More

    ರಿಷಭ್ ಪಂತ್ ನಾಯಕತ್ವಕ್ಕೆ ಶಿಖರ್ ಧವನ್ ಮನಸೋತಿದ್ದೇಕೆ?

    ಮುಂಬೈ: ಐಪಿಎಲ್‌ನಲ್ಲಿ ಮೊದಲ ಬಾರಿಗೆ ನಾಯಕರಾಗಿ ಆಡಿದ ರಿಷಭ್ ಪಂತ್ ಅವರ ನಾಯಕತ್ವ ಗುಣಗಳ ಬಗ್ಗೆ ಡೆಲ್ಲಿ ತಂಡದ ಅನುಭವಿ ಆರಂಭಿಕ ಶಿಖರ್ ಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ಯಂತ ತಾಳ್ಮೆ ಮತ್ತು ಕುಶಲತೆಯಿಂದ ತಂಡವನ್ನು ಮುನ್ನಡೆಸಿದ ರೀತಿಗೆ ಮನಸೋತಿರುವ ಧವನ್, ಮುಂದಿನ ದಿನಗಳಲ್ಲಿ ಅವರ ನಾಯಕತ್ವ ಇನ್ನಷ್ಟು ಉತ್ತಮವಾಗಲಿದೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ಒಳಗಾದ ಹಿನ್ನೆಲೆಯಲ್ಲಿ 23 ವರ್ಷದ ಪಂತ್ ಕೊನೇಕ್ಷಣದಲ್ಲಿ ಡೆಲ್ಲಿ ತಂಡದ ನಾಯಕರಾಗಿ ನೇಮಕಗೊಂಡಿದ್ದರು.

    ‘ರಿಷಭ್ ಪಂತ್ ಉತ್ತಮವಾಗಿ ನಾಯಕತ್ವ ನಿಭಾಯಿಸಿದರು. ಮೊದಲನೆಯದಾಗಿ ಅವರು ಟಾಸ್ ಗೆದ್ದಿದ್ದು ಖುಷಿಯ ವಿಚಾರ. ಪಿಚ್ ಜಿಗುಟಾಗಿತ್ತು. ಇದರಿಂದ 2ನೇ ಸರದಿಯಲ್ಲಿ ಬ್ಯಾಟಿಂಗ್ ಸುಲಭವಾಗಿತ್ತು. ಪಂತ್ ಅತ್ಯಂತ ತಾಳ್ಮೆಯಿಂದಿದ್ದರು ಮತ್ತು ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಅವರು ಕೆಲವೊಂದು ಉತ್ತಮ ಬದಲಾವಣೆಗಳನ್ನೂ ತಂದರು. ನಾಯಕರಾಗಿ ಅವರಿಗೆ ಇದು ಮೊದಲ ಪಂದ್ಯವಾಗಿತ್ತು. ಮುಂದಿನ ದಿನಗಳಲ್ಲಿ ಅನುಭವದಿಂದ ಅವರು ಇನ್ನಷ್ಟು ಉತ್ತಮವಾಗಬಹುದು. ತಾಳ್ಮೆಯೇ ಅವರಲ್ಲಿನ ಅತ್ಯುತ್ತಮ ಅಂಶವಾಗಿದೆ’ ಎಂದು ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಹೇಳಿದರು.

    ಇದನ್ನೂ ಓದಿ: ಧೋನಿ ಮೇಲೆ ದ್ರಾವಿಡ್ ಸಿಟ್ಟಾಗಿದ್ದರು ಎಂದ ವೀರೇಂದ್ರ ಸೆಹ್ವಾಗ್​!

    ತಂಡದ ಹಿರಿಯ ಆಟಗಾರರಾಗಿ ರಿಷಭ್ ಪಂತ್‌ಗೆ ಏನು ಸಲಹೆ ನೀಡುತ್ತೀರಾ ಎಂಬ ಪ್ರಶ್ನೆಗೆ ಧವನ್, ‘ಖಂಡಿತವಾಗಿಯೂ ಸಲಹೆಗಳನ್ನು ನೀಡುತ್ತೇನೆ. ಯುವ ಆಟಗಾರರು ನನ್ನ ಬಳಿಗೆ ಬಂದು ಯಾವುದೇ ರೀತಿಯ ಸಲಹೆಗಳನ್ನು ಕೇಳಿದರೂ ನೀಡುತ್ತೇನೆ. ನಾನೂ ನನ್ನ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೇನೆ’ ಎಂದರು.

    ಕಾಲೆಳೆಯಲು ಬಂದ ಪಾಕ್ ಪತ್ರಕರ್ತನಿಗೆ ವೆಂಕಟೇಶ್ ಪ್ರಸಾದ್ ದಿಟ್ಟ ತಿರುಗೇಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts