More

    ಉಚಿತವಾಗಿ ಲಸಿಕೆ ಒದಗಿಸಿ ಎಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ದೀದಿ ಸರ್ಕಾರ

    ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರ ವಹಿಸಿಕೊಂಡಿರುವ ಮಮತಾ ಬ್ಯಾನರ್ಜಿ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಏಕರೂಪದ ವ್ಯಾಕ್ಸಿನೇಷನ್ ನೀತಿ ರೂಪಿಸಿ, ಎಲ್ಲಾ ರಾಜ್ಯಗಳಿಗೆ ಕೂಡಲೇ ಕರೊನಾ ಲಸಿಕೆಯನ್ನು ಉಚಿತವಾಗಿ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿದೆ.

    ಲಸಿಕಾ ಅಭಿಯಾನದ ನಾಲ್ಕನೇ ಹಂತವಾಗಿ ಜಾರಿಯಾದ ‘ಭೇದಾತ್ಮಕ ಬೆಲೆ ವ್ಯವಸ್ಥೆ’ಯನ್ನು ರದ್ದುಗೊಳಿಸುವಂತೆ ಕೇಳಿರುವ ರಿಟ್​ ಅರ್ಜಿಯನ್ನು ಬಂಗಾಳ ಸರ್ಕಾರ ಸಲ್ಲಿಸಿದೆ. ಇದರಲ್ಲಿ ಕೇಂದ್ರವು ರಾಜ್ಯಗಳಿಗೆ ಕರೊನಾ ಲಸಿಕೆಗಳು ಕೂಡಲೇ ಲಭ್ಯವಾಗುವಂತೆ ಮತ್ತು ಅವುಗಳನ್ನು ಯಾವುದೇ ಹಣ ಪಡೆಯದೆ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ. ಈ ಅರ್ಜಿಯು ಬರುವ ಸೋಮವಾರ ಕೋರ್ಟ್​ ಮುಂದೆ ವಿಚಾರಣೆಗೆ ಬರಲಿದೆ ಎನ್ನಲಾಗಿದೆ.

    ಇದನ್ನೂ ಓದಿ: ಕಾರಿನಲ್ಲೇ ಕೂತು ಲಸಿಕೆ ಪಡೆಯಿರಿ ! ಪ್ರತಿ ವಲಯದಲ್ಲೂ ಡ್ರೈವ್​ಇನ್ ಲಸಿಕಾ ಕೇಂದ್ರಗಳ ಸ್ಥಾಪನೆ

    ಲಸಿಕಾ ಅಭಿಯಾನದ ನಾಲ್ಕನೇ ಚರಣದಲ್ಲಿ ದೇಶದಲ್ಲಿ ಉತ್ಪಾದನೆಯಾದ ಶೇ. 50 ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸಿ ಅಗತ್ಯಕ್ಕೆ ಅನುಗುಣವಾಗಿ ರಾಜ್ಯಗಳಿಗೆ ವಿತರಿಸುವುದು. ಉಳಿದ ಶೇ. 50 ರಷ್ಟು ಲಸಿಕೆಗಳಲ್ಲಿ ರಾಜ್ಯ ಸರ್ಕಾರಗಳು ಹೆಚ್ಚಿನ ಲಸಿಕೆ ಖರೀದಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬಹುದು. ಈ ವ್ಯವಸ್ಥೆಯ ಪ್ರಕಾರ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್​ಗೆ 150 ರೂ.ಗಳಿಗೆ ಎರಡೂ ಕರೊನಾ ಲಸಿಕೆಗಳು ಲಭ್ಯವಾದರೆ, ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್​ 300 ರೂ. ದರದಲ್ಲಿ ಮತ್ತು ಕೋವಾಕ್ಸಿನ್ 400 ರೂ. ದರದಲ್ಲಿ ಲಭ್ಯವಾಗಲಿದೆ. (ಏಜೆನ್ಸೀಸ್)

    ಪರಿಣಾಮಕಾರಿ ಕ್ರಮ ತೆಗೆದುಕೊಂಡರೆ ಮೂರನೇ ಅಲೆ ತಡೆಯಬಹುದು : ಡಾ.ವಿಜಯರಾಘವನ್

    ಕರೊನಾದಿಂದ ಚೇತರಿಸಿಕೊಂಡ ಮೇಲೆ ಟೂತ್​ಬ್ರಶ್​ ಬದಲಿಸಿ : ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts