More

    ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಕೇಕ್ ಬದಲು ಪುಸ್ತಕ ತರುವಂತೆ ಮನವಿ

    ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ಕಲಾವಿದರ ಹುಟ್ಟುಹಬ್ಬ ಎಂದಕೂಡಲೇ ಅದನ್ನು ಅದ್ದೂರಿಯಾಗಿ ಆಚರಿಸಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿರುತ್ತದೆ. ಹೀಗಾಗಿ ಅವರ ಮನೆಗೆ ಹೋಗುವುದು, ಕೇಕ್ ಕತ್ತರಿಸುವುದು, ಹೂವಿನ ಹಾರ ಹಾಕುವುದು, ನೆಚ್ಚಿನ ನಟನ ಜತೆಗೆ ೆಟೋ ತೆಗಿಸಿಕೊಳ್ಳುವುದು ಎಂದರೆ ಅಭಿಮಾನಿಗಳಿಗೆ ಒಂದು ಸಂಭ್ರಮ. ಅದೇ ರೀತಿ ಸ್ಟಾರ್ ಕಲಾವಿದರಿಗೂ ಹೊಸ ಆರಂಭಗಳಿಗೆ ಇದೊಂದು ಸಂದರ್ಭ ಆಗಿರುತ್ತದೆ. ಸದ್ಯ ಧ್ರುವ ಸರ್ಜಾ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳೇ ಮನವಿ ಮಾಡಿದ್ದಾರೆ.

    ಅಭಿಮಾನಿಗಳನ್ನು ವಿಐಪಿ ಎಂದು ಕರೆಯುವ, ಧ್ರುವ ಸರ್ಜಾ ಇದೇ ಅ.6ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿಯೇ ರಾಜ್ಯದ ವಿವಿಧ ಭಾಗಗಳಿಂದ ಬರುವ ಅಭಿಮಾನಿಗಳಿಗೆ, ‘ಕಳೆದ ಮೂರು ವರ್ಷಗಳಿಂದ ವಿಐಪಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕಾರಣ ಅವರ ಹುಟ್ಟುಹಬ್ಬವನ್ನು ಈ ವರ್ಷ ಅದ್ದೂರಿಯಾಗಿ ಆಚರಿಸುವುದರ ಜತೆಗೆ ಅರ್ಥಪೂರ್ಣವಾಗಿ ಆಚರಿಸಬೇಕು. ಶುಭಕೋರಲು ಬರುವ ಅಭಿಮಾನಿಗಳು, ಹಿತೈಷಿಗಳು ಕೇಕ್, ಹೂವಿನ ಹಾರ, ಪಟಾಕಿ ತರುವುದು ಬೇಡ. ಅದರ ಬದಲಾಗಿ ಕೈಲಾದಷ್ಟು ಪುಸ್ತಕ, ಜಾಮಿಟ್ರಿ ಬಾಕ್ಸ್, ಪೆನ್, ಪೆನ್ಸಿಲ್ ಸೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಸ್ತುಗಳನ್ನು ತರಬೇಕು. ಅವುಗಳನ್ನು ಹಣದಲ್ಲಿ ಬಡವರು, ಹೃದಯದಲ್ಲಿ ಶ್ರೀಮಂತರಾದ ಸರ್ಕಾರೀ ಶಾಲೆಯ ವಿದ್ಯಾರ್ಥಿಗಳಿಗೆ ದಾನ ಮಾಡಿದರೆ ಸತ್ಕಾರ್ಯ ಮಾಡಿದಂತೆ ಆಗುತ್ತದೆ’ ಎಂದು ಮನವಿ ಮಾಡಿದ್ದಾರೆ.

    ಅಣ್ಣನ ಚಿತ್ರ ರಿಲೀಸ್:
    ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ‘ರಾಜಮಾರ್ತಾಂಡ’. ಕೆ. ರಾಮನಾರಾಯಣ್ ಆ್ಯಕ್ಷನ್-ಕಟ್ ಹೇಳಿರುವ ಚಿತ್ರವಿದು. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿರುವುದು ವಿಶೇಷ. ಈ ಸಿನಿಮಾ ಧ್ರುವ ಸರ್ಜಾ ಹುಟ್ಟುಹಬ್ಬದಂದು ಅಂದರೆ ಅ.6ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲು ಸಿದ್ಧವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts