More

    ಸಿಎಂ ಪಟ್ಟದಿಂದ ಡಿಸಿಎಂ ಆದ ಫಡ್ನವಿಸ್​; ಮಹಾರಾಷ್ಟ್ರದಲ್ಲಿ ಸಚಿವರಾಗಿದ್ದ ಇನ್ನುಳಿದ ನಾಲ್ವರು ಮುಖ್ಯಮಂತ್ರಿಗಳ ವಿವರ ಇಲ್ಲಿದೆ!

    ಮುಂಬೈ: ಏಕನಾಥ್​ ಶಿಂಧೆ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಮಹಾರಾಷ್ಟ್ರದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ತೆರೆ ಎಳೆದಿದ್ದಾರೆ.

    ಮೊದ ಮೊದಲು ದೇವೇಂದ್ರ ಫಡ್ನವಿಸ್​ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿತ್ತಾದರೂ, ಕೊನೇ ಗಳಿಗೆಯಲ್ಲಿ ಶಿಂಧೆ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. ಫಡ್ನವಿಸ್​ ಡಿಸಿಎಂ ಸ್ಥಾನಕ್ಕೆ ತೃಪ್ತಿಪಡೆದುಕೊಂಡರು.

    ಮಹಾರಾಷ್ಟ್ರದಲ್ಲಿ ಇದೇನೂ ಹೊಸ ಬೆಳವಣಿಗೆಯಲ್ಲ, ಸಿಎಂ ಆಗಿ ಮೆರೆದವರು ನಂತರ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಹಲವು ಉದಾಹರಣೆಗಳಿವೆ. ಇವರಲ್ಲಿ ಐದನೇಯವರು ಫಡ್ನವಿಸ್​ ಆಗಿದ್ದಾರೆ. ಈ ಮೊದಲು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದವರು ನಂತರ ಡಿಸಿಎಂ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ನಾಲ್ವರ ಕುರಿತು ಇಲ್ಲಿದೆ ಮಾಹಿತಿ.

    ಶಂಕರ್​ರಾವ್​ ಚವಾಣ್​​: ಕಾಂಗ್ರೆಸ್​ ನಾಯಕರಾಗಿದ್ದ ಇವರು 1975ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿತ್ತಾರೆ. ಇವರ ಬದಲಾಗಿ 1977ರಲ್ಲಿ ವಸಂತ್​ದಾದ ಪಾಟೀಲ್​ ಅವರನ್ನು ಸಿಎಂ ಆಗಿ ನೇಮಕ ಮಾಡಲಾಗುತ್ತದೆ. ಈ ಬಳಿಕ ಶರದ್​​ ಪವಾರ್​​ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ.

    ಶಿವಾಜಿರಾವ್​ ಪಾಟೀಲ್​ ನಿಲಂಗೆಕರ್​: 1985ರಲ್ಲಿ ಮುಖ್ಯಮಂತ್ರಿಯಾಗಿದ್ದ ಇವರು ನಂತರ ಸುಶೀಲ್​ ಕುಮಾರ್ ಶಿಂಧೆ ಅವರ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

    ನಾರಾಯಣ ರಾಣೆ: 1999ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಇವರು ಕೂಡ ವಿಲಾಸ್​ ರಾವ್​ ದೇಶ್​ಮುಖ್​ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗುತ್ತಾರೆ.

    ಅಶೋಕ್​ ಚವಾಣ್​: 2008 ರಿಂದ 2010ರಲ್ಲಿ ಮಹಾರಾಷ್ಟ್ರದ ಸಿಎಂ ಆಗಿದ್ದ ಚವಾಣ್​, ಉದ್ಧವ್​ ಠಾಕ್ರೆ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸುತ್ತಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts