More

    ಇಟ್ಟಿಗಟ್ಟಿಯಲ್ಲಿ ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನ ನಾಳೆ

    ಧಾರವಾಡ: ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಿ. ಹನುಮಂತರಾವ್ ದೇಸಾಯಿ ಸಭಾಂಗಣದಲ್ಲಿ ಫೆ. 14ರಂದು ಧಾರವಾಡ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ತಹಸೀಲ್ದಾರ್ ಸಂತೋಷಕುಮಾರ ಬಿರಾದಾರ ಚಾಲನೆ ನೀಡುವರು. ತಾಪಂ ಇಒ ಎಸ್.ಎಸ್. ಖಾದ್ರೊಳ್ಳಿ ಉಪಸ್ಥಿತರಿರುವರು ಎಂದರು.

    ಬೆಳಗ್ಗೆ 10.30ಕ್ಕೆ ಕಲಬುರಗಿ ಕೇಂದ್ರೀಯ ವಿವಿ ವಿಶ್ರಾಂತ ಕುಲಪತಿ ಡಾ. ಎಚ್.ಎಂ. ಮಹೇಶ್ವರಯ್ಯ ಸಮ್ಮೇಳನಕ್ಕೆ ಚಾಲನೆ ನೀಡುವರು. ಸಮ್ಮೇಳನಾಧ್ಯಕ್ಷ, ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಇತರರು ಪಾಲ್ಗೊಳ್ಳುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

    ಮಧ್ಯಾಹ್ನ 12.30ಕ್ಕೆ ನಡೆಯುವ ಉಪನ್ಯಾಸ ಗೋಷ್ಠಿಯಲ್ಲಿ ಜನಪದ ಪ್ರದರ್ಶನ ಕಲೆಗಳು ಕುರಿತು ಮಲ್ಲಯ್ಯ ತೋಟಗಂಟಿ, ನಿಂಗಣ್ಣ ಕುಂಟಿಯವರ ಸಾಹಿತ್ಯಾವಲೋಕನ ಕುರಿತು ಮಾರ್ತಾಂಡಪ್ಪ ಕತ್ತಿ ವಿಷಯ ಮಂಡಿಸುವರು. ರಾಜಶೇಖರ ಬಶೆಟ್ಟಿ, ಡಾ. ಅಮೃತಾ ಮಡಿವಾಳ ಉಪಸ್ಥಿತರಿರುವರು. ಡಾ. ವಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸುವರು. 1.45ಕ್ಕೆ ಕವಿಗೋಷ್ಠಿ ನಡೆಯಲಿದ್ದು, ರಂಜಾನ ಕಿಲ್ಲೇದಾರ ಆಶಯ ನುಡಿ ಮಂಡಿಸುವರು. ಚನ್ನಪ್ಪ ಅಂಗಡಿ ಅಧ್ಯಕ್ಷತೆ ವಹಿಸುವರು ಎಂದರು.

    ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ಶ್ರೀಶೈಲ ಹುದ್ದಾರ ಸಮಾರೋಪ ನುಡಿ ಮಂಡಿಸುವರು. ಸಮ್ಮೇಳನಾಧ್ಯಕ್ಷ ನಿಂಗಣ್ಣ ಕುಂಟಿ, ಮಾಜಿ ಶಾಸಕಿ ಸೀಮಾ ಮಾಸೂತಿ, ಪ್ರಕಾಶ ಉಡಿಕೇರಿ, ಮಂಜುನಾಥ ಅಡಿವೇರ, ಎನ್.ಎಸ್. ದಫೇದಾರ, ಇತರರು ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಶಿವಣ್ಣ ಅದರಗುಂಚಿ, ಎಸ್.ಎಫ್. ಸಿದ್ಧನಗೌಡರ, ರಮೇಶ ಲಿಂಗದಾಳ ಉಪಸ್ಥಿತರಿರುವರು. ಶಂಕರ ಅರ್ಕಸಾಲಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

    ಕಸಾಪ ತಾಲೂಕಾಧ್ಯಕ್ಷ ಎಫ್.ಬಿ. ಕಣವಿ, ಡಾ. ಜಿನದತ್ತ ಹಡಗಲಿ, ಮಹಾದೇವಿ ದೊಡಮನಿ, ರವೀಂದ್ರ ದೇಸಾಯಿ, ಆರ್.ಕೆ. ಕೋರಿ, ಚನ್ನಬಸಪ್ಪ ನವಲೂರ, ಚಂದ್ರಶೇಖರ ಕುಂಬಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts