More

    ತಂಡದ ಸಂಯೋಜನೆಯಲ್ಲಿ ಎಂಎಸ್ ಧೋನಿಯೇ ಬೆಸ್ಟ್ ಎಂದ ವೆಸ್ಟ್ ಇಂಡೀಸ್ ದಿಗ್ಗಜ

    ಬೆಂಗಳೂರು: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿದ ಬಳಿಕ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಟಿ20 ಗುಂಗಿನಲ್ಲೇ ಇರುವ ಭಾರತ ತಂಡದ ಏಕದಿನ ಮಾದರಿಗೆ ಇನ್ನಷ್ಟೇ ಹೊಂದಿಕೊಳ್ಳಬೇಕಿದೆ. ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಂಡದ ಸಂಯೋಜನೆಯಲ್ಲಿ ವಿರಾಟ್ ಕೊಹ್ಲಿ ಎಡವಿದ್ದರು. ಸೂಕ್ತ ಆಲ್ರೌಂಡರ್ ಜತೆಗೆ ಮಧ್ಯಮ ಕ್ರಮಾಂಕವೂ ಗಟ್ಟಿಯಾಗಬೇಕಿದೆ. ವಿದೇಶಿ ಮಾಜಿ ಆಟಗಾರರು ಕೂಡ ಕೊಹ್ಲಿ ಸಂಯೋಜಿಸಿದ ತಂಡವನ್ನು ಟೀಕಿಸುತ್ತಿದ್ದಾರೆ. ಭಾರತ ತಂಡಕ್ಕೆ ಸದ್ಯ ಧೋನಿಯಂಥ ಆಟಗಾರನ ಅವಶ್ಯಕತೆ ಇದೆ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗಿ ಮೈಕಲ್ ಹೋಲ್ಡಿಂಗ್ ಅಭಿಪ್ರಾಯಪಟ್ಟಿದ್ದಾರೆ.

    ಸಿಡ್ನಿಯಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಳಲ್ಲಿ ಎಡವಿತ್ತು. ಪ್ರಮುಖ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಪರದಾಡಿದರು. ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಕೆಲಕಾಲ ಹೋರಾಡಿದ್ದನ್ನು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್ ವೈಫಲ್ಯ ಅನುಭವಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಧೋನಿಯಂಥ ಆಟಗಾರ ಭಾರತಕ್ಕೆ ಸದ್ಯದ ಮಟ್ಟಿಗೆ ಅವಶ್ಯಕತೆ ಇದೆ ಎಂದು ಹೋಲ್ಡಿಂಗ್ ಹೇಳಿದ್ದಾರೆ. ದೊಡ್ಡ ಮೊತ್ತ ಬೆನ್ನಟ್ಟುವ ವೇಳೆ ಧೋನಿ ಎಂದೂ ಗಾಬರಿಯಾಗುತ್ತಿರಲಿಲ್ಲ. ಕೂಲ್ ಆಗಿಯೇ ಬ್ಯಾಟಿಂಗ್ ಕ್ರಮಾಂಕ ಸಿದ್ಧಪಡಿಸುತ್ತಿದ್ದರು ಎಂದು ಭಾರತ ತಂಡದ ಮಾಜಿ ನಾಯಕನ ನಾಯಕತ್ವ ಗುಣವನ್ನು ಕೊಂಡಾಗಿದ್ದಾರೆ. ರನ್ ಚೇಸಿಂಗ್ ಧೋನಿ ಒಬ್ಬ ಸ್ಪೆಷಲಿಸ್ಟ್ ಎಂದಿದ್ದಾರೆ.

    ಆಸ್ಟ್ರೇಲಿಯಾ ನೀಡಿದ 375 ರನ್ ಪ್ರತಿಯಾಗಿ ಭಾರತ 8 ವಿಕೆಟ್‌ಗೆ 308 ರನ್ ಗಳಿಸಲಷ್ಟೇ ಶಕ್ತವಾಯಿತು. ಮೊದಲ ಪಂದ್ಯದಲ್ಲೇ 66 ರನ್‌ಗಳಿಂದ ಸೋಲು ಕಂಡಿತು. ಉಭಯ ತಂಡಗಳ ಎರಡನೇ ಏಕದಿನ ಕದನ ಭಾನುವಾರ ಸಿಡ್ನಿಯಲ್ಲೇ ನಡೆಯಲಿದೆ.

    ಸತತ 2ನೇ ಪಂದ್ಯದಲ್ಲೂ ಡ್ರಾಗೆ ತೃಪ್ತಿಪಟ್ಟ ಬಿಎಫ್ ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts