More

    ಧರ್ಮಾಚರಣೆಯಿಂದ ಅನಂತ ಆನಂದ: ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅಭಿಮತ

    ಮಾಗಡಿ : ಉಡುಪಿ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರು 42ನೇ ಚಾತುರ್ವಾಸ್ಯ ವ್ರತ ಸವಾರೋಪ ಮತ್ತು ಸೀಮೋಲ್ಲಂನ ಅಂಗವಾಗಿ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಬೆಂಗಳೂರಿನ ಭಾಗವತ ಆಶ್ರಮದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿದ ನಂತರ ಸೋಮವಾರ ಸಂಜೆ ಪರಿವಾರದವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ರಂಗನಾಥ ಸ್ವಾಮಿಗೆ ಮಂಗಳಾರತಿ ಸಮರ್ಪಿಸಿದ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ವಾಚರಣೆಯಿಂದ ಅನಂತ ಫಲ ಲಭ್ಯ ಎಂದರು.

    ಚಾತುರ್ವಾಸ್ಯ ವ್ರತ ಕೇವಲ ಧಾರ್ಮಿಕ ಸಂಪ್ರದಾಯವಲ್ಲ. ಇದು ದೈಹಿಕ, ವಾನಸಿಕ, ಸಾವಾಜಿಕ ಮತ್ತು
    ನೈಸರ್ಗಿಕ ಸ್ವಾಸ್ಥ್ಯ ಪಾಲನೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಇದು ಯತಿಗಳಿಗೆ ವಾತ್ರವಲ್ಲದೆ ಎಲ್ಲರಿಗೂ ಅನ್ವಯವಾಗುವಂಥದ್ದು. ಇಲ್ಲಿ ಪುಣ್ಯ ಸಂಪಾದನೆಗೆ ಅನಂತ ಅವಕಾಶವಿದೆ ಎಂದರು.

    ಬೆಂಗಳೂರಿನ ಗಿರಿನಗರದ ಭಾಗವತ ಆಶ್ರಮದಲ್ಲಿ ಚಾತುರ್ವಾಸ ಪರ್ಯಂತ 55 ದಿನದ ವ್ರತಾಚರಣೆಯಲ್ಲಿ ನಿತ್ಯವೂ ಸಂಜೆ ವಿವಿಧ ವಿದ್ವಾಂಸರಿಂದ ರಾವಾಯಣ ಸಂದೇಶ, ಶ್ರೀಪಾದರಾಜರ ಮಧ್ವನಾಮ ಪಾರಾಯಣ, ಪ್ರೋಷ್ಠಪದಿ ಭಾಗವತ, ಉದಯೋನ್ಮುಖ ಗಾಯಕರಿಂದ ಸಂಗೀತ ಸೇವೆ, ‘ವಿದ್ಯೇಶ ವಿಠಲ ನಾದ ವೈಭವ’ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು ಎಂದು ಸ್ವಾಮೀಜಿ ವಿವರಿಸಿದರು.

    ದೇಶ ಕರೊನಾ ಮುಕ್ತವಾಗಲು ಒಂದು ದಿನ ದೀಪ ಬೆಳಗಿ ಎಂದು ಪ್ರಧಾನಿ ಮೋದಿ ಒಂದೂವರೆ ವರ್ಷದ ಹಿಂದೆ ಕರೆ ನೀಡಿದ್ದರು. ಅಂದಿನಿಂದ ನಿರಂತರವಾಗಿ ಮಠದಲ್ಲಿ ನಿತ್ಯ ಸಂಜೆ ನಮ್ಮ ಆರಾಧ್ಯ ಮೂರ್ತಿ ಶ್ರೀ ಸೀತಾರಾಮರ ದೇವರಿಗೆ ತುಪ್ಪದ ದೀಪ ಸಮರ್ಪಿಸಿ ಲೋಕವು ಕರೊನಾ ಮುಕ್ತವಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಕರೊನಾ ಸೇನಾನಿಗಳಿಗೆ, ದೇಶ ಕಾಯುವ ಯೋಧರಿಗೆ ಇನ್ನಷ್ಟು ಶಕ್ತಿಯನ್ನು ದೇವರು ಕರುಣಿಸಲಿ ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.

    ಪ್ರತಿಯೊಬ್ಬರಲ್ಲೂ ಆಧ್ಯಾತ್ಮಿಕ ಶಕ್ತಿ ಹೆಚ್ಚಲು ಚಾತುರ್ವಾಸ್ಯ ವ್ರತಾಚರಣೆ ಅತ್ಯಂತ ಪೂರಕ. ಧಾರ್ಮಿಕ ಮತ್ತು ಸಾವಾಜಿಕ ಚಟುವಟಿಕೆಗಳನ್ನು ವಾಡಲು ನಮ್ಮ ದೇಹ ಮತ್ತು ಮನಸ್ಸುಗಳು ಚಾರ್ಜ್ ಆಗಬೇಕು. ಅದಕ್ಕಾಗಿ ಶ್ರವಣ, ಮನನ, ಜಪ, ಗಾಯನ ಮತ್ತು ದೀಪಾರಾಧನೆಗಳನ್ನು ಚಾತುರ್ವಾಸ್ಯ ಸಂದರ್ಭದಲ್ಲಿ ವಾಡಿ ಲೋಕ ಹಿತಕ್ಕಾಗಿ ಸಮರ್ಪಣೆ ವಾಡಿದ್ದೇವೆ ಎಂದರು.

    ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಹೋಮ, ಹವನ ನಡೆಯಿತು. ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts