More

    ರಾಜ್ಯದಲ್ಲಿ 525 ಕೆರೆಗಳಿಗೆ ಕಾಯಕಲ್ಪ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಹೇಳಿಕೆ

    ಮಂಡ್ಯ: ರಾಜ್ಯದಲ್ಲಿರುವ 525 ಕೆರೆಗಳಿಗೆ ಕಾಯಕಲ್ಪ ನೀಡಲು 39.59 ಕೋಟಿ ರೂ ಅನುದಾನ ವಿನಿಯೋಗಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮ ವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಡೆ ಹೇಳಿದರು.
    ತಾಲೂಕಿನ ಗೋಪಾಲಪುರ ಗ್ರಾಮದ ಕೆರೆ ಅಂಗಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಮಂಡ್ಯ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ 503ನೇ ಕೆರೆ ಮತ್ತು ಶುದ್ಧಗಂಗಾ ಘಟಕ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ರಾಜ್ಯದಲ್ಲಿ 2016 ರಿಂದ ಸ್ಥಳೀಯ ಜನರ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆಯ ಪುನಶ್ಚೇತನಕ್ಕೆ ಹೊಸ ನಾಂದಿ ಹಾಡಲಾಯಿತು. ರಾಜ್ಯದಲ್ಲಿ ಇದುವರೆಗೂ 525 ಕೆರೆಗಳ ಹೂಳೆತ್ತುವ ಕಾರ್ಯವನ್ನು ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಈವರೆಗೆ ಸುಮಾರು 95 ಲಕ್ಷ ರೂ. ವೆಚ್ಚದಲ್ಲಿ ಕೆರೆಗಳನ್ನು ಪುನಶ್ಚೇತನ ಮಾಡಲಾಗಿದೆ. ಇದರಿಂದ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿವೆ ಎಲ್ಲ ಕೆರೆಗಳಿಗೂ ನೀರು ಬರುತ್ತಿರುವುದು ಶ್ರೀಮಂಜುನಾಥ ಸ್ವಾಮಿಯ ಅನುಗ್ರಹ ಎಂದು ಭಾವಿಸುತ್ತಾ ಇದೀಗ ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ ಗೋಪಾಲಪುರ ಕೆರೆಯನ್ನು ಊರಿನವರಿಗೆ ಪುನರ್ ಸಮರ್ಪಿಸಲಾಗುತ್ತಿದೆ ಎಂದರು.
    ಜಿಲ್ಲೆಯಲ್ಲಿ ಸುಮಾರು 16052 ಧರ್ಮಸ್ಥಳ ಸಂಘಗಳಿದ್ದು, ಸುಮಾರು 1.33 ಲಕ್ಷ ಸದಸ್ಯರಿದ್ದು, ಗ್ರಾಮೀಣಾಭಿವೃದ್ದಿಯಲ್ಲಿ ಆರ್ಥಿಕ ಕ್ಷೇತ್ರವನ್ನು ಬಲಪಡಿಸುತ್ತಿವೆ, 69 ಕೋಟಿ ರೂ.ಉಳಿತಾಯ ಮಾಡಿದ್ದಾರೆ. ವಾರಕ್ಕೆ 10, 20 ರೂ.ಗಳ ಉಳಿತಾಯವನ್ನು ಸಂಗ್ರಹಿಸಿದ ಹಣವಾಗಿದೆ ಎಂದರು.
    ಪ್ರಸ್ತುತ ಜಿಲ್ಲೆಯಲ್ಲಿ ಈ ವರ್ಷ ಸಂಘದ ಲಾನುಭವಿಗಳಿಗೆ ಬ್ಯಾಂಕ್‌ಗಳಿಂದ 460 ಕೋಟಿ ರೂ. ಗಳನ್ನು ಸಾಲ ಕೊಡಿಸಿದ್ದಾರೆ. ನಾವು ಸಾಲ ಕೊಡುವುದಿಲ್ಲ, ನಾವು ದಾನ ಮಾಡುತ್ತೇವೆ, ಸಾಲವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ನೋಡಿಕೊಳ್ಳುವುದು ಕಾರ್ಯಕರ್ತರ ಕಾಯಕವಾಗಿದೆ ಎಂದು ಹೇಳಿದರು.
    ರಾಜ್ಯದಲ್ಲಿ 16 ಸಾವಿರ ಕೋಟಿ ರೂ.ಗಳ ಸಾಲವನ್ನು ಬ್ಯಾಂಕ್‌ಗಳಿಂದ ಕೊಡಿಸಲಾಗಿದೆ. ಫಲಾನುಭವಿಗಳು ಸದುಪಯೋಗ ಪಡಿಸಿಕೊಂಡು ಮರು ಪಾವತಿ ಮಾಡಿದವರಿಗೆ ಮತ್ತಷ್ಟು ಸಾಲವನ್ನು ಕೊಡಿಸಲಾಗುತ್ತಿದೆ. ಹೊಸ ಯೋಜನೆಗಳನ್ನು ಜನತೆಯ ಆರ್ಥಿಕ ಸಬಲೀಕರಣಕ್ಕಾಗಿ ಆರ್ಥಿಕ ಯೋಜನೆಗಳಲ್ಲಿ 8221 ಸದಸ್ಯರಿಗೆ 12.16 ಕೋಟಿ ರೂ., 42,193 ರೂ.ಗಳ ಲಾಭಾಂಶವನ್ನು ವಿತರಣೆ ಮಾಡಲಾಗಿದೆ.
    ಬದಲಿ ಇಂಧನ ಯೋಜನೆಗಳಲ್ಲಿ ಸೋಲಾರ್, ಕುಕ್‌ಸ್ಟವ್ ಹಾಗೂ ವಾತ್ಸಲ್ಯ ಕಾರ್ಯಕ್ರಮದಡಿ ಮನೆಗಳ ನಿರ್ಮಾಣ, ಸಮುದಾಯ ಕಾರ್ಯಕ್ರಮದಡಿ ಕೆರೆ ಕಟ್ಟೆ, ಕೃಷಿ ಯಂತ್ರ, ವಿದ್ಯಾರ್ಥಿ, ಶಿಕ್ಷಕರಿಗೆ, ವಯೋವೃದ್ದಿಗೆ ಆರ್ಥಿಕ ನೆರವು, ಜನಜಾಗೃತಿ ಕಾರ್ಯಕ್ರಮ, ಕಾಮನ್ ಸರ್ವಿಸ್ ಕೇಂದ್ರ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಜನರು ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
    ಶಾಸಕ ಎಂ.ಶ್ರೀನಿವಾಸ್, ಜಿಪಂ ಸಿಇಓ ಶಾಂತ ಎಲ್ ಹುಲ್ಮನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕಿ ಎಂ. ಚೇತನಾ, ತಾಲೂಕು ಕ್ಷೇತ್ರ ಯೋಜನಾಧಿಕಾರಿ ನಾರಾಯಣಪ್ಪ ಪಠಾಳಿ, ಗ್ರಾಪಂ ಅಧಿಕಾರಿಗಳಾದ ಅನಿತಾ, ಕೋಮಲಾ, ಮಲ್ಲೇಶ್, ಗ್ರಾಪಂ ಅಧ್ಯಕ್ಷೆ ಸುಧಾ, ಗ್ರಾಮದ ಕೆರೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎಸ್.ಸಿದ್ದರಾಜು, ಬಾನುಪ್ರಕಾಶ್, ವೆಂಕಟಪ್ಪ, ತಾಪಂ ಮಾಜಿ ಸದಸ್ಯ ಬೋರೇಗೌಡ ಮತ್ತು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts