More

    ಕಾಯಿಲೆ ತಡೆಯಲು ಭಟ್ಕಳದ ಮಾರಿಯಮ್ಮನಿಗೆ ಭಕ್ತರ ಹರಕೆ

    ಭಟ್ಕಳ: ಪಟ್ಟಣದ ಮಾರಿಗುಡಿಯಲ್ಲಿ ಬುಧವಾರ ಬೆಳಗ್ಗೆ ಮಾರಿಯಮ್ಮನ ಮೂರ್ತಿಯನ್ನು ಗದ್ದುಗೆಯಿಂದ ಮೆರವಣಿಗೆ ಮೂಲಕ ತಂದು ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಮಾರಿಜಾತ್ರೆಗೆ ಚಾಲನೆ ನೀಡಲಾಯಿತು

    ಮೂರ್ತಿ ತಯಾರಕ ವಿಶ್ವಕರ್ಮ ಸಮಾಜದವರಿಂದ ಮಂಗಳವಾರ ರಾತ್ರಿ ತವರು ಮನೆಯ ವಿಶೇಷ ಪೂಜೆ ನಡೆಯಿತು. ಬುಧವಾರ ಬೆಳಗ್ಗೆ ಶ್ರೀ ಮಾರಿಕಾಂಬಾ ದೇವಿಯನ್ನು ಚಂಡೆ ವಾದ್ಯ, ನೃತ್ಯ ಮೆರವಣಿಗೆಯ ಮೂಲಕ ಗರ್ಭಗುಡಿಯ ಹೊರಗೆ ತಂದು ಪ್ರತಿಷ್ಠಾಪಿಸಲಾಯಿತು.

    ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ ಸೇರಿ ಇತರರು ಬಂದು ದೇವಿಯ ದರ್ಶನ ಪಡೆದರು.

    ತಾಲೂಕಿನ ಪ್ರಸಿದ್ಧ ಜಾತ್ರೆಯಲ್ಲಿ ಮಾರಿ ಜಾತ್ರೆಯೂ ಒಂದಾಗಿದೆ. ಹಿಂದೆ ಮನೆಯಲ್ಲಿ ಸಿಡುಬು, ಪ್ಲೇಗ್, ಕಾಲರಾದಂತಹ ಕಾಯಿಲೆಗಳು ಬಂದಾಗ ಮಾರಿದೇವಿಯನ್ನು ಸ್ಮರಿಸಿ ಹರಕೆ ಹೊತ್ತುಕೊಳ್ಳುವುದು ವಾಡಿಕೆ. ಅದೆ ಸಂಪ್ರದಾಯ ಇಂದು ಮುಂದುವರಿದಿದೆ. ಗುರುವಾರ ಸಂಜೆ 4 ಗಂಟೆಯವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ವಿಸರ್ಜನೆ ಮಾಡಲಾಗುತ್ತದೆ.

    ದೇವಸ್ಥಾನದ ಟ್ರಸ್ಟಿಗಳಾದ ರಘುವೀರ ಬಾಳಗಿ, ಪರಮೇಶ್ವರ ನಾಯ್ಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ನರೇಂದ್ರ ನಾಯಕ ಇದ್ದರು. ಡಿವೈಎಸ್​ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಸಿಪಿಐ ದಿನಕರ್, ಪಿಎಸ್​ಐ ಭರತ, ಸುಮಾ ಆಚಾರ್ಯ ಬಿಗಿ ಭದ್ರತೆ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts