More

    ಮತ್ತೆ ಚಿತ್ರಮಂದಿರದಲ್ಲಿ ‘ದಿಯಾ’; ಮೆಲೊಡಿ ಹಾಡಿನೊಂದಿಗೆ…

    ಬೆಂಗಳೂರು: ಲಾಕ್​ಡೌನ್​ಗೂ ಮುನ್ನ ಸದ್ದು ಮಾಡಿತ್ತು ಅಶೋಕ್​ ಕೆ.ಎಸ್​ ನಿರ್ದೇಶನದ ದಿಯಾ ಸಿನಿಮಾ. ಆದರೆ, ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಹೆಚ್ಚು ಕಾಲ ಈ ಚಿತ್ರ ನಿಲ್ಲಲಿಲ್ಲ. ಇದೀಗ ಅದೇ ಸಿನಿಮಾ ಮತ್ತೆ ಬಿಡುಗಡೆಗೆ ಸಿದ್ಧವಾಗಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಮರು ಬಿಡುಗಡೆ ಆಗುತ್ತಿದೆ.

    ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ ಪಿಎಂ ನರೇಂದ್ರ ಮೋದಿ ಸಿನಿಮಾ

    ಪೃಥ್ವಿ ಅಂಬರ್​, ಖುಷಿ ಮತ್ತು ದೀಕ್ಷಿತ್​ ಶೆಟ್ಟಿ ನಟಿಸಿರುವ ದಿಯಾ ಚಿತ್ರ ದಸರಾ ಹಬ್ಬದ ಪ್ರಯುಕ್ತ ಮರು ಬಿಡುಗಡೆ ಆಗುತ್ತಿದೆ. ಆ ನಿಮಿತ್ತ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿಕೊಂಡಿರುವ ಚಿತ್ರತಂಡ, ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೆ ಚಿತ್ರಮಂದಿರದತ್ತ ಆಗಮಿಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.

    ಇದನ್ನೂ ಓದಿ: ಹಣ ದುರ್ಬಳಕೆ ಆದ ದಾಖಲೆ ಇಲ್ಲ: ಸುಶಾಂತ್​ ಪರ ವಕೀಲ

    ಈ ಸಿನಿಮಾದ ಜತೆಗೆ ‘ಹಾಯಾದ…’ ಸಾಹಿತ್ಯವುಳ್ಳ ಹಾಡೂ ಸಹ ಈ ಚಿತ್ರದಲ್ಲಿ ಸೇರಿಕೊಳ್ಳಲಿದೆ. ಈ ಮೊದಲು ಬಿಡುಗಡೆ ಆದಾಗ, ಆ ಹಾಡು ಚಿತ್ರದಲ್ಲಿರಲಿಲ್ಲ. ಇದೀಗ ಪ್ರೇಕ್ಷಕರಿಗೆ ಆ ಹಾಡನ್ನೂ ನೋಡುವ ಭಾಗ್ಯ ಕಲ್ಪಿಸಿದೆ ತಂಡ. ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ನಿರ್ಮಾಣವಾದ ಈ ಚಿತ್ರವನ್ನು ಕೆಆರ್​ಜಿ ಸ್ಟುಡಿಯೋಸ್​ ವಿತರಣೆ ಮಾಡುತ್ತಿದೆ.

    ಮತ್ತೆ ಚಿತ್ರಮಂದಿರದಲ್ಲಿ 'ದಿಯಾ'; ಮೆಲೊಡಿ ಹಾಡಿನೊಂದಿಗೆ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts