More

    ಪಿಂಚಣಿ ವಂಚಿತರ ಮೌನ ಪ್ರತಿಭಟನೆ

    ಹಿರಿಯೂರು: ಪಿಂಚಣಿಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದ ಶಂಕರಪ್ಪ ನಾ ಬೋರೆಡ್ಡಿ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪಿಂಚಣಿ ವಂಚಿತ ನೌಕರರು ನಗರದಲ್ಲಿ ಗುರುವಾರ ಮೌನ ಪ್ರತಿಭಟನೆ ನಡೆಸಿದರು.

    ನಗರದ ಅಂಬೇಡ್ಕರ್ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಜಮಾಯಹಿಸಿದ ಅನುದಾನಿತ ಶಾಲಾ ಕಾಲೇಜುಗಳ ನೌಕರರು, ಕಪ್ಪು ಶಾಲು ಹೆಗಲಿಗೆ ಹಾಕಿಕೊಂಡು ಮುಷ್ಕರ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ನಿಶ್ಚಿತ ಪಿಂಚಣಿ, ಕಾಲ್ಪನಿಕ ವೇತನ ಮತ್ತು ಜ್ಯೋತಿ ಸಂಜೀವಿನಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನುದಾನಿತ ಪಿಂಚಣಿ ವಂಚಿತ ನೌಕರರು ನಡೆಸುತ್ತಿರುವ ಹೋರಾಟ ಇಂದಿಗೆ 141 ದಿನಕ್ಕೆ ಕಾಲಿಟ್ಟಿದೆ. ಈ ವೇಳೆಯಲ್ಲಿ ಪಿಂಚಣಿಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರದ ಸಂಗತಿ. ಆದರೂ ಸರ್ಕಾರ ಎಚ್ಚೆತ್ತುಕೊಳ್ಳದೆ ಇರುವುದು ದುರಂತ ಎಂದು ಬೇಸರಿಸಿದರು.

    2006ರ ಪೂರ್ವದಲ್ಲಿ ನೇಮಕಾತಿ ಹೊಂದಿ ಅನಂತರ ಅನುದಾನಕ್ಕೊಳಪಟ್ಟಿರುವ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳ ಆರ್ಶೀವಾದದೊಂದಿಗೆ 2022ರ ಅ.7ರಿಂದ ಕಾಲ್ನಡಿಗೆ ಜಾಥಾ, ಅರೆಬೆತ್ತಲೆ ಸೇವೆ ಹಾಗೂ ರಕ್ತದಾನ ಶಿಬಿರ ಮೂಲಕ ಅ. 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿ, ಅಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಗುರುವಾರ 141 ದಿನಕ್ಕೆ ಕಾಲಿಟ್ಟಿದೆ. ಪ್ರತಿನಿತ್ಯ ಜಿಲ್ಲೆಯ ಸರದಿ ಪ್ರಕಾರ ನಿರಂತವಾಗಿ ಹೋರಾಟ ನಡೆಯುತ್ತಿದೆ ಎಂದರು.

    ಶಿಕ್ಷಕರು ಹಾಗೂ ಸೈನಿಕರ ಜೀವನ ಭದ್ರತೆ ಗೌರವಿಸದ ಯಾವುದೇ ರಾಷ್ಟ್ರ ಹಾಗೂ ರಾಜ್ಯಕ್ಕೆ ಭವಿಷ್ಯವಿಲ್ಲ ಎಂಬುದು ಇಡೀ ಪ್ರಪಂಚವೇ ಒಪ್ಪಿರುವ ಸತ್ಯ. ಜೀವಮಾನವೀಡಿ ದುಡಿದು ಮುಪ್ಪಿನಲ್ಲಿ ಪಿಂಚಣಿ ವಂಚಿತರಾಗುವುದು ದುರಂತ. ಈಗಾಗಲೇ ಕೆಲವು ನೌಕರರು ಅನುದಾನಕ್ಕೊಳಪಟ್ಟು ಒಂದೆರೆಡು ವಷರ್ರ್ದಲ್ಲೇ ಮರಣ ಹೊಂದಿರುವ, ನಿವೃತ್ತಿ ಹೊಂದಿರುವ ನೌಕರರ ಕುಟುಂಬಗಳ ಸ್ಥಿತಿ ಶೋಚನೀಯವಾಗಿದೆ. ಇದು ಪ್ರಜಾಕಲ್ಯಾಣ ಬಯಸುವ ಯಾವುದೇ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಉಪನ್ಯಾಸಕರಾದ ಕೆ.ರಂಗಪ್ಪ, ಎಲ್.ಶಾಂತಕುಮಾರ್, ಈ.ನಾಗೇಂದ್ರಪ್ಪ, ಎಚ್.ಆರ್.ಲೋಕೇಶ್, ಮಂಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts