಾಡ್ಯದಂದು ವಿಠಲ ದರ್ಶನ ಪಡೆದ ಭಕ್ತರು

    ಉಮದಿ: ಮಹಾರಾಷ್ಟ್ರ ಸರ್ಕಾರ ಮಂದಿರ ಹಾಗೂ ಪ್ರಾರ್ಥನಾ ಸ್ಥಳಗಳ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡುತ್ತಿದ್ದಂತೆ ಸೋಮವಾರ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಪಂಢರಪುರದ ವಿಠ್ಠಲ-ರುಕ್ಮಿಣಿ ದರ್ಶನ ಪಡೆದು ಪುನೀತರಾದರು.
    ಕರೊನಾ ನಿಯಂತ್ರಣ ಹಿನ್ನೆಲೆ 8 ತಿಂಗಳಿಂದ ವಿಠ್ಠಲ-ರುಕ್ಮಿಣಿ ದರ್ಶನವನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿತ್ತು. ದೀಪಾವಳಿ ಪಾಡ್ಯ ನಿಮಿತ್ತ ವಿಠ್ಠಲ- ರುಕ್ಮಿಣಿ ದೇವರ ಮೂರ್ತಿ ಹಾಗೂ ಮಂದಿರವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ವಿಠ್ಠಲ-ರುಕ್ಮಿಣಿ ದರ್ಶನ ಪಡೆದರು.
    ಮಂದಿರಕ್ಕೆ ಭೇಟಿ ನೀಡಿದ ಭಕ್ತರು ಕೋವಿಡ್ ನಿಯಮ ಪಾಲನೆಯೊಂದಿಗೆ ದೇವರ ದರ್ಶನ ಪಡೆದರು ಎಂದು ಮಂದಿರ ಸಮಿತಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts