More

    ಧನಾತ್ಮಕ ಆಲೋಚನೆಗಳಿಂದ ಅಭಿವೃದ್ಧಿ

    ಶಿವಮೊಗ್ಗ: ಧನಾತ್ಮಕ ಆಲೋಚನೆಯೊಂದಿಗೆ ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಮುನ್ನಡೆದಲ್ಲಿ ಉದ್ಯಮದ ಬೆಳವಣಿಗೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅಭಿಪ್ರಾಯಪಟ್ಟರು.

    ಆರ್ಯವೈಶ್ಯ ಸಮುದಾಯದ ನಾವು ವೈಶ್ಯ ಸಂಘಟನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನೆಲ್ಲೆಡೆ ಇರುವ ಅವಕಾಶಗಳ ಬಗ್ಗೆ ‘ನಾವು ವೈಶ್ಯ ಸಂಘಟನೆ’ ಆರ್ಯವೈಶ್ಯ ಸಮುದಾಯದವರಿಗೆ ಸೂಕ್ತ ಮಾಹಿತಿ ನೀಡುತ್ತದೆ. ಉಪಯೋಗವಾಗುವ ವೇದಿಕೆ ಸೃಷ್ಟಿಯಾಗುತ್ತದೆ. ಪ್ರತಿ ಉದ್ಯಮಿಯೂ ಹೊಸ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದರು.
    ಯುವ ಉದ್ಯಮಿಗಳು ಆತಂಕಕ್ಕೆ ಒಳಗಾಗಬಾರದು. ಈಗಾಗಲೇ ವೃತ್ತಿ ಕ್ಷೇತ್ರದಲ್ಲಿ ಇರುವವರು ಬೇರೆಯವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಉದ್ಯಮದಲ್ಲಿ ಎದುರಾಗುವ ಸವಾಲು ಹಾಗೂ ಹೊಸ ಸಾಧ್ಯತೆಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಇದರಿಂದ ಎಲ್ಲರೂ ಒಟ್ಟಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
    ಉದ್ಯಮಿ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಆರ್ಯವೈಶ್ಯ ಸಮುದಾಯದ ಬಹುಪಾಲು ಮಂದಿ ವ್ಯಾಪಾರ, ವಹಿವಾಟು ನಡೆಸುವವರು. ಸಮುದಾಯವು ಉದ್ಯಮ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ರಾಜಕೀಯದಲ್ಲೂ ಹೆಚ್ಚು ಪ್ರಾತಿನಿಧ್ಯ ಪಡೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
    ನಾವು ವೈಶ್ಯ ಸಂಘಟನೆ ಸ್ಥಾಪಕ ಅನಿಲ್ ಗುಪ್ತ, ಶಿವಮೊಗ್ಗ ವಿಭಾಗದ ಸಂಚಾಲಕ ಟಿಎಸ್‌ಎನ್ ಮೂರ್ತಿ, ರಾಜ್ಯ ಅಧ್ಯಕ್ಷ ಗಣೇಶ್, ಸದಸ್ಯರಾದ ಸಂಜಯ್, ಉನ್ನತಿ, ನವೀನ್, ಗಣೇಶ್, ಸಂದೇಶ್, ಬದ್ರಿನಾಥ್, ಚೇತನ್, ವೆಂಕಟೇಶಮೂರ್ತಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts