More

    ಸೋಷಿಯಲ್​​ ಮೀಡಿಯಾದಲ್ಲಿ ‘DINKS’ ಟ್ರೆಂಡ್​​​; ‘ಡಬಲ್​ ಇನ್​​ಕಮ್​​ ನೋ ಕಿಡ್ಸ್’ ಪರ-ವಿರೋಧದ ಚರ್ಚೆ..! ‘DINKS’ ದಂಪತಿ ಬಳಿಯೇ ಹೆಚ್ಚು ನೆಟ್​​ ವರ್ತ್​​, ಸೇವಿಂಗ್ಸ್​​, ಇನ್ವೆಸ್ಟ್​​ಮೆಂಟ್​​..!

    ಅಮೆರಿಕದಲ್ಲಿ ಕಳೆದ 10 ದಶಕಗಳ ಹಿಂದಿದ್ದ ಜನನ ಪ್ರಮಾಣ ಕುಸಿಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅಮೆರಿಕದಲ್ಲಿ ಕಳೆದ ಕೆಲ ತಿಂಗಳ ಹಿಂದಿನಿಂದಲೂ DINKS ಟ್ರೆಂಡ್​​ ಪ್ರಾರಂಭವಾಗಿದೆ. ಅಮೆರಿಕದಲ್ಲಿ ನಡೆದ 2021 ರ ಪ್ಯೂ ರಿಸರ್ಚ್​​ ವರದಿಯ ಪ್ರಕಾರ, ಫಲವತ್ತತೆಯ ದರ ಕಡಿಮೆಯಾಗುತ್ತಿದೆ.

    ಹಾಗಾಗಿ ಮದುವೆಯಾದ ನವ ದಂಪತಿಗಳು DINKS ಅಂತ್ಹೇಳಿ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚಾಗಿ ಟಿಕ್​-ಟಾಕ್​ನಲ್ಲಿ ಡಬಲ್​ ಇನ್​ಕಮ್​​​ ನೋ ಕಿಡ್ಸ್​​ ಅನ್ನುವಂತಹ ವಿಡಿಯೋಗಳನ್ನ ಪೋಸ್ಟ್​​​ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರೂ ಜತೆಯಾಗಿ ಮದುವೆಯ ಬಳಿಕ ದುಡಿಯೋಣ. ನಮಗೆ ಬೇಕಾದಂತೆ ದೇಶ-ವಿದೇಶಕ್ಕೆ ಟ್ರಿಪ್​​ ಮಾಡೋಣ, ಮನೆ ಕಟ್ಟಿಕೊಳ್ಳೋಣ, ಇನ್ವೆಸ್ಟ್​​ಮೆಂಟ್​​ ಮಾಡೋಣ. ನಮಗೆ ಹುಟ್ಟುವ ಮಕ್ಕಳಿಗೆ ಖರ್ಚು ಮಾಡೋ ಹಣವನ್ನ ನಾವಿಬ್ಬರೂ ದುಡಿದಲ್ಲಿ ಅದು ಡಬಲ್​ ಇನ್​​ಕಮ್​ನಂತೆ ಪರಿಗಣಿಸಲಾಗುತ್ತೆ. ಹಾಗಾಗಿ ಮಕ್ಕಳಿಗೆ ಖರ್ಚು ಮಾಡುವ ದುಡ್ಡನ್ನ ನಾವೇ ಬಳಸೋಣ ಅನ್ನೋದು ಈ ವಿಡಿಯೋದ ಸಂದೇಶವಾಗಿದೆ.

    ಅಮೆರಿಕನ್ನರು ಈ ವಿಡಿಯೋಗಳನ್ನ ಟಿಕ್​-ಟಾಕ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಅದು ಮಿಲಿಯನ್​​ ಗಟ್ಟಲೆ ವೀಕ್ಷಣೆಯನ್ನ ಪಡೆದುಕೊಂಡಿದ್ದು, ಕೆಲವರು ಈ ಟ್ರೆಂಡ್​​ಗೆ ಮೆಚ್ಚುಗೆಯನ್ನ ಸೂಚಿಸಿದ್ದಾರೆ. ಇನ್ನೂ ಹಲವರು ಇದು ವೈಜ್ಞಾನಿಕವಾಗಿ ಮನುಷ್ಯ ಅಳಿವಿಗೆ ಮೊದಲ ಹೆಜ್ಜೆ ಎಂದು ಕಾಮೆಂಟ್​​​ಗಳನ್ನ ಮಾಡುತ್ತಿದ್ದಾರೆ.

    ಸದ್ಯ ಕರ್ನಾಟಕದಲ್ಲೂ ಈ ವಿಡಿಯೋ ಟ್ರೆಂಡಿಂಗ್​ನಲ್ಲಿದ್ದು, DINKWAD ಅಂದ್ರೆ ಡಬಲ್ ಇನ್​ಕಮ್​ ನೋ ಕಿಡ್ಸ್​​​ ವಿದ್​​ ಎ ಡಾಗ್​​ ಅಂತಲೂ ಕೆಲವರು ಹ್ಯಾಶ್​ಟ್ಯಾಗ್​ ಬಳಸಿ ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಕ್ಕಳಿಗಿಂತ ಶ್ವಾನಗಳನ್ನ ಸಾಕೋದೆ ಉತ್ತಮವೆಂದು ಹೇಳುತ್ತಿದ್ದಾರೆ. ಜತೆಗೆ DINKWAH ಅಂದ್ರೆ ಡಬಲ್ ಇನ್​ಕಮ್​ ನೋ ಕಿಡ್ಸ್​​​ ವಿದ್​​ ಎ ಹೌಸ್​​ ಎಂಬ ಟ್ರೆಂಡನ್ನೂ ಫಾಲೋ ಮಾಡುತ್ತಿದ್ದಾರೆ ಅನೇಕ ದಂಪತಿಗಳು. ಇನ್ನೂ ಸಾಕಷ್ಟು ಮಂದಿ ಮಕ್ಕಳಿಲ್ಲದ ಜೀವನ ಯಾರಿಗೂ ಬೇಡ.

    ಇದನ್ನ ಫಾಲೋ ಮಾಡಿದ್ರೆ ಹೆಚ್ಚು ಸೇವಿಂಗ್ಸ್​​ ಮಾಡಬಹುದು..!
    ಟಿಕ್​-ಟಾಕ್​, ಇನ್ಸ್​​ಟಾಗ್ರಾಂ, ಫೇಸ್ಬುಕ್​ನಲ್ಲಿ ಈ ಟ್ರೆಂಡ್​ ಹೆಚ್ಚಾಗಿದ್ದು, ಸದ್ಯ ಅಮೆರಿಕದಲ್ಲಿ ಪ್ರಾರಂಭವಾದ ಈ ಟ್ರೆಂಡ್​ನಿಂದ ಮದೆವೆಯಾದ ನವದಂಪತಿಗಳು ಇಬ್ಬರೂ ದುಡಿದು ಹೆಚ್ಚು ಸೇವಿಂಗ್ಸ್​​, ಇನ್ವೆಸ್ಟ್​​ಮೆಂಟ್​​, ಸಂಪಾದನೆ ಎಲ್ಲವೂ ದುಪ್ಪಟ್ಟಾಗಿದೆ ಎಂದು ಅಲ್ಲಿ ನಡೆಸಿದ ರಿಸರ್ಚ್​​ ಮೂಲಕ ವರದಿಯಾಗಿದೆ.

    ಆದರೆ ಅಮೆರಿಕದಲ್ಲಿ 57 ಪ್ರತಿಶತ ವಿವಾಹಿತ ಮತ್ತು ಮಕ್ಕಳಿಲ್ಲದ ದಂಪತಿಗಳಿಗೆ ಹೋಲಿಸಿದರೆ 63 ಪ್ರತಿಶತ ವಿವಾಹಿತ ಪೋಷಕರು ತಮ್ಮ ಮದುವೆಯ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts