More

    ಧನಲಕ್ಷ್ಮೀ ಕಾರ್ಖಾನೆ ರಾಜ್ಯಕ್ಕೆ ಮಾದರಿ

    ರಾಮದುರ್ಗ: 28.75 ಕೋಟಿ ಇದ್ದ ಸಾಲ ಪಾವತಿಸಿ, ಕೇವಲ 5 ವರ್ಷದಲ್ಲಿ ಸಾಲಮುಕ್ತ ಕಾರ್ಖಾನೆಯನ್ನಾಗಿಸಿ, ಪ್ರತಿ ಷೇರುದಾರರಿಗೂ 1 ಕ್ವಿಂಟಾಲ್ ಗುಣಮಟ್ಟದ ಸಕ್ಕರೆಯನ್ನು ಪ್ರತಿ ವರ್ಷವೂ ನೀಡಲಾಗುತ್ತಿದೆ ಎಂದು ಶಾಸಕ ಹಾಗೂ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.

    ಅ.24 ರಂದು ನಡೆಯುವ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಚುನಾವಣೆಗೆ ರೈತ ಪೆನಲ್‌ನಿಂದ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಪ್ರತಿ ವರ್ಷ ಕರೆದ ಸಾಮಾನ್ಯ ಸಭೆಗೆ ಹಾಜರಾಗಲು ಎಲ್ಲ ಷೇರುದಾರರಿಗೆ ಮನವಿ ಮಾಡಿ ಪತ್ರ ವ್ಯವಹಾರ ಮಾಡಿದ್ದರೂ ಬಹಳಷ್ಟು ಜನ ಹಾಜರಾಗದೆ ಮತದಾನದಿಂದ ವಂಚಿತರಾಗಿದ್ದಾರೆ. ಕೇವಲ 4500 ಜನ ಮಾತ್ರ ಮಹದಾನದ ಹಕ್ಕು ಪಡೆದಿದ್ದಾರೆ ಎಂದರು. ಶಾಸಕ ಮಹಾದೇವಪ್ಪ ಯಾದವಾಡರ ರೈತ ಪೆನಲ್‌ನಿಂದ ಒಟ್ಟು 16 ಜನ ಮತ್ತು 1 ಪಕ್ಷೇತರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾಣಾಧಿಕಾರಿ ಗಿರೀಶ ಸ್ವಾದಿ ತಿಳಿಸಿದರು.

    ಅ ವರ್ಗದ ಕಬ್ಬು ಬೆಳೆಗಾರರ ಸಾಮಾನ್ಯ ಮತಕ್ಷೇತ್ರ: ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ , ಅಡಿವೆಪ್ಪ ಚೆನ್ನಪ್ಪ ಸುರಗ್, ಮಲ್ಲೇಶಪ್ಪ ಶಿ. ಯಾದವಾಡ, ಬಸವರಾಜ ಮ. ತುಪ್ಪದ, ಪ್ರಶಾಂತ ಮ.ಯಾದವಾಡ, ಸುರೇಶಗೌಡ ಲ. ಡೊಳೊಳ್ಳಿ, ಮಹಾದೇವ ಮ. ಅತಾರ, ದುಂಡಪ್ಪ ನಾಗಪ್ಪ ದೇವರಡ್ಡಿ ಹಾಗೂ ಈರಪ್ಪ ಶಿ. ಹರನಟ್ಟಿ. ಅ ವರ್ಗದ ಕಬ್ಬು ಬೆಳೆಗಾರರ ಹಿಂದುಳಿದ ಅ ವರ್ಗ ಮತಕ್ಷೇತ್ರದಿಂದ ನೀಲಪ್ಪ ಸೋ. ಚಾಲಕಟ್ಟಿ. ಪಕ್ಷೇತರರಾಗಿ ಸಿದ್ದಪ್ಪ ರಾಮಪ್ಪ ಕುರಿ, ಅ ವರ್ಗದ ಕಬ್ಬು ಬೆಳೆಗಾರರ ಪರಿಶಿಷ್ಟ ಜಾತಿ ಮತಕ್ಷೇತ್ರದಿಂದ ಚಂದ್ರು ಶಂಕರ ರಜಪೂತ, ಅ ವರ್ಗದ ಕಬ್ಬು ಬೆಳೆಗಾರರ ಮಹಿಳಾ ಮೀಸಲು ಮತಕ್ಷೇತ್ರ ನಾಗವ್ವ ತಿ. ಮುರಗೋಡ ಹಾಗೂ ಶಶಿಕಲಾ ಬ. ಸೊಮಗೊಂಡ, ಅ ವರ್ಗದ ಕಬ್ಬು ಬೆಳೆಗಾರರ ಪರಿಶಿಷ್ಟ ಪಂಗಡ ಮತಕ್ಷೇತ್ರದ ಯಲ್ಲಪ್ಪ ಈರಪ್ಪ ಚಿಪ್ಪಲಕಟ್ಟಿ, ಬ ವರ್ಗದ ಸಂಘ ಸಂಸ್ಥೆ ಮತಕ್ಷೇತ್ರದಿಂದ ಬಸನಗೌಡ ಗೌ.ದ್ಯಾಮನಗೌಡ್ರ ಹಾಗೂ ಡ ವರ್ಗ ಕಬ್ಬು ಬೆಳೆಗಾರರಲ್ಲದ ಕ್ಷೇತ್ರದಿಂದ ಶ್ರೀನಿವಾಸ ರಾಚಪ್ಪ ಕರದಿನ ನಾಮಪತ್ರ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts