More

    ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳಿಗೆ ಅರಬ್ ನೆಲದಲ್ಲಿ ಭಾರಿ ಡಿಮ್ಯಾಂಡ್..!

    ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬಿಡುವಿನ ವೇಳೆ ಬಹುತೇಕ ಸಮಯವನ್ನು ಜಾರ್ಖಂಡ್ ರಾಜಧಾನಿ ರಾಂಚಿ ಹೊರವಲಯದಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲೇ ಕಾಲಕಳೆಯುತ್ತಾರೆ. ಸಾವಯವ ಕೃಷಿಗೆ ಒತ್ತು ನೀಡುತ್ತಿರುವ ಧೋನಿ, ವಿವಿಧ ತರಕಾರಿ, ಹಣ್ಣುಗಳನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿ ಬೆಳೆದಿದ್ದಾರೆ. ಫಾರ್ಮ್ ಹೌಸ್‌ನಲ್ಲಿ ಬೆಳೆದಿರುವ ತರಕಾರಿಗಳನ್ನು ಧೋನಿ ದೂರದ ದುಬೈಗೆ ರಫ್ತು ಮಾಡುತ್ತಿದ್ದಾರೆ. ಸ್ವತಃ ಜಾರ್ಖಂಡ್ ಕೃಷಿ ಇಲಾಖೆಯೇ ದುಬೈಗೆ ಕಳುಹಿಸಿಕೊಡುವ ಜವಾಬ್ದಾರಿ ಹೊತ್ತುಕೊಂಡಿದೆ.

    ಇದನ್ನೂ ಓದಿ: 14ನೇ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲ್ಲ ಈ ಸ್ಟಾರ್ ವೇಗಿ..!

    ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳಿಗೆ ಅರಬ್ ನೆಲದಲ್ಲಿ ಭಾರಿ ಡಿಮ್ಯಾಂಡ್..!ಕೇವಲ ದಬೈಗೆ ಅಲ್ಲದೆ, ಯುಎಇಯ ಕೆಲ ರಾಜ್ಯಗಳಿಗೂ ಧೋನಿ ಫಾರ್ಮ್ ಹೌಸ್‌ನಿಂದ ತರಕಾರಿ ರಫ್ತುತಾಗುತ್ತಿದೆ. ವಿದೇಶದಲ್ಲಿ ಭಾರತದ ತರಕಾರಿಗಳನ್ನು ಪ್ರಸಿದ್ಧಿ ಪಡಿಸಲು ಜಾರ್ಖಂಡ್ ಕೃಷಿ ಇಲಾಖೆ ಮುಂದಾಗಿದ್ದು, ಇದಕ್ಕೆ ಧೋನಿ ಸಾಥ್ ನೀಡುತ್ತಿದ್ದಾರೆ. ರಾಂಚಿಯ ರಿಂಗ್ ರೋಡ್‌ನಲ್ಲಿರುವ ಸೆಂಬೊ ಗ್ರಾಮದಲ್ಲಿರುವ ಧೋನಿ ಫಾರ್ಮ್ ಹೌಸ್, ಸುಮಾರು 43 ಎಕರೆ ಇದೆ. ಇದರಲ್ಲಿ ಸುಮಾರು 10 ಎಕರೆಯಷ್ಟು ಪ್ರದೇಶದಲ್ಲಿ ಧೋನಿ, ಸ್ಟ್ರಾಬರೀಸ್, ಕ್ಯಾಬೇಜ್ (ಎಲೇಕೋಸು), ಟೊಮ್ಯಾಟೋ, ಬ್ರೊಕೊಲಿ (ಕೋಸುಗಡ್ಡೆ), ಪಪ್ಪಾಯ, ಪೀಯಾಸ್ (ಹಸಿರು ಬಟಾಣಿ) ಬೆಳೆಯುತ್ತಾರೆ. ರಾಂಚಿ ಮಾರ್ಕೆಟ್‌ನಲ್ಲಿ ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳಿಗೆ ಭಾರಿ ಬೇಡಿಕೆಯೂ ಇದೆ. ವಿದೇಶಿ ನೆಲದಲ್ಲಿ ಜಾರ್ಖಂಡ್ ತರಕಾರಿಗಳನ್ನು ಪ್ರಸಿದ್ಧಿ ಪಡಿಸುವ ದೃಷ್ಟಿಯಿಂದ ಸ್ವತಃ ಕೃಷಿ ಇಲಾಖೆಯೇ ರಫ್ತಿನ ಜವಾಬ್ದಾರಿ ಹೊತ್ತುಗೊಂಡಿದೆ. ಇದು ಇತರ ರೈತರಿಗೆ ಮಾದರಿಯಾಗಬೇಕು ಎಂಬುದೇ ಇಲಾಖೆಯ ಉದ್ದೇಶ.

    ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಎದೆನೋವು, ಆಸ್ಪತ್ರೆಗೆ ದಾಖಲು

    ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳಿಗೆ ಅರಬ್ ನೆಲದಲ್ಲಿ ಭಾರಿ ಡಿಮ್ಯಾಂಡ್..!ಎಂಎಸ್ ಧೋನಿ ದುಬೈನಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿ ಆಡುವ ವೇಳೆ ದುಬೈನಲ್ಲಿ ಪಂದ್ಯಗಳು ನಡೆದರೆ ಸಾಕಷ್ಟು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮೈದಾನಕ್ಕೆ ಆಗಮಿಸುತ್ತಿದ್ದರು. ಹೊಸ ವರ್ಷದ ಆಚರಣೆಗಾಗಿ ಧೋನಿ ಸದ್ಯ ದುಬೈನಲ್ಲಿದ್ದಾರೆ. ದುಬೈ ಧೋನಿ ಪಾಲಿಗೆ ವಿಶೇಷ ಸ್ಥಳಕೂಡ ಆಗಿದೆ. 2007ರ ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕನಾಗಿದ್ದ ಎಂಎಸ್ ಧೋನಿ, 2020ರ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಯುಎಇಯಲ್ಲಿ ನಡೆದ 13ನೇ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಮೊದಲ ಬಾರಿಗೆ ಸಿಎಸ್ ಕೆ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು.

    ಕೊನೇಕ್ಷಣದಲ್ಲಿ ಒಲಿದ ಅದೃಷ್ಟ, ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ತಂಡಕ್ಕೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts