More

    ಧೋಬಿಗಲ್ಲಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ಸಿಂಧನೂರು ತಹಸಿಲ್ ಕಚೇರಿಗೆ ಮುತ್ತಿಗೆ

    ಸಿಂಧನೂರು: ನಗರದ 6 ನೇ ವಾರ್ಡಿನ ಧೋಬಿಗಲ್ಲಿಯಲ್ಲಿ 30 ವರ್ಷಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ನೇತೃತ್ವದಲ್ಲಿ ನಿವಾಸಿಗಳು ಶುಕ್ರವಾರ ತಹಸಿಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ನಗರದ ಧೋಬಿಗಲ್ಲಿಯಿಂದ ಮೆರವಣಿಗೆ ಮೂಲಕ ತಹಸಿಲ್ ಕಚೇರಿಯ ಮುಂಭಾಗಕ್ಕೆ ಪ್ರತಿಭಟನಾಕಾರರು ಆಗಮಿಸಿದಾಗ ಪೊಲೀಸರು ಗೇಟ್ ಹಾಕಿ ಒಳ ಹೋಗದಂತೆ ತಡೆಹಿಡಿದಿದ್ದರು. ಇದರಿಂದ ಆಕ್ರೋಶಗೊಂಡ ಹೋರಾಟಗಾರರು ಗೇಟ್ ತಳ್ಳಿ ಕಚೆರಿಗೆ ಮುತ್ತಿಗೆ ಹಾಕಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

    ನಗರದ ಕಾಟಿಬೇಸ್ ಸರ್ವೇ ನಂ.768/1 ರಲ್ಲಿನ 4 ಎಕರೆ 29 ಗುಂಟೆ ಸರ್ಕಾರಿ ಭೂಮಿಯಲ್ಲಿ 30 ವರ್ಷಗಳಿಂದ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ 60 ಬಡ ಕುಟುಂಬಗಳಿಗೆ ಈವರೆಗೆ ಹಕ್ಕುಪತ್ರ ವಿತರಿಸಿಲ್ಲ. ಈಗಾಗಲೇ ಕೆಲ ಜಾಗ ಅತಿಕ್ರಮಣಗೊಂಡಿದೆ. ಅಧಿಕಾರಿಗಳು ಈ ವಿಚಾರದಲ್ಲಿ ಜಾಣ ಕುರುಡು ಅನುಸರಿಸುತ್ತಿದ್ದಾರೆ. ಹಲವು ಪ್ರತಿಭಟನೆ, ಧರಣಿ ನಡೆಸಿದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ. ಬೇಡಿಕೆ ಮಾತ್ರ ಈವರೆಗೆ ಈಡೇರಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಡಿ.ಎಚ್.ಪೂಜಾರ್, ಎಂ.ಗಂಗಾಧರ್, ಮಾಬುಸಾಬ್ ಬೆಳ್ಳಟ್ಟಿ, ಕೆ.ನಾಗಲಿಂಗಸ್ವಾಮಿ, ಸುರೇಖಾ ಯಾದವ್, ಹುಲಗಪ್ಪ, ರಾಮು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts