More

    ‘ನಾನು ಬಂಗಾಳಿ ಮಾತನಾಡುವುದರ ಬಗ್ಗೆಯೂ ದೀದಿ ಸಿಟ್ಟಾಗ್ತಿದ್ದಾರೆ’ : ಮೋದಿ

    ಕೊಲ್ಕತಾ: ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ರಾಷ್ಟ್ರೀಯ ಪಕ್ಷವಾದ ಬಿಜೆಪಿ ನಡುವೆಯೇ ಬಹುತೇಕ ಹಣಾಹಣಿ ಉಂಟಾಗಿದೆ. ಈ ಸಮಯದಲ್ಲಿ ಮಮತಾ ಅವರ ನೇತೃತ್ವದಲ್ಲಿ ಟಿಎಂಸಿ ನಾಯಕರೆಲ್ಲಾ ಬಿಜೆಪಿಯವರು ಬಂಗಾಳಕ್ಕೆ ಹೊರಗಿನವರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ನಾಡಿನ ಮಗಳನ್ನೇ ಚುನಾಯಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ.

    ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ವರಿಷ್ಠರು ದೀದಿ ಅವರು ರಾಜ್ಯದಲ್ಲಿ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವುದಾಗಿ ಟೀಕಿಸುತ್ತಾ, ಬಿಜೆಪಿಯೇ ಬಂಗಾಳಕ್ಕಿರುವ ಉತ್ತಮ ಆಯ್ಕೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಹಲವಾರು ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿರುವ ಮೋದಿ ಅವರು, ಬಂಗಾಳಿ ಭಾಷೆಯ ಶಬ್ದ ಮತ್ತು ವಾಕ್ಯಗಳನ್ನು ತಮ್ಮ ಮಾತಿನಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಕ್ಷೇತ್ರದ ಮೇಲೆ ಕೈ ನಾಯಕರ ಕ್ರೂರ ದೃಷ್ಟಿ ಹಿನ್ನೆಲೆ ನಗರಸಭೆ ಚುನಾವಣೆ ಜವಾಬ್ದಾರಿ ವಹಿಸುವೆ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

    ಇದೀಗ ಟ್ವಿಟರ್​ನಲ್ಲೂ ಮೋದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸೋಲುವ ನಿರಾಸೆಯಲ್ಲಿ ಮಮತಾ ಬ್ಯಾನರ್ಜಿ ಅವರು ತಮ್ಮ ಮೇಲೆ ಬೈಗುಳಗಳ ಮಳೆ ಹರಿಸುತ್ತಿದ್ದಾರೆ. ಬಂಗಾಳದ ಜನರು ಈ ಬಗ್ಗೆ ದುಃಖಿತರಾಗಿದ್ದಾರೆ. ಬಂಗಾಳದ ಬಗ್ಗೆ ಯಾವ ರೀತಿಯ ಚಿತ್ರಣವನ್ನು ದೀದಿ ಪ್ರಸ್ತುತ ಪಡಿಸುತ್ತಿದ್ದಾರೆ ಅಂತ ದೇಶದಲ್ಲಿ ಮತ್ತು ಜಗತ್ತಿನಲ್ಲಿ ಚರ್ಚೆಯಾಗುತ್ತಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

    “ಇತ್ತೀಚೆಗೆ ನನ್ನ ಉಚ್ಚಾರಣೆಯ ಬಗ್ಗೆಯೂ ದೀದಿಗೆ ಆಕ್ಷೇಪಗಳಿವೆ” ಎಂದಿರುವ ಮೋದಿ ಅವರು, “ನನಗೆ ಗೊತ್ತಿದೆ, ನನ್ನ ಬಂಗಾಳಿ ಉಚ್ಚಾರಣೆಯಲ್ಲಿ ಹಲವು ದೋಷಗಳು ಉಂಟಾಗುತ್ತವೆ. ಆದಾಗ್ಯೂ ನಾನು ಬಂಗಾಳಿ ಶಬ್ದ, ಬಂಗಾಳಿ ವಾಕ್ಯಗಳನ್ನು ಹೇಳುತ್ತೇನೆ. ಏಕೆಂದರೆ ನಾನು ಬಂಗಾಳಿಯನ್ನು ತುಂಬಾ ಗೌರವಿಸುತ್ತೇನೆ. ದೀದಿ ಇದನ್ನು ಪ್ರೋತ್ಸಾಹಿಸಬೇಕು. ಆದರೆ ಅವರು ನನ್ನ ಈ ಪ್ರಯತ್ನದ ಬಗ್ಗೆಯೂ ಸಿಟ್ಟಾಗಿದ್ದಾರೆ” ಎಂದು ಪ್ರಧಾನಿ ಮೋದಿ ಇಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯಗೊಳಿಸಿ, ಅಲ್ಪಾವಧಿ ಲಾಕ್​ಡೌನ್ ವಿಧಿಸಿ : ಐಎಂಎ

    ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ, ಚೇನಬ್ ಬ್ರಿಡ್ಜ್​​ನ ಆರ್ಚ್​ ರೆಡಿ

    90 ಮತದಾರರಿದ್ದ ಬೂತ್​ನಲ್ಲಿ 171 ಮತ ಚಲಾವಣೆ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts