ಬೆಂಗಳೂರು: ಜೂನಿಯರ್ ಚಿರು ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಧ್ರುವ ಸರ್ಜಾ ಕೆಲ ಯೂಟ್ಯೂಬರ್ಸ್ಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ನಾಮಕರಣ ಬಳಿಕ ಮಾತನಾಡಿದ ನಟ ಧ್ರುವ ಸರ್ಜಾ, ರಾಜ್ ಸರ್ಜಾ ಹೆಸರಿನಲ್ಲೇ ಒಂದು ಗತ್ತಿದೆ. ಸರ್ಜಾ ಕುಟುಂಬ ಹಾಗೂ ರಾಜ್ ಕುಟುಂಬ ಯಾವಾಗಲೂ ಒಂದೇ. ಕೆಲ ಯೂಟ್ಯೂಬ್ ಹಾವಳಿಯಿಂದ ಸ್ವಲ್ಪ ಬೇಜಾರಾಗಿದೆ. ಕೆಲವರು ನಮ್ಮ ಮಧ್ಯೆನೇ ತಂದಿಡೋಕೆ ಪ್ರಯತ್ನ ಮಾಡಿದ್ರು. ಆದರೆ, ಅದು ಸಾಧ್ಯವಾಗಲ್ಲ. ನಾವು ಎಂದಿಗೂ ಒಂದೇನೆ ಎಂದು ಹೇಳಿದರು.
ಜೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದ್ದು, ನಿಮ್ಮೆಲ್ಲರ ಪ್ರೀತಿ ಆತನ ಮೇಲಿರಲಿ ಎಂದು ಧ್ರುವ ಇದೇ ವೇಳೆ ಹೇಳಿದರು. ಮೇಘನಾ ಕೂಡ ಇದೇ ಮಾತನ್ನು ಹೇಳಿದರು. ಯೂಟ್ಯೂಬ್ನಲ್ಲಿ ಬಂದಿರುವ ಕೆಲ ವಿಡಿಯೋಗಳು ಫೇಕ್ ಎಂದು ಸ್ಪಷ್ಟನೆ ನೀಡಿದರು.
ಇನ್ನು ಯೂಟ್ಯೂಬರ್ಸ್ ಮೇಲೆ ಚಿರು ಅಸಮಾಧಾನಗೊಳ್ಳಲು ಕಾರಣವೇನೆಂದರೆ ಸರ್ಜಾ ಕುಟುಂಬ ಮತ್ತು ರಾಜ್ ಕುಟುಂಬ ನಡುವೆ ಎಲ್ಲವೂ ಸರಿಯಿಲ್ಲ ಎಂದು ಯೂಟ್ಯೂಬ್ನಲ್ಲಿ ಕೆಲವು ವಿಡಿಯೋಗಳು ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆದ ನಾಮಕರಣದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ. ನಾವು ಚೆನ್ನಾಗಿದ್ದೇವೆ ಎಂದು ಸ್ಪಷ್ಟ ಸಂದೇಶವನ್ನು ಸರ್ಜಾ ಮತ್ತು ರಾಜ್ ಕುಟುಂಬ ರವಾನಿಸಿದೆ. (ದಿಗ್ವಿಜಯ ನ್ಯೂಸ್)
ಡೆಡ್ಲಿ ಕಾರು ಅಪಘಾತ ಕೇಸ್: ಕೇರಳದ ಧನುಷಾ MLA ಪುತ್ರನ ಕಾರನ್ನೇರಿದ್ದೇಕೆ? ಇಬ್ಬರಿಗೂ ಹೇಗೆ ಪರಿಚಯ?
ಸಿಂಧೂರಿ ವಿರುದ್ಧ ಮತ್ತೆ ಗುಡುಗಿದ ಸಾರಾ ಮಹೇಶ್! ಆಂಧ್ರ ಅಧಿಕಾರಿಗಳ ಮನೆಗೆ ಹೋಯ್ತಾ 6 ಕೋಟಿ ರೂ.?
ಕಾಶ್ಮೀರದ ಮುಸ್ಲಿಮರ ಬಗ್ಗೆ ಮಾತನಾಡೋದು ನಮ್ಮ ಹಕ್ಕು: ಕೊನೆಗೂ ನರಿಬುದ್ಧಿ ತೋರಿದ ತಾಲಿಬಾನ್..!