More

    ಆಯುರ್ವೇದದಲ್ಲಿ ಹೃದ್ರೋಗಗಳ ವಿವರಣೆ ಇದೆಯೇ?: ಡಾ.ಗಿರಿಧರ ಕಜೆ ಅಂಕಣ

    ಆಯುರ್ವೇದದಲ್ಲಿ ಹೃದ್ರೋಗಗಳ ವಿವರಣೆ ಇದೆಯೇ?: ಡಾ.ಗಿರಿಧರ ಕಜೆ ಅಂಕಣದೇಹದ ಕೇಂದ್ರಬಿಂದುವಾದ ಹೃದಯದ ಕುರಿತಾಗಿ ಆಯುರ್ವೇದ ಅನೇಕ ವಿಚಾರಗಳನ್ನು ಜಗತ್ತಿಗೆ ನೀಡಿದೆ. ವಿಲಿಯಂ ಹಾರ್ವೆ ರಕ್ತ ಪರಿಚಲನೆಯನ್ನು ಹೇಳುವುದಕ್ಕೂ ಸಹಸ್ರಾರು ವರ್ಷಗಳ ಮೊದಲೇ ಆಯುರ್ವೇದದಲ್ಲಿ ಹೃದಯ ಎಂಬ ಹೆಸರಿನಲ್ಲೇ ಅದರ ಕಾರ್ಯವನ್ನೂ ಸೂಚಿಸಲಾಗಿತ್ತು ಎಂಬುದು ಭಾರತೀಯರೆಲ್ಲರೂ ಹೆಮ್ಮೆಯಿಂದ ಹೇಳಬಹುದಾದ, ವಿಶ್ವವೇ ಒಪ್ಪಿ ತಲೆದೂಗಲೇಬೇಕಾದ ವಿಚಾರ. ಹೃ ಅಂದರೆ ಹರತಿ ಅರ್ಥಾತ್​ ಸ್ವೀಕರಿಸು. ದ ಎಂದರೆ ದಯತಿ, ನೀಡುವುದು ಎಂದರ್ಥ. ಯ ಎಂದರೆ ಯತಿ. ಇದು ಚಲಿಸು, ಸಂಚರಿಸು ಎಂರ್ಬಥ ನೀಡುತ್ತದೆ. ರಕ್ತವನ್ನು ಸ್ವೀಕರಿಸುವುದು, ದೇಹಕ್ಕೆ ಮತ್ತೆ ಶುದ್ಧೀಕರಿಸಿ ಕೊಡುವುದು, ಶರೀರದಲ್ಲಿನ ರಕ್ತಸಂಚಾರವನ್ನು ನಿಯಂತ್ರಿಸುವುದು ಇದೇ ತಾನೇ ಹೃದಯದ ಕಾರ್ಯ! ಚರಕ ಸಂಹಿತೆಯಲ್ಲಿ ಹೃದಯಕ್ಕೆ ಮಹತ ಎಂದಿದ್ದಾರೆ.

    ಶರೀರದಲ್ಲಿ ಅತ್ಯಂತ ಮಹತ್ವವುಳ್ಳ ಅವಯವ ಎಂರ್ಬಥದಲ್ಲಿ ಹೇಳಿದ್ದು ಅರ್ಥ ಎಂದೂ ಕರೆಯಲಾಗಿದೆ. ಶರೀರದ ಎಲ್ಲಾ ಕಾರ್ಯಗಳಿಗೂ ಮೂಲಕಾರಣವಾಗಿದ್ದು ಅತ್ಯವಶ್ಯ ಅಂಗವಾಗಿರುವುದರಿಂದ ಹಾಗೆ ಹೇಳಲಾಗಿದೆ. ಭೇಲ ಸಂಹಿತೆಯಲ್ಲಿ ರಕ್ತನಾಳಗಳ ಮೂಲ ಹೃದಯ ಎಂದು ಹೇಳಿ ರಕ್ತ ಸಂಚಾರವನ್ನು ಇದಕ್ಕೆ ಜೋಡಿಸಲಾಗಿದೆ. ಪಾಲಕಾಪ್ಯ ಸಂಹಿತಾದಲ್ಲಿ ರಕ್ತನಾಳಗಳಾದ ಸಿರಾಗಳೆಲ್ಲ ದೇಹದಲ್ಲಿ ಅನೇಕ ನದಿಗಳಂತೆ ಹರಿದು ಕೊನೆಯಲ್ಲಿ ಸಮುದ್ರದಂತಿರುವ ಹೃದಯವನ್ನು ಸೇರುತ್ತದೆ ಎಂದು ವಿಶ್ಲೇಷಿಸಲಾಗಿದೆ. ಚರಕ ಸಂಹಿತಾ, ಸುಶ್ರುತ ಸಂಹಿತಾ, ಅಷ್ಟಾಂಗ ಸಂಗ್ರಹ, ಮಾದವ ನಿದಾನ, ಕಾಶ್ಯಪ ಸಂಹಿತಾ, ಅಷ್ಟಾಂಗ ಹೃದಯ ಮೊದಲಾದ ಆಯುರ್ವೇದ ಗ್ರಂಥಗಳೆಲ್ಲವೂ ಹೃದಯದಿಂದ ರಕ್ತಪರಿಚಲನೆ ಸೇರಿದಂತೆ ಹೃದ್ರೋಗಗಳ ಪರಾಮರ್ಶೆಯನ್ನು ಮಾಡಿವೆ.


    ಆಯುರ್ವೇದದ ಆದಿಗ್ರಂಥ ಚರಕ ಸಂಹಿತೆಯಲ್ಲಿ ಹೃದಯವನ್ನು ಪ್ರಾಣಾಯತನ ಎಂದು ಬಣ್ಣಿಸಲಾಗಿದೆ. ಚೇತನ ಹಾಗೂ ಮನಸ್ಸು ಎರಡರ ಮೂಲ ಸ್ಥಾನವೂ ಹೃದಯ! ಹಾಗೆಯೇ ಮನಸ್ಸಿನ ನಿಯಂತ್ರಕವೂ ಹೃದಯವೇ. ಮನೋ ಗುಣಗಳಾದ ಸತ್ವ, ರಜ, ತಮಗಳ ಸ್ಥಾನವೂ ಹೃದಯವೇ ಆಗಿರುವುದು ಇನ್ನೊಂದು ವಿಶೇಷ. ವ್ಯಕ್ತಿಯ ರೋಗನಿರೋಧಕ ಶಕ್ತಿಯಾದ ವ್ಯಾಧಿಕ್ಷಮತ್ವಕ್ಕಿಂತಲೂ ಉನ್ನತಮಟ್ಟದ ದೇಹರಕ್ಷಕವಾದ ಓಜಸ್ಸು ಎರಡು ವಿಭಾಗವಾಗಿದ್ದು ಅಷ್ಟಬಿಂದು ಪ್ರಮಾಣದಲ್ಲಿರುವ ಪರ ಓಜಸ್ಸಿನ ಸ್ಥಾನವೂ ಇದೇ ಹೃದಯ. ಓಜಸ್ಸು ಲಯವಾದರೆ ಪ್ರಾಣಪ ಇರುವುದಿಲ್ಲ ಎಂದ ಆಯುರ್ವೇದವು ಹೃದಯದಲ್ಲಿ ಸದ್ಯೋ ಪ್ರಾಣಹರ ಮರ್ಮವಿದೆ ಎಂದಿರುವುದು ಮಾಮಿರ್ಕವಾಗಿದೆ. ಶರೀರದಲ್ಲಿರುವ ತ್ರಿಮರ್ಮಗಳಲ್ಲಿ ಹೃದಯವೂ ಒಂದು. ಹೀಗೆ ಆತ್ಮ, ಮನಸ್ಸು, ಓಜಸ್ಸುಗಳ ತ್ರಿವೇಣಿ ಸಂಗಮವಾಗಿರುವ ಹೃದಯ ನಮ್ಮೆಲ್ಲರ ಭಾವನಾತ್ಮಕ ಸಂಬಂಧಗಳ ಸೇತುವಾಗಿದೆ. ಆತ್ಮೀಯ, ಹಾದಿರ್ಕ, ಹೃತ್ಪೂರ್ವಕ ಎಂಬೆಲ್ಲಾ ಶಬ್ದಗಳನ್ನು ಉಪಯೋಗಿಸುವುದರ ಹಿಂದೆ ಇವೆಲ್ಲಾ ಅಂಶಗಳು ಬೆಸೆದುಕೊಂಡಿವೆ. ಐದು ವಿಧವಾದ ವಾತಗಳಲ್ಲಿ ಒಂದಾದ ವ್ಯಾನ ವಾಯು, ಐದು ವಿಧದ ಪಿತ್ತಗಳಲ್ಲಿ ಒಂದಾದ ಸಾಧಕ ಪಿತ್ತ ಹಾಗೂ ಪಂಚವಿಧವಾದ ಕಫಗಳಲ್ಲಿ ಒಂದಾಗಿರುವ ಅವಲಂಬಕ ಕಫಗಳೆಲ್ಲವೂ ಹೃದಯದಲ್ಲಿ ಇದ್ದುಕೊಂಡೇ ತಮ್ಮ ಸಮಸ್ತ ಕಾರ್ಯಚಟುವಟಿಕೆಗಳನ್ನು ನಡೆಸುತ್ತವೆ ಎಂದಿದೆ ಆಯುರ್ವೇದ.


    ಹೃದಯದಿಂದ ಹೊರಹೊಮ್ಮಿ ಹೃದಯದ ಆಕುಂಚನದಿಂದಾ ಗುವ ಹೈಡ್ರೋಸ್ಟಾಟಿಕ್​ ಒತ್ತಡದಿಂದ ಶರೀರದಲ್ಲೆಲ್ಲಾ ರಕ್ತಪರಿಚಲಿಸುವ ಪ್ರಕ್ರಿಯೆಯ ಹಿಂದೆ ವ್ಯಾನ ವಾಯುವಿನ ಪಾತ್ರವಿದೆ. ಜೀವಕೋಶಗಳ ಮಧ್ಯೆ ನಡೆಯುವ ಪೋಷಕಾಂಶಗಳ ಪಚನಕ್ರಿಯೆಗೆ ಇಂದು ಹೇಳಲಾಗುವ ಸೈಟೋಕ್ರೋಮ್​ ಪೊಟೀನ್​ಗಳ ಚಟುವಟಿಕೆಗಳೆಲ್ಲಾ ಸಾಧಕ ಪಿತ್ತದ ಭೂಮಿಕೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಜೀವಕೋಶಗಳ ಮಧ್ಯೆ ಹಾಗೂ ಹೊರಗೆ ಇರುವ ಪೊಟೀನ್​ ಅಂಶಗಳು ಹೃದಯವನ್ನೂ ಬಾಹ್ಯ ಆವರಣದೊಂದಿಗೆ ರಸುವ ಅವಲಂಬಕ ಕಫವಾಗಿ ಕಾರ್ಯವೆಸಗುವುದನ್ನು ಬಹು ಹಿಂದೆಯೇ ಭಾರತೀಯ ವೈದ್ಯವಿಜ್ಞಾನಿ ಋಷಿಗಳು ತಿಳಿಹೇಳಿದ್ದರು ಎಂಬುದು ವಿಸ್ಮಯದಂತೆ ಗೋಚರಿಸುತ್ತದೆ.


    ವಾತಜ ಹೃದ್ರೋಗ, ಪಿತ್ತಜ ಹೃದ್ರೋಗ, ಕಫಜ, ಹೃದ್ರೋಗ, ತ್ರಿದೋಷಜ ಹೃದ್ರೋಗ ಹಾಗೂ ಕ್ರಿಮಿಜ ಹೃದ್ರೋಗಗಳೆಂಬ ಐದು ವಿಧವಾದ ಹೃದಯದ ರೋಗಗಳನ್ನು ನೇರವಾಗಿ ಮೂಲಗ್ರಂಥಗಳು ವಿವರಿಸಿದ್ದರೂ ಈ ಸಂಖ್ಯೆ ಇಲ್ಲಿಗೇ ಮುಗಿಯುವುದಿಲ್ಲ. ಶೂಲವನ್ನು ಹೇಳುವಾಗ ವಿವರಿಸಿದ ಹೃತ್​ಶೂಲ, ಶೋಥದಲ್ಲಿ ಕಂಡುಬರುವ ವಾತಜ ಶೋಥ, ಶ್ವಾಸರೋಗ ವಿವರಣೆಯ ಸಂದರ್ಭದಲ್ಲಿ ಹೇಳಲಾದ ಕ್ಷುದ್ರ ಶ್ವಾಸಗಳನ್ನೂ ಹೃದಯದ ವ್ಯಾಧಿಗಳಾಗಿಯೇ ಪರಿಗಣಿಸಬೇಕಾಗುತ್ತದೆ. ಇಂದು ಹೇಳಲಾಗುವ ಹಲವಾರು ಹೃದ್ರೋಗ ಪ್ರಭೇದಗಳು ಈ ಎಂಟರಲ್ಲೇ ಅಂತರ್ಗತವಾಗಿವೆ. ಮೂಲ ಕಾಯಿಲೆಗಳಿಗೆ ಹೇಳಲಾದ ಲಕ್ಷಣಗಳನ್ನು ಸೂಕ್ಷ$್ಮವಾಗಿ ಗಮನಿಸಿದರೆ ಈ ವಿಚಾರ ಮನದಟ್ಟಾಗುತ್ತದೆ. ಪ್ರತ್ಯೇಕವಾಗಿ ಈ ಹೃದ್ರೋಗಗಳು ಬರಲು ಕಾರಣಗಳನ್ನು ವೈಜ್ಞಾನಿಕವಾಗಿ ಹೇಳಿದ್ದು ಅವುಗಳೆಲ್ಲಾ ಸಾರ್ವಕಾಲಿಕ ಎಚ್ಚರಿಕೆಯಂತೆ, ಹೃದಯ ರೋಗ ಬರದಂತೆ ತಡೆಯುವ ಮಾರ್ಗದರ್ಶಕಗಳಾಗಿ ಕಂಡುಬರುತ್ತಿದ್ದು ಅವುಗಳನ್ನು ಸಮಗ್ರವಾಗಿ ತಿಳಿದುಕೊಂಡು ಮಾಡುವ ಸ್ವಾಸ್ಥ$್ಯ ರಕ್ಷಣೆ ನಮ್ಮೆಲ್ಲರ ಹೊಣೆ. ಅದಿಲ್ಲದೆ ಸ್ವಾಸ್ಥ$್ಯ ಬಿಡಿ, ಆರೋಗ್ಯವನ್ನೇ ನಾಕಾಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts