More

    ಇದೇ ಕಾರಣಕ್ಕೆ ಡಿಸಿಎಂ ಸ್ಥಾನ ಒಪ್ಪಿಕೊಂಡಿದ್ದು: ದೇವೇಂದ್ರ ಫಡ್ನವಿಸ್​

    ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬದಲಾವಣೆ ಕುರಿತು ದೇಶಾದ್ಯಂತ ಭಾರೀ ಸಂಚಲನವೇ ಉಂಟುಮಾಡಿತ್ತು.

    ಇನ್ನೇನು ದೇವೇಂದ್ರ ಫಡ್ನವಿಸ್​ ಅವರು ಎರಡನೇ ಬಾರಿಗೆ ಮುಖಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಕೊನೇ ಘಳಿಗೆಯಲ್ಲಿ ಮಹಾರಾಷ್ಟ್ರ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದ ರಾಜಕೀಯ ಚತುರ ಏಕನಾಥ್​ ಶಿಂಧೆ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಇದು ಸ್ವತಃ ಫಡ್ನವಿಸ್​ ಅವರಿಗೂ ಶಾಕ್​ ಆಗಿತ್ತು.

    ಆದರೆ ಡಿಸಿಎಂ ಸ್ಥಾನಕ್ಕೆ ಫಡ್ನವಿಸ್ ಅವರ ಹೆಸರನ್ನು ಪ್ರಕಟಿಸಲಾಯಿತು. ಈ ಎಲ್ಲಾ ಬೆಳವಣಿಗಗಳ ಬೆನ್ನಲ್ಲೇ ಫಡ್ನವಿಸ್​ ನಿಜಕ್ಕೂ ಡಿಸಿಎಂ ಹುದ್ದೆಗೆ ಸ್ವತಃ ಒಪ್ಪಿಕೊಂಡಿರಬಹುದು ಎಂದೇ ಭಾವಿಸಲಾಗಿತ್ತು.

    ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಫಡ್ನವಿಸ್, ಮೊದಲು ನಾನು ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ, ನನ್ನ ಒಪ್ಪಿಗೆ ಬಗ್ಗೆ ಹೇಳಿರಲಿಲ್ಲ, ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರೆ ಬಂದಿತ್ತು. ಆ ಬಳಿಕವೇ ಡಿಸಿಎಂ ಹುದ್ದೆಗೆ ಒಪ್ಪಿಕೊಂಡೆ ಎಂದು ಬಹಿರಂಗಪಡಿಸಿದ್ದಾರೆ. ಪ್ರಧಾನಿ ಅವರ ಬಳಿಕ ಗೃಹ ಸಚಿವ ಅಮಿತ್​ ಶಾ ಹಾಗೂ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರಿಂದಲೂ ಕರೆ ಬಂದಿತ್ತು, ಈ ಬಳಿಕ ನಾನು ಈ ಹುದ್ದೆಗೆ ಒಪ್ಪಿಕೊಂಡಿದ್ದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಶಿವಸೇನೆಯಿಂದ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರನ್ನು ವಜಾಗೊಳಿಸಿದ ಉದ್ಧವ್​ ಠಾಕ್ರೆ

    ವಿವಾಹಪೂರ್ವ ಲೈಂಗಿಕತೆ ಹಾಗೂ ಗರ್ಭಾವಸ್ಥೆಗೆ ನನ್ನ ಬೆಂಬಲವಿದೆ: ಮತ್ತೆ ಟ್ರೋಲ್​ ಆದ ದಿಯಾ ಮಿರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts