More

    ಪಾಕಿಸ್ತಾನದಿಂದ ನಮಗೆ ಮುಕ್ತಿ ಬೇಕು; ಪಾಕ್​ ಆಕ್ರಮಿತ ನೆಲದಲ್ಲಿ ಮೊಳಗಿದೆ ಬಂಡಾಯದ ಕಹಳೆ

    ನವದೆಹಲಿ: ಪಾಕಿಸ್ತಾನ ನಮಗೆ ಬೇಕಾಗಿಲ್ಲ; ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಬೇಕು….

    ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಇಂಥದ್ದೊಂದು ಘೋಷಣೆ ಮೊಳಗಿದೆ. ಇಲ್ಲಿನ ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾ ನಿರ್ದೇಶಕರ ಕಚೇರಿಯ ವೆಬ್​ಸೈಟ್​ ಹ್ಯಾಕ್​ ಮಾಡಲಾಗಿದ್ದು, ಅಲ್ಲಿ ‘ವೀ ವಾಂಟ್​ ಆಜಾದಿ ಫ್ರಮ್​ ಪಾಕಿಸ್ತಾನ್​’ ಎಂದು ಬರೆಯಲಾಗಿದೆ.

    ಇದನ್ನೂ ಓದಿ; ಭಾರತದ ಬೆಂಬಲಕ್ಕೆ ನಿಂತ ಜಪಾನ್​ ಗಡಿಗಳನ್ನು ಆಕ್ರಮಿಸಿದ ಚೀನಾ; ಗಸ್ತು ನೌಕೆಗಳ ನಿಯೋಜನೆ

    ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಆಡಳಿತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಲಾಗಿದೆ. ಪಾಕ್​ ಸೇನೆ, ಪೊಲೀಸರಿಂದ ಅಮಾಯಕ ನಾಗರಿಕ ಮೇಲೆ ದೌರ್ಜನ್ಯ ನಡೆಯುತ್ತಿದೆ. ಭಯೋತ್ಪಾದನೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
    ಅಜಾದ್​ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 70 ವರ್ಷಗಳಿಂದ ನಡೆಸುತ್ತಿರುವ ದುರಾಡಳಿತ ಹಾಗೂ ಪಾಕಿಸ್ತಾನ ಆಡಳಿತಗಾರರ ತಾರತಮ್ಯ ನೀತಿಯನ್ನು ಖಂಡಿಸುತ್ತೇವೆ ಎಂದು ವೆಬ್​ಸೈಟ್​ನಲ್ಲಿ ಹೇಳಲಾಗಿದೆ.

    ಇನ್ನೊಂದು ವಿಷಯವೆಂದರೆ, ಕಳೆದ ಫೆಬ್ರವರಿಯಲ್ಲಿ ಪಾಕ್​ ವಾಯುಸೇನೆಯ ಎಫ್​-16 ಯುದ್ಧ ವಿಮಾನವನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಷಯದಲ್ಲಿ ಪಾಕಿಸ್ತಾನ ಎಲ್ಲರನ್ನೂ ಕತ್ತಲಲ್ಲಿಟ್ಟಿದೆ ಎಂದು ಅಚ್ಚರಿಯ ವಿಷಯವೊಂದನ್ನು ಹೊರಗೆಡವಿದೆ.

    ಇದನ್ನೂ ಓದಿ; ಚೀನಾದ ನಿದ್ದೆಗೆಡಿಸಿದೆ ನೇಪಾಳದ ಬೆಳವಣಿಗೆ; ಕೋವಿಡ್ ನೆರವಿನ ಹೆಸರಲ್ಲಿ ಬೇಹುಗಾರರ ನಿಯೋಜನೆ​

    ಯುದ್ಧ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್​ಗೆ ಶ್ರದ್ದಾಂಜಲಿ ಸಲ್ಲಿಸುತ್ತೇವೆ ಹಾಗೂ ಆದಷ್ಟು ಬೇಗ ವಿಷಯ ಸತ್ಯಾಂಶ ಹೊರ ಜಗತ್ತಿಗೆ ತಿಳಿಯಲಿದೆ ಎಂದು ಹೇಳಿದೆ.

    ಪಾಕ್​ ಆಕ್ರಮಿತ ಕಾಶ್ಮೀರದ ಸರ್ದಾರ್​ ಶೌಕತ್​ ಅಲಿ ಇಲ್ಲಿನ ಜನರ ಆತ್ಮಾಭಿಮಾನವನ್ನು ಪಾಕ್​ ಗೌರವಿಸುತ್ತಿಲ್ಲ ಎಂದು ಸಕಾ್ರವನ್ನು ಟೀಕಿಸಿದ್ದರು. ಇದೀಗ ಬಂಡಾಯದ ಇನ್ನೊಂದು ವೆಬ್​ಸೈಟ್​ ಹ್ಯಾಕಿಂಗ್​ ಮೂಲಕ ಅನಾವರಣಗೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts