More

    ಹಳ್ಳಿ ಮನೆಯಲ್ಲಿ ಧಮ್ ಬಿರಿಯಾನಿ ಮಾಡಿದ ಧ್ರುವ! ವಿಡಿಯೋ ವೈರಲ್

    ಬೆಂಗಳೂರು: ಪೊಗರುಚಿತ್ರದ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ಸಿನಿಮಾದ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಇದ್ದಾರೆ. ಸ್ಟಾರ್ ನಟರು ಹೀಗೆ ಬ್ಯೂಸಿಯಾಗಿರುವುದು ಸಹಜ. ಹೀಗಿರುವಾಗ, ಅವರಿಗೆ ತಮ್ಮ ಕುಟುಂಬದ ಜೊತೆ ಕಾಲ ಕಳೆಯಲೇ ಸಮಯ ಸಿಗುವುದಿಲ್ಲ. ಮತ್ತೆ, ಅಡುಗೆ ಎಲ್ಲಿ ಮಾಡುತ್ತಾರೆ ಅನಿಸುತ್ತೆ. ಆದರೆ, ‘ಮಾರ್ಟಿನ್ಸಿನಿಮಾದ ಶೂಟಿಂಗ್​ನಲ್ಲಿ ಬ್ಯೂಸಿಯಾಗಿದ್ದರೂ ನಟ ಧ್ರುವ ಸರ್ಜಾ ನಾಟಿ ಶೈಲಿಯಲ್ಲಿ ಚಿಕನ್ ಧಮ್ ಬಿರಿಯಾನಿ ಮಾಡಿದ್ದಾರೆ. ಇದೀಗ, ಅವರು ಅಡುಗೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಹಳ್ಳಿ ಮನೆಯಲ್ಲಿ ಧಮ್ ಬಿರಿಯಾನಿ ಮಾಡಿದ ಧ್ರುವ! ವಿಡಿಯೋ ವೈರಲ್ ಹಳ್ಳಿ ಮನೆಯಲ್ಲಿ ಧಮ್ ಬಿರಿಯಾನಿ ಮಾಡಿದ ಧ್ರುವ! ವಿಡಿಯೋ ವೈರಲ್

    ಹೌದು, ಅಬ್ಬಬ್ಬಾ. ಪಕ್ಕಾ ನಾಟಿ ಸ್ಟೈಲಿನಲ್ಲಿ ಧಮ್ ಕಟ್ಟಿ ಬಿರಿಯಾನಿ ಮಾಡಿದ್ದಾರೆ ಧ್ರುವ ಸರ್ಜಾ. ಹಳ್ಳಿ ಮನೆಯೊಂದರಲ್ಲಿ ಅಡಿಗೆ ಮನೆಗೆ ನುಗ್ಗಿ ಎಷ್ಟು ಸಲೀಸಾಗಿ ಅಡುಗೆ ಮಾಡಿದ್ದಾರೆ ಗೊತ್ತಾ ಧ್ರುವ. ಸೌದೆ ಒಲೆಯ ಮುಂದೆ ಬೆಂಕಿಗೆ ಗಾಳಿ ಊದುತ್ತಾ ಧ್ರುವ ಬಿರಿಯಾನಿ ಮಾಡಿರುವ ಈ ವಿಡಿಯೋ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಧ್ರುವ ಬಿರಿಯಾನಿ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳಿಗೆ ಧಮ್ ಬಿರಿಯಾನಿ ನಿಜಕ್ಕೂ ತಿಂದಷ್ಟೇ ಸಂತಸ ಕೊಟ್ಟಿದೆ. ಇದಕ್ಕೂ, ಮುಂಚೆ ನಟ ಮಾರ್ಟಿನ್ಚಿತ್ರಕ್ಕೆಂದು ಜಿಮ್​ನಲ್ಲಿ ದೇಹ ದಂಡಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು.

    ನಾನು ಭಯಸ್ತ ಅಲ್ಲ, ಮಾಗಡಿ ರೋಡಲ್ಲಿ ದೊಡ್ಡದೊಡ್ಡ ಪೋಲಿ ಆಟವಾಡಿ ಬಂದವನು: ಹಂಸಲೇಖ

    ಡಾರ್ಲಿಂಗ್ ಥಿಯೇಟರ್ ಮುಚ್ಚಿಸಿದ ಜಗನ್; 300ಕ್ಕೂ ಹೆಚ್ಚು ಚಿತ್ರಮಂದಿರಗಳು ಕ್ಲೋಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts