More

    ಆನೆಯ ಹಾಲಿನಲ್ಲಿ ಆಲ್ಕೋಹಾಲ್ ಇದ್ದು, ಮನುಷ್ಯರಿಗೆ ಒಳ್ಳೆಯದಲ್ಲ ಎಂಬುದು ನಿಜವೇ?

    ನವದೆಹಲಿ: ಹಾಲಿನ ಪೌಷ್ಠಿಕಾಂಶ ಮತ್ತು ಅದರ ಪ್ರಯೋಜನಗಳಿಂದಾಗಿ ಮಾನವ ಬಳಕೆಗೆ ಬಹು ಮುಖ್ಯವಾಗಿದೆ. ಇದರಲ್ಲಿ ಪ್ರೋಟೀನ್‌, ಅಮೈನೋ ಆಮ್ಲ, ಕ್ಯಾಲ್ಸಿಯಂ, ವಿಟಮಿನ್‌, ಖನಿಜ ಮತ್ತು ಕೊಬ್ಬಿನಾಂಶ ಸಮೃದ್ಧವಾಗಿರುತ್ತವೆ. ಮಗು ಮಾತ್ರ ತಾಯಿ ಎದೆ ಹಾಲು ಸೇವಿಸಿದರೆ ಮನುಷ್ಯ ಜೀವನ ಪರ್ಯಂತ ಹಸು, ಎಮ್ಮೆ, ಮೇಕೆ, ಕುರಿ, ಕತ್ತೆ ಮತ್ತಿತರ ಪ್ರಾಣಿಗಳ ಹಾಲನ್ನು ಸೇವಿಸುತ್ತಾನೆ. ಹೀಗಾಗಿಯೇ ಹಾಲು ಅಮೃತ ಸಮಾನ ಎಂದು ಪೂರ್ವಜರು ಹೇಳಿದ್ದು.
    ಇನ್ನು ಮನುಷ್ಯ ಕಾಡು ಪ್ರಾಣಿಗಳು, ಅದರಲ್ಲೂ ಆನೆಯ ಹಾಲು ಕುಡಿಯಬಹುದೇ? ಅದು ಏಕೆ ಸಾಕಷ್ಟು ವಿಶಿಷ್ಟವಾಗಿದೆ? ಮತ್ತು ಕೆಲವು ವಿಶೇಷ ಗುಣಲಕ್ಷಣಗಳನ್ನು ಹೊಂದಿದೆ ಎಂಬ ಬಗ್ಗೆ ತಿಳಿದುಕೊಳ್ಳೋಣ.

    ಇದನ್ನೂ ಓದಿ: ವಿಚಿತ್ರ ಹಾವು ಪತ್ತೆ; ಜನರು ಹೊಡೆಯಲು ಮುಂದಾದಾಗ ಕೇಳಿಸಿದ್ದು ಮಗುವಿನಂತೆ ಅಳುವ ಸದ್ದು, ನಂತರ…!

    ಸಂಶೋಧನೆಯೊಂದರ ಪ್ರಕಾರ ಆನೆಯ ಹಾಲನ್ನು ಕುಡಿಯುವುದು ಅಪಾಯಕಾರಿ. ಆನೆಯು ದಿನಕ್ಕೆ ಸರಾಸರಿ 150 ಕೆಜಿ ಆಹಾರ ತಿನ್ನುತ್ತದೆ. ಅಂತಹ ದೈತ್ಯ ಪ್ರಾಣಿಯಿಂದ ಉತ್ಪತ್ತಿಯಾಗುವ ಹಾಲು ಅಧಿಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ಮನುಷ್ಯ ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಆ ಹಾಲನ್ನು ಮಾನವನ ಕರುಳಿನಿಂದ ಹೀರಿಕೊಳ್ಳಲು ಸಾಧ್ಯವಿಲ್ಲ. ಇದೆಲ್ಲ ಒಂದೆಡೆಯಾದರೆ, ಮತ್ತೊಂದೆಡೆ ಆನೆಯ ಹಾಲಿನಲ್ಲಿ “ಆಲ್ಕೋಹಾಲ್‌” ಅಂಶ ಹೆಚ್ಚಿಗೆ ಇರುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಕಬ್ಬು ಹೆಚ್ಚಾಗಿ ಸೇವಿಸುವುದರಿಂದ ಹೀಗಾಗಬಹುದು ಎನ್ನುತ್ತಾರೆ ಕೆಲವರು.

    2015 ರಲ್ಲಿ ‘ಜರ್ನಲ್ ಆಫ್ ಡೈರಿ ಸೈನ್ಸ್’ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಆನೆಯ ಹಾಲಿನಲ್ಲಿ ಕಂಡುಬರುವ ರಾಸಾಯನಿಕಗಳು ಯಾವುದೇ ಪ್ರಾಣಿಗಳಲ್ಲಿ ಕಂಡುಬರುವುದಿಲ್ಲ. ಇದು ಆಲಿಗೋಸ್ಯಾಕರೈಡ್ ಎಂಬ ದೊಡ್ಡ ಪ್ರಮಾಣದ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ, ಇದು ಎಮ್ಮೆ, ಹಸು, ಕುರಿ, ಮೇಕೆಯಂತಹ ಪ್ರಾಣಿಗಳಲ್ಲಿ ಕಡಿಮೆಯಿರುತ್ತದೆ. ಈ ಕಾರ್ಬೋಹೈಡ್ರೇಟ್‌ನ ಹೆಚ್ಚಿನ ಪ್ರಮಾಣವು ಮಾನವರು ಸೇವಿಸಿದಾಗ ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್​ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಇನ್ನು ಇದರಲ್ಲಿನ ಆಲ್ಕೋಹಾಲ್‌ ಅಂಶವು ದೇಹವನ್ನು ಅಸ್ಥಿರಗೊಳಿಸಬಹುದು. ಮೂರ್ಚೆ ಹೋಗುವುದರ ಜತೆಗೆ ಪ್ರಾಣಕ್ಕೂ ಕುತ್ತು ಬರಬಹುದ ಎನ್ನಲಾಗಿದೆ.

    ಆದ್ದರಿಂದ, ನಮ್ಮ ಜತೆಗೇ ಬದುಕುತ್ತಿರುವ ಹಸು, ಎಮ್ಮೆ, ಮೇಕೆ, ಕುರಿ ಹಾಲನ್ನು ಬಳಸಬೇಕು. ಅದು ಬಿಟ್ಟು ಆನೆಯಂತೆ ಬಲಶಾಲಿಯಾಗುತ್ತೇನೆಂದು ಅದರ ಹಾಲು ಕುಡಿಯಲು ಹೋದರೆ ಅಪಾಯ ನಿಶ್ಚಿತ.

    ಶವದ ಪಕ್ಕ ಕುಳಿತು ರೋದಿಸಿದ ಕೋತಿ; ಮನಕಲಕುವ ದೃಶ್ಯ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts