More

    ಹೋಟೆಲ್​​​ನಲ್ಲಿ ಗುಟ್ಟಾಗಿ ಭೇಟಿಯಾದ ಫಡ್ನವೀಸ್​-ರಾವತ್​; ರಾಜಕೀಯ ವಲಯದಲ್ಲಿ ಅನುಮಾನ

    ಮುಂಬೈ: ಹಿಂದೆ ಮಿತ್ರಪಕ್ಷಗಳಾಗಿದ್ದ ಬಿಜೆಪಿ-ಶಿವಸೇನೆ ಇದೀಗ ಬದ್ಧ ವೈರಿಗಳಾದಂತಾಗಿವೆ. ಶಿವಸೇನೆಯಂತೂ ಬಿಜೆಪಿ ಮೈತ್ರಿಯನ್ನು ತ್ಯಜಿಸಿದ ನಂತರ ಸತತ ವಾಗ್ದಾಳಿ ನಡೆಸುತ್ತಲೇ ಇದೆ.

    ಆದರೆ ಈಗ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರು ಶಿವಸೇನೆ ನಾಯಕ ಸಂಜಯ್​ ರಾವತ್ ಅವರನ್ನು ಭೇಟಿಯಾಗಿ, ಗುಟ್ಟಾಗಿ ಮೀಟಿಂಗ್​ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ.

    ಫಡ್ನವೀಸ್​ ಮತ್ತು ರಾವತ್​ ಮುಂಬೈನ ಹೊರವಲಯದಲ್ಲಿರುವ ಹೋಟೆಲ್​​ನಲ್ಲಿ ಭೇಟಿಯಾದ ವಿಚಾರ ಹೊರಬೀಳುತ್ತಿದ್ದಂತೆ ಅನೇಕ ಊಹಾಪೋಹಗಳು ಎದ್ದಿವೆ. ಇವರಿಬ್ಬರ ಭೇಟಿ ಬಗ್ಗೆ ಮಾತುಕತೆಗಳು ಹೆಚ್ಚಾಗುತ್ತಿದ್ದಂತೆ ಮಹಾರಾಷ್ಟ್ರದ ಬಿಜೆಪಿಯ ಮುಖ್ಯ ವಕ್ತಾರ ಕೇಶವ್​ ಉಪಾಧ್ಯೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗಂಧರ್ವರಿಗೆ ಹಾಡುವುದಕ್ಕೆ ಹೋದೆಯಾ? ಎಸ್​ಪಿಬಿಗೆ ಇಳಯರಾಜ ಪ್ರಶ್ನೆ

    ದೇವೇಂದ್ರ ಫಡ್ನವೀಸ್​ ಹಾಗೂ ಸಂಜಯ್​ ರಾವತ್​ ಅವರ ಭೇಟಿ ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ಶಿವಸೇನೆ ಮುಖವಾಣಿ ಸಾಮ್ನಾಕ್ಕಾಗಿ ಫಡ್ನವೀಸ್​ ಅವರನ್ನು ಸಂದರ್ಶನ ಮಾಡಲು ಸಂಜಯ್​ ರಾವತ್​ ಇಚ್ಛಿಸಿದ್ದಾರೆ. ಈ ಬಗ್ಗೆ ಚರ್ಚೆ ಮಾಡುವುದಕ್ಕೋಸ್ಕರವಷ್ಟೇ ಪೂರ್ವಭಾವಿಯಾಗಿ ಇವರಿಬ್ಬರೂ ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ.

    ಬಿಹಾರ ಚುನಾವಣೆ ಮುಗಿದ ಬಳಿಕ ಸಂದರ್ಶನ ಕೊಡುವುದಾಗಿ ಫಡ್ನವೀಸ್​ ಹೇಳಿದ್ದಾಗಿ ಉಪಾಧ್ಯೆ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ‘ಮನುಕುಲದ ಹಿತಾಸಕ್ತಿಯೇ ಭಾರತದ ಆದ್ಯತೆ..ಕರೊನಾ ವಿರುದ್ಧ ಹೋರಾಟದಲ್ಲಿ ಎಲ್ಲರಿಗೂ ಸಹಾಯ ಮಾಡುತ್ತೇವೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts