More

    ಮಾಜಿ ನಾಯಕ ಧೋನಿ ವಿರುದ್ಧ ಅಸಮಾಧಾನ ಹೊರಹಾಕಿ 2012ರ ಘಟನೆ ನೆನಪಿಸಿದ ವೀರೂ!

    ನವದೆಹಲಿ: ಉತ್ತಮ ಆಟಗಾರರನ್ನು ತಂಡದಿಂದ ಹೊರಗಿಡುತ್ತಿರುವ ಪ್ರಸ್ತುತ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ನ ಸಂವಹನ ಕೊರತೆಯ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಎಂ.ಎಸ್​.ಧೋನಿ ನಾಯಕರಾಗಿದ್ದಾಗಲೂ ಹೀಗೆ ಆಗುತ್ತಿತ್ತು ಎಂದು ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್​ ತಿಳಿಸಿದ್ದಾರೆ.

    ಯುವ ಆಟಗಾರ ರಿಷಭ್​ ಪಂತ್​ ಅವರನ್ನು ನಿರಂತರವಾಗಿ ಬೆಂಚ್​ ಕಾಯಿಸುತ್ತಿರುವುದಕ್ಕೆ ಸೆಹ್ವಾಗ್​ ಮಾತ್ರವಲ್ಲ ಸಾಕಷ್ಟು ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಸಂವಹನ ಕೊರತೆ ಎಂದು ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ವೀರೂ, ಧೋನಿ ಅವರನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ಧೋನಿ ಕೂಡ ಡ್ರೆಸ್ಸಿಂಗ್​​ ರೂಮ್​ನಲ್ಲಿ ಯಾರೊಂದಿಗೂ ಸರಿಯಾಗಿ ಸಂವಹನ ನಡೆಸುತ್ತಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.​

    ಸೆಹ್ವಾಗ್​, ಸಚಿನ್​ ತೆಂಡೂಲ್ಕರ್​ ಮತ್ತು ಗೌತಮ್​ ಗಂಭೀರ್ ಟಾಪ್​ ಆರ್ಡರ್​ನಲ್ಲಿ ಬದಲಾವಣೆ ಮಾಡುತ್ತಿರುತ್ತೇನೆ. ಏಕೆಂದರೆ ಅವರು ಕ್ರೀಡಾಂಗಣದಲ್ಲಿ ಫೀಲ್ಡಿಂಗ್​ ಮಾಡುವಾಗ ಮಂದಗತಿಯಲ್ಲಿರುತ್ತಾರೆ ಎಂದು 2012ರಲ್ಲಿ ಧೋನಿ ಮಾಧ್ಯಮವೊಂದರಲ್ಲಿ ಹೇಳಿದ್ದರು. ಆದರೆ, ಅವರೆಂದಿಗೂ ಅದೇ ವಿಚಾರವನ್ನು ಡ್ರೆಸ್ಸಿಂಗ್​ ರೂಮ್​ನಲ್ಲಿ ಚರ್ಚಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ರೋಹಿತ್ ಶರ್ಮಗೆ ಅವಕಾಶ ನೀಡಬೇಕಾಗುತ್ತದೆ ಎಂಬ ಕಾರಣದಿಂದಲೇ ಟಾಪ್​ ಆರ್ಡರ್​ನಲ್ಲಿ ಬದಲಾವಣೆ ನಿಯಮ ಅಳವಡಿಸಿಕೊಳ್ಳಲಾಗಿದೆ ಎಂದು ಡ್ರೆಸ್ಸಿಂಗ್​ ರೂಮ್​ನಲ್ಲಿ ಮಾತುಕತೆ ನಡೆದಿದ್ದಾಗಿಯೂ ವೀರೂ ಬಹಿರಂಗಪಡಿಸಿದ್ದಾರೆ.

    ನಮ್ಮ ಸಮಯದಲ್ಲಿ ನಾಯಕನಾದವನು ಆಟಗಾರರ ಹತ್ತಿರ ಹೋಗಿ ಮಾತುಕತೆ ನಡೆಸಬೇಕಿತ್ತು. ಇದೀಗ ಕೊಹ್ಲಿ ಇದೇ ರೀತಿ ಮಾಡುತ್ತಿದ್ದಾರೋ, ಇಲ್ಲವೋ ನನಗೆ ತಿಳಿದಿಲ್ಲ. ನಾನು ತಂಡದ ಭಾಗವಾಗಿಲ್ಲ. ಆದರೆ ಏಷ್ಯಾ ಕಪ್​ಗೆ ನಾಯಕನಾಗಿ ರೋಹಿತ್ ಶರ್ಮಾ ಹೋಗಿದ್ದಾಗ ಅವರು ತಂಡದ ಎಲ್ಲ ಆಟಗಾರರ ಜತೆಯಲ್ಲಿಯೂ ಮಾತನಾಡುತ್ತಿದ್ದರೂ ಎಂದಿದ್ದಾರೆ.

    ಸುಮ್ಮನೇ ಬೆಂಚ್​ ಕಾಯಿಸಿದರೆ ರನ್​ ಗಳಿಸುವುದು ಹೇಗೆ? ಸಚಿನ್​ ಬೆಂಚ್​ ಕಾದರೂ ಅವರು ಕೂಡ ರನ್​ ಗಳಿಸಲು ಸಾಧ್ಯವಾಗುವುದಿಲ್ಲ. ನೀವು ರಿಷಭ್​ನನ್ನು ಮ್ಯಾಚ್​ ವಿನ್ನರ್​ ಎಂಬ ಭಾವಿಸುವುದಾದರೆ ಏಕೆ ಆಟವಾಡಲು ಅವಕಾಶ ನೀಡುತ್ತಿಲ್ಲ? ಆತ ಸ್ಥಿರ ಪ್ರದರ್ಶನ ನೀಡುತ್ತಿಲ್ಲವೇ? ಎಂದು ವೀರೂ ರಿಷಭ್​ರನ್ನು ಬೆಂಚ್​ ಕಾಯಿಸುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts