More

    18 ದಿನದಲ್ಲಿ 8 ಬಾರಿ ತಾಂತ್ರಿಕ ದೋಷ: ನೋಟಿಸ್​ ನೀಡಿದ ಡಿಜಿಸಿಎಗೆ ಸ್ಪೈಸ್​​ಜೆಟ್​​ ಪ್ರತಿಕ್ರಿಯೆ ಹೀಗಿದೆ

    ನವದೆಹಲಿ: ಸ್ಪೈಸ್​ಜೆಟ್​ ವಿಮಾನದಲ್ಲಿ ಹಲವು ಬಾರಿ ತಾಂತ್ರಿಕ ದೋಷ ವರದಿಯಾಗಿದ್ದ ಬೆನ್ನಲ್ಲೇ ಶೋಕಾಸ್​​ ನೋಟಿಸ್​ ನೀಡಿದ್ದ ಡಿಜಿಸಿಎಗೆ ವಿಮಾನಯಾನ ಸಂಸ್ಥೆ ಗುರುವಾರ ಪ್ರತಿಕ್ರಿಯೆ ನೀಡಿದೆ. ಸಂಸ್ಥೆಯ ವಿಮಾನಗಳಲ್ಲಿ 18 ದಿನಗಳ ಅವಧಿಯಲ್ಲಿ 8 ಬಾರಿ ತಾಂತ್ರಿಕ ದೋಷ ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ನೋ ಟಿಸ್​ ಜಾರಿ ಮಾಡಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನಯಾನ ಸಿಎಂಡಿ ಅಜಯ್​ಸಿಂಗ್​ ನಮ್ಮ ಸಂಸ್ಥೆಯ ವಿಮಾನಗಳಲ್ಲಿ ಲೋಪದೋಷ ಕುರಿತು ಮತ್ತಷ್ಟು ಎಚ್ಚರಿಕೆ ವಹಿಸಿದ್ದೇವೆ. ಇನ್ನುಮುಂದೆ ಈ ರೀತಿ ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.ಪ್ರಯಾಣಿಕರ ಸುರಕ್ಷತೆಗಿಂತ ಮುಖ್ಯವಾದದ್ದು ಏನೂ ಇಲ್ಲ, ಸಾಧ್ಯವಾದಷ್ಟು ಎಚ್ಚರಿಕೆಯಿಂದ ನಿರ್ವಹಿಸುತ್ತೇವೆ ಎಂದು ಡಿಜಿಸಿಎಗೆ ತಿಳಿಸಿದ್ದಾರೆ.

    ಏರ್​​ಕ್ರಾಫ್ಟ್​ ನಿಯಮಗಳ ಅನ್ವಯ 134 ಹಾಗೂ ಷೆಡ್ಯೂಲ್ XI, 1937 ರ ಪ್ರಕಾರ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ವಾಯು ಸೇವೆಗಳನ್ನು ಸ್ಥಾಪಿಸುವುದಕ್ಕೆ ಸ್ಪೈಸ್ ಜೆಟ್ ವಿಫಲವಾಗಿದೆ ಎಂದು ಡಿಜಿಸಿಎ ನೀಡಿದ್ದ ನೊಟೀಸ್​​ನಲ್ಲಿ ಹೇಳಿದೆ. ಘಟನೆಯ ಪರಿಶೀಲನೆ ಮೂಲಕ ಆಂತರಿಕ ಸುರಕ್ಷತೆ ಕಳಪೆಯಾಗಿರುವುದು ಹಾಗೂ ಅಸಮರ್ಪಕ ನಿರ್ವಹಣೆ ಕ್ರಮಗಳನ್ನು ತೋರುತ್ತಿದೆ ಎಂದು ಡಿಜಿಸಿಎ ಹೇಳಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts