More

    ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿ ತಿಳಿಸಲು ಡಿಜಿಟಲ್ ಕೃತಿ ಸಹಕಾರಿ: ಡಾ.ವಿಜಯ ಸಂಕೇಶ್ವರ

    ಬೆಂಗಳೂರು: ರಾಷ್ಟ್ರೀಯ ವಿಚಾರಧಾರೆಯನ್ನು ಜನರಿಗೆ ತಲುಪಿಸುವಲ್ಲಿ ನಿರತವಾಗಿರುವ ರಾಷ್ಟ್ರೋತ್ಥಾನ ಸಾಹಿತ್ಯ ವಿಭಾಗವು ತನ್ನ ಪ್ರಕಟಣೆಗಳಿಗೆ ಡಿಜಿಟಲ್ ರೂಪ ನೀಡಿದೆ. ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಉತ್ತೇಜಿಸಲು ಮೊದಲ ಕಂತಿನಲ್ಲಿ ತನ್ನ 75 ಕೃತಿಗಳ ಡಿಜಿಟಲ್ ಆವೃತ್ತಿಯನ್ನು ಹೊರತಂದಿದೆ.

    ನಗರದ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 75 ಕೃತಿಗಳ ಡಿಜಿಟಲ್ ಆವೃತ್ತಿಯನ್ನು ವಿಆರ್‌ಎಲ್ ಗ್ರೂಪ್ ಚೇರ್‌ಮನ್ ಡಾ.ವಿಜಯ ಸಂಕೇಶ್ವರ ಅವರು ಲೋಕಾರ್ಪಣೆ ಮಾಡಿದರು.

    ಈ ವೇಳೆ ಮಾತನಾಡಿದ ಡಾ.ವಿಜಯ ಸಂಕೇಶ್ವರ, ಈಗಿನ ಯುವಪೀಳಿಗೆಗೆ ಕೈಯಲ್ಲಿ ಪುಸ್ತಕ ಓದುವಿಕೆಗಿಂತ ಡಿಜಿಟಲ್ ರೂಪದ ಓದು ಹೆಚ್ಚು ಆಪ್ತವಾಗುತ್ತಿದೆ. ಇದರಿಂದ ಡಿಜಿಟಲ್ ಮಾಧ್ಯಮ ಮುನ್ನೆಲೆಗೆ ಬಂದಿದ್ದು, ಈ ತಂತ್ರಜ್ಞಾನವನ್ನು ಬಳಸಿಕೊಂಡು ಸಣ್ಣ ಪ್ರಕಾಶನಗಳು ತಮ್ಮ ಕೃತಿಗಳನ್ನು ಡಿಜಿಟಲ್ ರೂಪದ ಮೂಲಕ ವಿಶ್ವದ ಮೂಲೆಮೂಲೆಗೂ ತಲುಪಿಸುವಲ್ಲಿ ನಿರತವಾಗಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ವಿದೇಶಿಯರಿಗೆ ತಿಳಿಸಿಕೊಡಲು ಡಿಜಿಟಲ್ ಮಾಧ್ಯಮ ಸಹಕಾರಿಯಾಗಲಿದೆ. ಇದಲ್ಲದೆ ಕನ್ನಡದ ಕೃತಿಗಳು ಪುಸ್ತಕದ ರೂಪದ ಜತೆಗೆ ಇಂಗ್ಲಿಷ್ ಸಹಿತ ಹಲವು ಭಾಷೆಗಳಿಗೆ ಅನುವಾದಿಸಿದ್ದಲ್ಲಿ ದೊಡ್ಡ ಮಟ್ಟದ ಓದುಗ ಬಳಗವನ್ನು ತಲುಪಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

    ಸಾವಿನ ನಿಗೂಢತೆ ಭೇದಿಸುವ ಕೃತಿ ಹೊರಬರಲಿ

    ದೇಶದ ಹಲವು ಮಹಾಪುರುಷರ ಸಾವಿನ ಕುರಿತು ಜನರಲ್ಲಿ ಕುತೂಹಲ ಇದೆ. ಶ್ಯಾಮಪ್ರಸಾದ್ ಮುಖರ್ಜಿ, ಸುಭಾಷ್‌ಚಂದ್ರ ಬೋಸ್, ತಿಲಕ್ ಅವರಂಹ ರಾಷ್ಟ್ರಭಕ್ತರ ಸಾವಿನ ನೈಜ ಘಟನೆ ಹಾಗೂ ಮಾಹಿತಿಯನ್ನು ತಿಳಿಯಲು ದೇಶವಾಸಿಗಳು ಕಾತುರರಾಗಿದ್ದಾರೆ. ಈ ಕಾರ್ಯವನ್ನು ಯಾರಾದರೂ ಆಸಕ್ತಿ ವಹಿಸಿ ಕೃತಿರೂಪಕ್ಕೆ ಇಳಿಸುವ ಯತ್ನ ಮಾಡಬೇಕಿದೆ ಎಂದು ಡಾ.ವಿಜಯ ಸಂಕೇಶ್ವರ ಸಲಹೆ ನೀಡಿದರು.

    ಇದೇ ವೇಳೆ ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ-2022’ ನಿಮಿತ್ತ ಆಯೋಜಿಸಿದ್ದ ‘ಸಾಹಿತ್ಯ, ಪತ್ರಿಕಾಕ್ಷೇತ್ರ, ಸ್ವಾತಂತ್ರ್ಯ ಹೋರಾಟಕ್ಕೆ ತಿ.ತಾ.ಶರ್ಮರ ಕೊಡುಗೆ’ ಕುರಿತು ಲೇಖಕ ಡಾ.ಬಾಬು ಕೃಷ್ಣಮೂರ್ತಿ ಅವರು ಉಪನ್ಯಾಸವನ್ನು ನಡೆಸಿಕೊಟ್ಟರು. ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಹಾಜರಿದ್ದರು.

    ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿ ತಿಳಿಸಲು ಡಿಜಿಟಲ್ ಕೃತಿ ಸಹಕಾರಿ: ಡಾ.ವಿಜಯ ಸಂಕೇಶ್ವರ

    ಉದ್ಯಮಿ ಸೈರಸ್​ ಮಿಸ್ತ್ರಿ ಸಾವು; ಲೇಡಿ ಡಾಕ್ಟರ್​ ವಿರುದ್ಧ ಕೇಸ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts