More

    ‘ಮಾರ್ಟಿನ್’ ನಲ್ಲಿ ಹೇಗಿರಲಿದೆ ನಟ ಧ್ರುವ ಸರ್ಜಾ ಲುಕ್? ಪೋಟೋ ವೈರಲ್!

    ಬೆಂಗಳೂರು: ನಟ ಧ್ರುವ ಸರ್ಜಾ ದೈತ್ಯ ದೇಹವನ್ನು ವರ್ಣಿಸಬೇಕಾಗಿಲ್ಲ. ಅವರ ಸ್ನಾಯುಗಳು, ಬೈಸೆಪ್ಸ್ ನೋಡಿದ ಗಂಡು ಮಕ್ಕಳು ಅವರಂತೆ ದೇಹದ ನಿರ್ವಹಣೆ ಮಾಡಬೇಕೆಂದು ಬಯಸುತ್ತಾರೆ. ಇನ್ನು, ಹೆಣ್ಣು ಮಕ್ಕಳು ಅಂತೂ ನಟ ಧ್ರುವಗೆ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಆದರೆ, ತಮ್ಮ ದೈತ್ಯ ದೇಹಕ್ಕೆ ಇದೀಗ ನಟ ಧ್ರುವ ಸರ್ಜಾ ಹೆಚ್ಚು ಹೆಚ್ಚು ಸಾಣೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದರೆ ನಿಮಗೆ ಹೇಗೆ ಅನಿಸಬಹುದು? ಹೌದು, ಮುಂಬರುವ ಒಂದು ಸಿನಿಮಾಗೆ ಧ್ರುವ ಮತ್ತೆ ಜಿಮ್ ಹೊಕ್ಕಿದ್ದಾರೆ.
    ಧ್ರುವ ಸರ್ಜಾ ವರ್ಷಕ್ಕೆ ಬಹುತೇಕ ಒಂದೇ ಸಿನಿಮಾ ಮಾಡುವ ವಿಷಯ ಎಲ್ಲರಿಗೂ ತಿಳಿದಿದೆ. ಇನ್ನು, ಸದ್ಯ ಮಾರ್ಟಿನ್ಎಂಬ ಸಿನಿಮಾದ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದಾರೆ ಧ್ರುವ. ಈ ಸಿನಿಮಾಗೆಂದೆ ಧ್ರುವ ಸರ್ಜಾ ತಮ್ಮ ದೇಹದ ಮೇಲೆ ಮತ್ತೆ ಹೆಚ್ಚು ಫೋಕಸ್ ಮಾಡಲು ಆರಂಭಿಸಿದ್ದಾರೆ. ಹಾಗಾಗಿ, ಮಾರ್ಟಿನ್ಸಿನಿಮಾದಲ್ಲಿ ತಮ್ಮ ದೇಹವನ್ನು ಹೆಚ್ಚು ಗಟ್ಟಿಗೊಳಿಸಿಕೊಂಡು ಅಭಿಮಾನಿಗಳ ಮುಂದೆ ಅತ್ಯಂತ ಫಿಟ್ ಆಗಿ ಕಾಣಿಸಿಕೊಳ್ಳಿದ್ದಾರೆ ಎಂದು ತಿಳಿದುಬಂದಿದೆ. ಬ್ಯಾಕ್ ಟು ಜಿಮ್ ಎಂಬಂತೆ ನಟ ಧ್ರುವ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳು, ವಿಡಿಯೋಗಳು ಇದೀಗ ಅವರ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಅವು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

    'ಮಾರ್ಟಿನ್' ನಲ್ಲಿ ಹೇಗಿರಲಿದೆ ನಟ ಧ್ರುವ ಸರ್ಜಾ ಲುಕ್? ಪೋಟೋ ವೈರಲ್! 'ಮಾರ್ಟಿನ್' ನಲ್ಲಿ ಹೇಗಿರಲಿದೆ ನಟ ಧ್ರುವ ಸರ್ಜಾ ಲುಕ್? ಪೋಟೋ ವೈರಲ್!

    ಮಾರ್ಟಿನ್ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಸೈನಿಕನ ಪಾತ್ರದಲ್ಲಿ ಮಿಂಚಲಿರುವ ಕಾರಣ, ದೇಹದ ಮೇಲೆ ಹೆಚ್ಚು ಗಮನ ಇಟ್ಟಿದ್ದಾರೆ. ಈ ಸಿನಿಮಾಗೆ ಎ.ಪಿ.ಅರ್ಜುನ್ ನಿರ್ದೇಶಕರಾಗಿದ್ದು, ಉದಯ್.ಕೆ.ಮೆಹ್ತಾ ನಿರ್ಮಾಪಕರಾಗಿದ್ದಾರೆ. ಧ್ರುವ ಸರ್ಜಾ ಅವರ ವಿಡಿಯೋಗಳಿಂದ ಸದ್ಯ ಎಲ್ಲೆಡೆ ಜನ ಜಿಮ್ ಹೋಗಲು, ದೇಹವನ್ನು ಬಲವಾಗಿಸಿಕೊಳ್ಳಲು ಮುಂದಾಗಿದ್ದಾರೆ. ಅಪ್ಪು ಸಾವಿನ ನಂತರ ಜಿಮ್ ಹೋಗಲು ಹೆದರುತ್ತಿದ್ದರು ಜನ. ಆದರೆ, ನಟ ಧ್ರುವ ಸರ್ಜಾ ವಿಡಿಯೋ ಈಗ ಎಲ್ಲರಿಗೆ ಮತ್ತೆ ಜಿಮ್ ಹೋಗಲು ಪ್ರೇರಣೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts