More

    ಗಣಿತ, ವಿಜ್ಞಾನ ಗುರುವಿಗೆ ಅರ್ಹ ಗೌರವ, ಉಡುಪಿ ದಿನೇಶ್ ಶೆಟ್ಟಿಗಾರ್‌ಗೆ ರಾಜ್ಯಮಟ್ಟದ ಪ್ರಶಸ್ತಿ

    ಉಡುಪಿ: ಗಣಿತ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಜಿಲ್ಲೆಯಲ್ಲೇ ಮಾದರಿ ಶಿಕ್ಷಕರೆಂದು ಗುರುತಿಸಿಕೊಂಡಿರುವ ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕ ದಿನೇಶ್ ಶೆಟ್ಟಿಗಾರ್ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
    ಪರ್ಕಳದವರಾದ ದಿನೇಶ್ ಶೆಟ್ಟಿಗಾರ್ ಅವರು ವಿಠಲ ಶೆಟ್ಟಿಗಾರ್ – ಮೀನಾಕ್ಷಿ ದಂಪತಿ ಪುತ್ರ.

    32 ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಹಿರಿಯಡಕ ಜ್ಯೂನಿಯರ್ ಕಾಲೇಜಿನಲ್ಲಿ ವೃತ್ತಿ ಆರಂಭಿಸಿದ್ದರು. ಬಳಿಕ ಅಜೆಕಾರು ಜ್ಯೋತಿ ಹೈಸ್ಕೂಲು, ಮಣಿಪಾಲ ಪಿಯು ಕಾಲೇಜು, 1996ರಿಂದ ಹೆಬ್ರಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಇವರ ಮಾರ್ಗದರ್ಶನದಲ್ಲಿ ಈ ಶಾಲೆಯ ಮಕ್ಕಳು 1998ರಿಂದ 2019ರವರೆಗೆ ನಿರಂತರವಾಗಿ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸುವ ಮೂಲಕ ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದೇ ವರ್ಷ ಶಾಲೆಯಲ್ಲಿ ಗಣಿತ ಪ್ರಯೋಗಾಲಯ ಸ್ಥಾಪಿಸಿರುವ ಇವರು, ಸ್ವಂತ ಖರ್ಚಿನಿಂದ ತಯಾರಿಸಿದ ಗಣಿತದ ಕೆಲವು ಮಾದರಿಗಳು, ಮಕ್ಕಳು ಸಿದ್ಧಪಡಿಸಿದ ಮಾದರಿಗಳು ಮತ್ತು ಸರ್ಕಾರ ನೀಡಿದ ಮಾದರಿಗಳನ್ನು ಇಲ್ಲಿ ಇರಿಸಿದ್ದಾರೆ. ವಿಜ್ಞಾನ ಪರಿಷತ್ ಉಡುಪಿ ಜಿಲ್ಲಾ ಸಂಯೋಜಕರಾಗಿದ್ದಾರೆ. ಶಿಕ್ಷಣ ಇಲಾಖೆ ಸೇರಿದಂತೆ ಹಲವು ಸಂಘ, ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

    ಪ್ರಶಸ್ತಿಯಿಂದ ಖುಷಿಯ ಜತೆಗೆ ಜವಾಬ್ದಾರಿ ಜಾಸ್ತಿಯಾಗಿದೆ. ಶಿಕ್ಷಕ ವೃತ್ತಿ ಜೀವನ ಅತ್ಯಂತ ಸಂತಸ ನೀಡಿದೆ. ಗಣಿತ, ವಿಜ್ಞಾನಕ್ಕೆ ಸಂಬಂಧಿಸಿ ಚಟುವಟಿಕೆ ಆಧರಿತ ಕಲಿಕೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುತ್ತದೆ. ಇದರಿಂದ ಹೆಚ್ಚೆಚ್ಚು ತಿಳಿಯುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಮಕ್ಕಳ ಉತ್ತಮ ಭವಿಷ್ಯಕ್ಕೆ ಇದು ಬುನಾದಿಯಾಗಲಿದೆ.
    – ದಿನೇಶ್ ಶೆಟ್ಟಿಗಾರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts