More

    ಕೊವಿಡ್​-19 ಹಾಟ್​​ಸ್ಫಾಟ್​ ಆಗಿದ್ದ ಮುಂಬೈನ ಧಾರಾವಿಯನ್ನು ಪ್ರಶಂಸಿಸಿದ ಡಬ್ಲ್ಯೂಎಚ್​ಒ…!

    ಎರಡು ತಿಂಗಳ ಹಿಂದೆ ಮುಂಬೈನ ಧಾರಾವಿ ಕರೊನಾ ಸೋಂಕಿನ ಹಾಟ್​ಸ್ಪಾಟ್​ ಆಗಿತ್ತು. ಕೊವಿಡ್-19ನಿಂದ ತತ್ತರಿಸಿ ಹೋಗಿತ್ತು.
    ಏಷ್ಯಾದಲ್ಲೇ ಅತ್ಯಂತ ದೊಡ್ಡ ಸ್ಲಮ್​ ಎನಿಸಿಕೊಂಡಿರುವ ಧಾರಾವಿ ಲಿಂಕ್​ನಿಂದ ದೇಶದ ವಿವಿಧೆಡೆಗೆ ಹೋದವರಿಂದ ರಾಷ್ಟ್ರದಲ್ಲಿ ಕರೊನಾ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ.

    ಅಂದು ಕೊವಿಡ್​-19 ಗೂಡಾಗಿದ್ದ ಧಾರಾವಿ ಇಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಶಂಸೆಗೆ ಒಳಗಾಗಿದೆ. ಅಲ್ಲಿ ಸೋಂಕು ನಿಯಂತ್ರಣ ಮಾಡಿದ ಕ್ರಮವನ್ನು ಡಬ್ಲ್ಯೂಎಚ್​ಒ ಶ್ಲಾಘಿಸಿದೆ. ಇದನ್ನೂ ಓದಿ: ಮುಖ್ಯಮಂತ್ರಿ ನಿವಾಸಕ್ಕೆ ಬಾಂಬ್​ ಹಾಕುವುದಾಗಿ ಬೆದರಿಕೆ ಕರೆ ಮಾಡಿದ್ದವನ ಬಂಧನ

    ಕರೊನಾವನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಿದ ಕೆಲವು ನಗರಗಳ ಹೆಸರನ್ನು ಹೇಳಿ ಉದಾಹರಣೆ ನೀಡಿರುವ ಡಬ್ಲ್ಯೂಎಚ್ಒ ಮಹಾನಿರ್ದೇಶಕ ಡಾ. ಟೆಡ್ರೋಸ್​ ಅಧಾನೊಮ್​ ಘೆಬ್ರೆಯೆಸಸ್ ಅವರು ಧಾರಾವಿ ಹೆಸರನ್ನೂ ಉಲ್ಲೇಖಿಸಿ ಪ್ರಶಂಸಿಸಿದ್ದಾರೆ.
    ಇಂದು ಮಾತನಾಡಿದ ಡಾ. ಟೆಡ್ರೋಸ್​, ಕರೊನಾ ಸೋಂಕು ಏಕಾಏಕಿ ತೀವ್ರಗೊಂಡರೂ ಅದನ್ನು ಮತ್ತೆ ನಿಯಂತ್ರಣಕ್ಕೆ ತರಬಹುದು ಎಂಬುದಕ್ಕೆ ಜಗತ್ತಿನಲ್ಲಿ ಹಲವು ಉದಾಹರಣೆಗಳು ಸಿಗುತ್ತವೆ. ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್​, ನ್ಯೂಜಿಲ್ಯಾಂಡ್​, ಇಟಲಿ, ಸ್ಪೇನ್​, ಸೌತ್​ ಕೊರಿಯಾ ಮತ್ತು ಮುಂಬೈನ ಧಾರಾವಿಗಳು ಉತ್ತಮ ಉದಾಹರಣೆಗಳು ಎಂದು ಹೇಳಿದ್ದಾರೆ.

    ಧಾರಾವಿಯಂತೂ ಅತ್ಯಂತ ಜನನಿಬಿಡ ಪ್ರದೇಶ. ಅಂಥದ್ದರಲ್ಲಿ ಅಲ್ಲಿ ಕರೊನಾ ಚೈನ್​ ಬ್ರೇಕ್​ ಮಾಡಲಾಗಿದೆ. ತಪಾಸಣೆ, ಟ್ರೇಸಿಂಗ್​, ಐಸೋಲೇಶನ್​ ಮತ್ತು ಸೋಂಕಿತರಿಗೆ ನೀಡಲಾಗುವ ಶೀಘ್ರ, ಉತ್ತಮ ಚಿಕಿತ್ಸೆಗಳಿಂದ ಕೊವಿಡ್​-19ನ್ನು ನಿಯಂತ್ರಿಸಬಹುದು ಎಂದು ಡಾ. ಟೆಡ್ರೋಸ್​ ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ವಿಕಾಸ್​ ದುಬೆ ಅಂತ್ಯಕ್ರಿಯೆ ವೇಳೆ ಆವೇಶಗೊಂಡ ಪತ್ನಿ; ‘ಅವನಿಗೆ ಇಂಥ ಸಾವು ಬಂದಿದ್ದು ಯೋಗ್ಯವಾಗಿದೆ’ ಎಂದು ಕೂಗಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts