More

    ಧರ್ಮಸ್ಥಳ ಮಾದರಿಯಲ್ಲಿ ಶಿರಸಂಗಿ ಅಭಿವೃದ್ಧಿ

    ಶಿರಸಂಗಿ: ಧರ್ಮಸ್ಥಳ ಮಾದರಿಯಲ್ಲಿ ಶಿರಸಂಗಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಯೋಜನೆ ರೂಪಿಸಿದ್ದು, ಶ್ರೀಕ್ಷೇತ್ರದ ಅಭಿವೃದ್ಧಿಗೆ ವಿಶ್ವಕರ್ಮ ಸೇರಿ ಇತರ ಸಮುದಾಯದ 63 ಮಠಾಧೀಶರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಹಾಪುರದ ಶ್ರೀ ವಿಶ್ವಕರ್ಮ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.

    ಇಲ್ಲಿನ ಕಾಳಿಕಾ ದೇವಸ್ಥಾನದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ, ಕಲಾಪ್ರದರ್ಶನ ಹಾಗೂ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿ, ವಿಶ್ವಕರ್ಮರು ಕಲಾ ಆರಾಧಕರಾಗಿದ್ದು, ಅವರಿಗೆ ಕಲೆ ರಕ್ತಗತವಾಗಿ ಬಂದಿದೆ. ವಿಶ್ವಕರ್ಮರು ಸಕಲ ವಿದ್ಯಾ ಪಾರಂಗರತರಾಗಿದ್ದಾರೆ ಎಂದರು.
    ಮಧ್ಯಪ್ರದೇಶದ ವಿಶ್ವಕರ್ಮ ವಂಶಿ ಸೇನಾದ ರಾಷ್ಟ್ರೀಯ ಅಧ್ಯಕ್ಷ ಮನೋಜ ಪಾಂಚಾಳ ಮಾತನಾಡಿ, ದೇಶದ ಸಾಂಸ್ಕೃತಿಕ ಲೋಕಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದರು.

    ವಿಶ್ವಕರ್ಮ ಸಮುದಾಯ ವಿಕಾಸ ಸಂಸ್ಥೆ ಅಧ್ಯಕ್ಷ ಪಿ.ಬಿ.ಬಡಿಗೇರ ಮಾತನಾಡಿ, ಈಗಾಗಲೇ ಶ್ರೀಕ್ಷೇತ್ರದಲ್ಲಿ ಮೂಲ ಸೌಕರ್ಯ ಸೇರಿ ಅಭಿವೃದ್ಧಿ ಕೆಲಸಗಳು ನಡೆದಿದ್ದು, ಧರ್ಮಸ್ಥಳ ಮಾದರಿಯಲ್ಲಿ ಹಂತ ಹಂತವಾಗಿ ಕ್ಷೇತ್ರ ಅಭಿವೃದ್ಧಿ ಪಡಿಸಲಾಗುವುದು ಎಂದರು.

    ಪ್ರಶಸ್ತಿ ಪ್ರದಾನ: ವಿಶ್ವಕರ್ಮ ಪೂಜಾ ಮಹೋತ್ಸವ ಅಂಗವಾಗಿ ಜರುಗಿದ ರಾಜ್ಯಮಟ್ಟದ ಕಲಾ ಪ್ರದರ್ಶನದ ಶಿಲ್ಪಕಲಾ ವಿಭಾಗದಲ್ಲಿ: ಡಾ.ಎಂ.ಕೆ.ಗೀರಿಶಕುಮಾರ ದಾವಣಗೆರೆ, ಆನಂದ ಹಾವನೂರ ಬೆಳಗಾವಿ, ಮೌನೇಶ ಕಂಬಾರ ಕಕ್ಕೆರಾ, ಮನೋಹರ ಪತ್ತಾರ ಶಿಗ್ಲಿ, ಮಹಾದೇವಪ್ಪ ಹಾವೇರಿ,. ಚಿತ್ರಕಲಾ ವಿಭಾಗದಲ್ಲಿ: ಪ್ರದೀಪ ಗಣಿಮಠ ವಿಜಯಪುರ, ವೀರೇಶ ಬಡಿಗೇರ ಜಳಗೇರಿ, ಉಮೇಶ ಮಂಜಣ್ಣವರ ಧಾರವಾಡ, ಹರೀಶ ಎಸ್.ಎಸ್. ದಾವಣಗೇರೆ, ಪೂಜಾ ಮರಬಸನ್ನವರ ಹುಕ್ಕೇರಿ. ಛಾಯಾಚಿತ್ರ ವಿಭಾಗ: ಪ್ರಸನ್ನವಿರೂಪಾಕ್ಷ ಬಡಿಗೇರ ಮಂಗಳೂರ, ಪ್ರಮೋದ ಕೆ.ವಿ. ದಾವಣಗೆರೆ, ಅರುಣ ಕಮ್ಮಾರ ದಾವಣಗೆರೆ, ಮಾನಪ್ಪ ಬಡಿಗೇರ ಇಲಕಲ್, ಶರಣಪ್ಪ ನವಲಗುಂದ ತಾವರಗೇರಾ ಅವರಿಗೆ ಪ್ರಶಸ್ತಿ ನೀಡಲಾಯಿತು.

    ತೀರ್ಪುಗಾರರಾಗಿ ಬೆಂಗಳೂರಿನ ಹಿರಿಯ ಕಲಾವಿದ ಬಾಬು ಜತ್ತಕರ, ವೇಣುಗೋಪಾಲ, ಧಾರವಾಡದ ಎಸ್.ಎಂ.ಲೋಹಾರ ಪಾಲ್ಗೊಂಡಿದ್ದರು. 3 ದಿನಗಳ ಕಾಲ ಅನ್ನದಾಸೋಹ ಕಾರ್ಯ ನಿರ್ವಹಿಸಿದ ಅನ್ನದಾನಿಗಳಿಗೆ ಸತ್ಕರಿಸಲಾಯಿತು. ಶಂಕರಲಾಲಜಿ ಪಂಚಾಳ, ರಾಮಚಂದ್ರ ಪಂಚಾಳ, ಪರಶುರಾಮ ಪತ್ತಾರ, ಪ್ರಶಾಂತ ಆಚಾರ್ಯ, ಶಾರದಾ ಪತ್ತಾರ, ಸವಿತಾ ಬಡಿಗೇರ, ಮೌನೇಶ್ವರ ಸುಳ್ಳದ, ಎಸ್.ಕೆ. ಪತ್ತಾರ, ಎಂ.ಕೆ. ಪತ್ತಾರ, ಡಾ. ವಿರೂಪಾಕ್ಷ ಬಡಿಗೇರ, ವೀರಣ್ಣ ಅರ್ಕಸಾಲಿ, ಮೌನೇಶ ಬಡಿಗೇರ, ನವೀನ ಕಡ್ಲಾಸ್ಕರ, ಜಿ.ಎ. ಪತ್ತಾರ, ಎಸ್.ಎಂ. ಲೋಹಾರ, ಶಿಲ್ಪಾ ಖಡಕಭಾವಿ, ಶಂಕರ ಪತ್ತಾರ, ಕಾಳಪ್ಪ ಬಡಿಗೇರ, ಸುಮಲತಾ ವಿ., ಬಸವರಾಜ ಕಂಬಾರ, ವಿಠ್ಠಲ ಬಡಿಗೇರ, ನವೀನಕುಮಾರ ಆಚಾರ್ಯ, ಮಂಜುನಾಥ ಕಮ್ಮಾರ, ಸಂಗಮೇಶ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts