More

    ದಿಗ್ವಿಜಯ್ ಸಿಂಗ್, ಜ್ಯೋತಿರಾದಿತ್ಯ ಮೇಲ್ಮನೆಗೆ

    ನವದೆಹಲಿ: ರಾಜ್ಯಸಭೆಗೆ ಹತ್ತು ರಾಜ್ಯಗಳಿಂದ ಶುಕ್ರವಾರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್​ನ ನಾಯಕ ದಿಗ್ವಿಜಯ ಸಿಂಗ್, ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ ಸಹಿತ ಹಲವು ಪ್ರಮುಖರು ಗೆಲುವು ಸಾಧಿಸಿದ್ದಾರೆ. ಸಿಂಗ್ ಮತ್ತು ಸಿಂಧಿಯಾ ಮಧ್ಯಪ್ರದೇಶದಿಂದ ಆಯ್ಕೆಯಾಗಿದ್ದಾರೆ. ಬಿಜೆಪಿಯ ಇನ್ನೊಬ್ಬ ಅಭ್ಯರ್ಥಿ ಸುಮೇರ್ ಸಿಂಗ್ ಸೋಳಂಕಿ ಕೂಡ ಜಯ ಸಾಧಿಸಿದ್ದಾರೆ. ಇದು ಸಿಂಗ್​ಗೆ ಸತತ ಎರಡನೇ ಗೆಲುವಾದರೆ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸಿಂಧಿಯಾ ಇದೇ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಜಯ ದಾಖಲಿಸಿದ್ದು ಪ್ರತಿಪಕ್ಷ ಬಿಜೆಪಿ ಒಂದರಲ್ಲಿ ಗೆದ್ದಿದೆ. ಕಾಂಗ್ರೆಸ್​ನ ಕೆ.ಸಿ. ವೇಣುಗೋಪಾಲ್ ಮತ್ತು ನೀರಜ್ ಡಾಂಗಿ, ಬಿಜೆಪಿಯ ರಾಜೇಂದ್ರ ಗೆಹ್ಲೊಟ್ ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದರು.

    ಗುಜರಾತ್​ನಲ್ಲಿ ಫಲಿತಾಂಶ ವಿಳಂಬ: ಚುನಾವಣೆ ನಡೆದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಗುಜರಾತ್​ನಲ್ಲಿ ಫಲಿತಾಂಶ ಪ್ರಕಟಣೆ ವಿಳಂಬಗೊಂಡಿದೆ. ಬಿಜೆಪಿಯ ಇಬ್ಬರು ಶಾಸಕರ ಮತಗಳನ್ನು ವಿವಿಧ ಕಾರಣಗಳಿಗೆ ಅಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿರುವುದೇ ಇದಕ್ಕೆ ಕಾರಣ.

    ಇದನ್ನೂ ಓದಿ: ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ: ಇತರ 400 ವಿದ್ಯಾರ್ಥಿಗಳಿಗೆ ಆತಂಕ!

    ಶಿಬು ಸೊರೇನ್​ಗೆ ಗೆಲುವು: ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಧ್ಯಕ್ಷ ಶಿಬು ಸೊರೇನ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್ ಜಾರ್ಖಂಡ್​ನಲ್ಲಿ ಗೆಲುವು ದಾಖಲಿಸಿದ್ದಾರೆ. ಮೇಘಾಲಯದಿಂದ ಏಕೈಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಳುವ ಮೇಘಾಲಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಅಭ್ಯರ್ಥಿ ವಾನ್​ವೀ ರಾಯ್ ಖರ್​ಲುಖಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಆಯೋಗ ಘೋಷಿಸಿದೆ.

    VIDEO: ಕೋವಿಡ್19 ಸೋಂಕು ಮುಕ್ತಳಾದ ಯುವತಿಯ ಮನದ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts