More

    ಊಹಿಸಿಕೊಳ್ಳಲೂ ಅಸಾಧ್ಯ, 2 ವರ್ಷಗಳ ಬಳಿಕ ಪತ್ತೆಯಾದ ಮಹಿಳೆಯ ಮೃತದೇಹದ ಮರಣೋತ್ತರ ವರದಿಯಲ್ಲಿತ್ತು ಕರಾಳ ಸತ್ಯ!

    ಲಂಡನ್​: ಬರೋಬ್ಬರಿ ಎರಡು ವರ್ಷಗಳ ಬಳಿಕ ಪತ್ತೆಯಾಗಿದ್ದ ಮಹಿಳೆಯ ಮೃತದೇಹದ ಮರಣೋತ್ತರ ವರದಿಯಲ್ಲಿ ಆಘಾತಕಾರಿ ಅಂಶ ಬಯಲಾಗಿದೆ. ಫೆಬ್ರವರಿಯಲ್ಲಿ 58 ವರ್ಷ ವಯಸ್ಸಿನ ಶೀಲಾ ಸೆಲಿಯೋನೆ ಎಂಬ ಮಹಿಳೆಯ ಮೃತದೇಹದ ಅವಶೇಷ ದೊರೆತಿತ್ತು, ಬಳಿಕ ಇದನ್ನು ಮರಣೋತ್ತರ ವರದಿಗೆ ರವಾನಿಸಲಾಗಿತ್ತು.

    ಸೋಫಾ ಮೇಲೆ ಕುಳಿತಿರುವಂತೆಯೇ ಮಹಿಳೆ ಮೃತಪಟ್ಟಿದ್ದು, ಈಕೆ ಮೃತಪಟ್ಟು ವರ್ಷಗಳು ಕಳೆದಿದ್ದರಿಂದ ದೇಹದಲ್ಲಿ ಮೂಳೆಗಳಷ್ಟೇ ಉಳಿದಿತ್ತು. ಅವುಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದಾಗಲೇ ಸತ್ಯ ಬಯಲಾಗಿದೆ. ಈಕೆಯ ಹಲ್ಲುಗಳಿಂದಲೇ ಈಕೆ ಮೃತಪಟ್ಟು 2 ವರ್ಷಗಳೇ ಆಗಿದೆ ಎಂಬ ಆಘಾತಕಾರಿ ವಿಷಯ ತಿಳಿದುಬಂದಿದೆ. ಅಲ್ಲದೇ ಈಕೆ ಕಾಯಿಲೆಯಿಂದಲೂ ಬಳಲುತ್ತಿದ್ದಳು ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಸದ್ಯ ಈಕೆಯ ಮೃತದೇಹವನ್ನು ಫೆಬ್ರವರಿಯಲ್ಲೇ ಪತ್ತೆ ಹಚ್ಚಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಈಗ ಹೊರಬಿದ್ದಿದೆ. ಇದರಲ್ಲಿ ಮಹಿಳೆ ಮೃತಪಟ್ಟು ಎರಡು ವರ್ಷಗಳೇ ಕಳೆದಿತ್ತು ಎಂದು ತಿಳಿಸಲಾಗಿದೆ. ಸದ್ಯ ಈ ವರದಿಯನ್ನು ಲಂಡನ್​ನ ಸೌತ್​ ಕರೋನರ್​ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಈಕೆ ಕರುಳಿನ ಉರಿಯೂತದಿಂದ ಬಳಲುತ್ತಿದ್ದರು ಇದರಿಂದಲೇ ಸಾವನ್ನಪ್ಪಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

    ಯಾವುದೇ ಸಾವು ದುಃಖಕರವಾಗಿದ್ದು, ಈಕೆಯ ಸಾವು ತುಂಬಾ ಆಘಾತಕಾರಿಯಾಗಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸುತ್ತಿದ್ದೇವೆ ಎಂದು ನ್ಯಾಯಾಧೀಶರು ಪ್ರಕರಣವನ್ನು ಅಂತ್ಯಗೊಳಿಸಿದರು. (ಏಜೆನ್ಸೀಸ್​)

    ಮದುವೆ ನಂತರವೂ ದುಪ್ಪಟ್ಟಾಯ್ತು ನಯನತಾರಾ ಸಂಭಾವನೆ: ಮತ್ತೆ ಟಾಪ್​ 1 ನಟಿ ಎನಿಸಿಕೊಳ್ಳಲಿದ್ದಾರಾ ಲೇಡಿ ಸೂಪರ್​ಸ್ಟಾರ್​?

    ನನಗೆ ಇದೊಂದೇ ಪಾತ್ರದಲ್ಲಿ ನಟಿಸಲು ಅವಕಾಶ ಸಿಗುತ್ತೆ, ದಯವಿಟ್ಟು ಒಂದೊಳ್ಳೆ ಅವಕಾಶ ಕೊಡಿ ಎಂದ ರಾಖಿ ಸಾವಂತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts