More

    ಧರ್ಮ, ಕರ್ಮ ನ್ಯಾಯದ ಭಾಗಗಳು

    ಚಿಕ್ಕೋಡಿ : ಧರ್ಮ ಶಾಸ್ತ್ರ, ನ್ಯಾಯಶಾಸ್ತ್ರ ಮತ್ತು ಕರ್ಮಶಾಸ್ತ್ರವು ನ್ಯಾಯದ ಭಾಗಗಳಾಗಿದ್ದು ಕೆಟ್ಟದ್ದೆಲ್ಲ ಕರ್ಮವಲ್ಲ ಎಂದು ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚವ್ಹಾಣ ಹೇಳಿದರು.

    ಇಲ್ಲಿನ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಬೆಂಗಳೂರು ಸಂಸದೀಯ ಸುಧಾರಣಾ ಸಂಸ್ಥೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ದ್ವಾರಕನಾಥ ಬಾಬು, ಸಂಶೋಧನಾ ನಿರ್ದೇಶಕ ಸಿ.ಎಸ್. ಪಾಟೀಲ ಮಾತನಾಡಿದರು.

    ಶಿವಾನಂದ ಚೊನ್ನದ, ವಿ.ಎಸ್.ಬಿಳಗಿ, ದೀಪಾಲಿ ಪಾಟೀಲ, ಎಲ್.ಎ. ಸರದಾರ, ಎಸ.ಬಿ. ನಾಗರಾಳೆ, ಪಿ.ಸಿ. ಚವ್ಹಾಣ, ಎಂ.ಎಚ್.ನದಾಫ, ಪಿ.ಎಂ.ಕಮತೆ, ಎಸ್.ಡಿ.ಶಿರಹಟ್ಟಿ, ಕೆ.ಎಲ್. ಕಾಂಬಳೆ, ಎಂ.ಎಸ್.ಮದಬಾನ್ವಿ, ಪ್ರಾಚಾರ್ಯ ಡಾ.ಡಿ.ಬಿ. ಸೊಲಾಪುರೆ, ಅಪೂರ್ವಾ ಶಿರಕೋಳಿ, ಆಕಾಂಕ್ಷಾ ಬೋರಗಾಂವೆ, ಎಸ್.ಡಿ. ಖಾಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts