More

    ‘ಧೂಮ್ ಆರ್ ಡೂಮಡ್ ?’ – ಬೈಕ್ ಸ್ಟಂಟ್ ಮಾಡುವ ಜನರಿಗೆ ಪೊಲೀಸರ ಪ್ರಶ್ನೆ

    ಲಖನೌ : ವಿವಿಧ ನಗರಗಳಲ್ಲಿ ಯುವಜನರ ಬೈಕ್​ ಸ್ಟಂಟ್​ಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಈ ಬಗ್ಗೆ “ಧೂಮ್​ ಆರ್ ಡೂಮಡ್ ?” ಎಂಬ ಶೀರ್ಷಿಕೆಯ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ರಸ್ತೆಗಳಲ್ಲಿ ಬೈಕ್ ವೀಲಿಂಗ್ ಅಥವಾ ಇತರ ಸ್ಟಂಟ್​​ಗಳನ್ನು ಮಾಡುವುದು ಅಪರಾಧ ಎಂದು ವಿನೂತನ ಮಾದರಿಯಲ್ಲಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.

    ಯುವಜನರು ಬೈಕ್ ಓಡಿಸುವ ಹುಮ್ಮಸ್ಸಿನಲ್ಲಿ ವೀಲಿಂಗ್ ಅಲ್ಲದೆ ಏನೇನೋ ಸರ್ಕಸ್ ಮಾಡುವ ವಿಡಿಯೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡುವುದು ಹೆಚ್ಚಾಗಿದೆ. ಈ ವಿಡಿಯೋಗಳು ನೋಡಲು ವಿಸ್ಮಯವೆನಿಸಿದರೂ ಚಾಲಕರ ಮತ್ತು ಇತರ ಜನರ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತುತ್ತವೆ. ಇದಕ್ಕೆ ಉತ್ತರವಾಗಿ ಯುಪಿ ಪೊಲೀಸರು ಟ್ವಿಟರ್​​ನಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

    ಇದನ್ನೂ ಓದಿ: “18 ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಕೇಸುಗಳಿವೆ”

    ಈ ವೀಡಿಯೋ ಆರಂಭವಾಗುವುದು ಎರಡು ಬೈಕ್ ಸ್ಟಂಟ್​ಗಳ ವಿಡಿಯೋ ತುಣುಕುಗಳೊಂದಿಗೆ. ಹಿನ್ನೆಲೆಯಲ್ಲಿ ಧೂಮ್ ಚಿತ್ರದ ‘ಧೂಮ್ ಮಚಾಲೇ’ ಹಾಡಿನ ರಾಕ್ ಸಂಗೀತ ಕೇಳಿಬರುತ್ತದೆ. ನಂತರ ದೃಶ್ಯ ಬದಲಾಗಿ, ಇದು ಖಂಡಿತವಾಗಿಯೂ ಅಪರಾಧ ಮತ್ತು ನಾವು ಈ ಪ್ರದರ್ಶನಕ್ಕೆ ಅಂತ್ಯ ಹಾಡಿದ್ದೇವೆ ಎಂಬರ್ಥದ ಸಂದೇಶ ಗೋಚರಿಸುತ್ತದೆ. ನಂತರ ‘ಸ್ಟೋಲ್ ದ ಶೋ’ ಎಂಬ ಹಾಡಿನ ಹಿನ್ನೆಲೆಯಲ್ಲಿ ಈ ಸ್ಟಂಟ್​ಗಳನ್ನು ಮಾಡಿದವರ ಮೇಲೆ ಪೊಲೀಸ್ ಇಲಾಖೆ ತೆಗೆದುಕೊಂಡ ಕ್ರಮಗಳನ್ನು ತೋರಿಸಲಾಗುತ್ತದೆ. ನೀವೂ ವಿಡಿಯೋ ನೋಡಿ –

    ಈ ವಿಡಿಯೋವನ್ನು ಶೇರ್ ಮಾಡಿರುವ ಯುಪಿ ಪೊಲೀಸರು ರೋಡ್​ ಸೇಫ್ಟಿ, ಡ್ರೈವ್ ಸೇಫ್, ಸ್ಟೇ ಸೇಫ್ ಎಂಬ ಹ್ಯಾಶ್ ಟ್ಯಾಗ್​ಗಳನ್ನು ಹಾಕಿದ್ದಾರೆ. ಒಂದು ದಿನದ ಹಿಂದೆ ಪೋಸ್ಟ್ ಮಾಡಿದಾಗಿನಿಂದ ಈ ವೀಡಿಯೊ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಜನರಿಂದ ಹಲವಾರು ಸಕಾರಾತ್ಮಕ ಕಾಮೆಂಟ್‌ಗಳನ್ನೂ ಪಡೆದಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೇಲೆ ನಿರ್ಬಂಧ… ಸಿಎಂ ಯಡಿಯೂರಪ್ಪ ಹೇಳಿದ್ದೇನು?

    ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ… ಯಾರೆಂದು ಊಹಿಸಬಲ್ಲಿರಾ?!

    ಹುಟ್ಟಿದ ಮಗುವಿನಲ್ಲಿ ಕರೊನಾ ಆ್ಯಂಟಿಬಾಡೀಸ್ ಪತ್ತೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts