More

    ಗ್ರಂಥಾಲಯ ಸೇವೆಯಲ್ಲಿ ಮಂಡ್ಯಕ್ಕೆ ಎರಡನೇ ಸ್ಥಾನ: ಜಿಪಂ ಉಪಕಾರ್ಯದರ್ಶಿ ಎಂ.ಬಾಬು ಶ್ಲಾಘನೆ

    ಮಂಡ್ಯ: ಡಿಜಿಟಲ್ ಗ್ರಂಥಾಲಯದ ಸೇವೆಯಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು ಹೇಳಿದರು.
    ಫೆ.21ರಿಂದ 25ರವರೆಗೆ ಗದಗದಲ್ಲಿ ಆಯೋಜಿಸಿರುವ ತರಬೇತಿಗೆ ಆಯ್ಕೆಯಾಗಿರುವ ಜಿಲ್ಲೆಯ ಆಯ್ದ 54 ಗ್ರಂಥಾಲಯ ಮೇಲ್ವಿಚಾರಕರ ಪ್ರವಾಸಕ್ಕೆ ನಗರದ ಜಿಪಂ ಕಚೇರಿ ಎದುರು ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಗ್ರಂಥಾಲಯದಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವುದರ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವುದಕ್ಕೆ ಸಹಕಾರವಾಗುವಂತೆ ತರಬೇತಿ ಅವಧಿಯನ್ನು ಸಾರ್ಥಕ ಪಡಿಸಿಕೊಳ್ಳಿ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಉತ್ತಮವಾದ ಸೇವೆಯನ್ನು ನೀಡಬೇಕಾದರೆ ನಿರ್ವಹಣೆ ಹಾಗೂ ಕಂಪ್ಯೂಟರ್ ತರಬೇತಿಯ ಅವಶ್ಯಕತೆ ಇದೆ ಎಂದು ಹೇಳಿದರು.
    ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯ ಬಹುಪಾಲು ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಾಗಿ ಪರಿವರ್ತನೆಗೊಂಡಿದೆ. ಇದು ಇಲಾಖೆಯ ಅಧಿಕಾರಿಗಳಿಂದ ಪ್ರಶಂಸೆಗೆ ಒಳಪಟ್ಟಿದ್ದು, ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಗ್ರಾಮೀಣ ಯುವ ಜನರಿಗೆ ಬದುಕು ರೂಪಿಸುವಂತಹ ಸೇವೆಯನ್ನು ನೀಡಬೇಕಿದೆ ಎಂದರು.
    ಒಂಬುಡ್ಸ್‌ಮನ್ ಬೋರಯ್ಯ, ರಾಜ್ಯ ಮೇಲ್ವಿಚಾರಕ ಶ್ರೀರಾಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೂಡಲಕುಪ್ಪೆ ಸೋಮಶೇಖರ್, ಕಾರ್ಯದರ್ಶಿ ಅನಿತಾ, ಶತಾಜ್ ಬೇಗಂ, ರಾಜಣ್ಣ, ಗದ್ದೆಗೌಡ, ದುದ್ದ ರಮೇಶ್, ಭಾರತಿ, ತಮ್ಮಣ್ಣ ಶೆಟ್ಟಿ, ಪ್ರಸನ್ನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts