More

    ಅಭಿವೃದ್ಧಿಗೆ ಬದ್ಧನಾಗುವೇ

    ಅಳವಂಡಿ: ಅಳವಂಡಿ-ಬೆಟಗೇರಿ ಭಾಗದ ಬಹುದಿನಗಳ ಹೋರಾಟದ ಫಲವಾಗಿ ಏತ ನೀರಾವರಿ ಯೋಜನೆಗೆ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ 88 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು,ಈಗ ಕಾಮಗಾರಿ ಕೊನೆ ಹಂತದಲ್ಲಿ ಇದೆ. ಲಿಫ್ಟ್ ಇರಿಗೇಷನ್ ಪ್ರಾರಂಭಿಸಿ 8-10 ಸಾವಿರ ಎಕರೆ ನೀರಾವರಿ ಪ್ರದೇಶಕ್ಕೆ ನೀರು ಹರಿಸಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ತಿಳಿಸಿದರು.

    ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ಸುಕ್ಷೇತ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್

    ಅಳವಂಡಿ ಜಿ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅಂದಾಜು ಮೊತ್ತ 9.87 ಕೋಟಿ ರೂ. ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ಹಾಗೂ ಸ್ಮಾರ್ಟ್ ಕ್ಲಾಸ್‌ಗಳ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಸೋಮವಾರ ಮಾತನಾಡಿದರು.


    ಅಳವಂಡಿ-ಬೆಟಗೇರಿ ಹೋಬಳಿಯ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಸೇತುವೆ, ರಸ್ತೆ, ಚೆಕ್ ಡ್ಯಾಮ್, ಕ್ಯಾನಲ್ಗಳ ಅಭಿವೃದ್ಧಿಗೆ ಇಗಾಗಲೇ 350 ಕೋಟಿ ರೂ. ಡಿಪಿಆರ್ ಮಾಡಿಸಲಾಗಿದೆ. ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಿ ಈ ಭಾಗದ ಅಭಿವೃದ್ಧಿಗಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರು.

    ಶಾಸಕ ಕೆ ರಾಘವೇಂದ್ರ ಹಿಟ್ನಾಳ ಭರವಸೆ



    ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ 100 ಸ್ಮಾರ್ಟ್ ಕ್ಲಾಸ್‌ಗಳ ನಿರ್ಮಾಣ ಮಾಡಲಿದ್ದೇವೆ ಮುಂದೆ ಮಾರ್ಚ್ ನಂತರ 100 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಲಾಗುವುದು.

    ಅನ್ನಭಾಗ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಅಳವಂಡಿ ಗ್ರಾಮದಲ್ಲಿ ಕೃಷಿ ಸಿಂಚಾಯಿ ಯೋಜನೆಡಿಯಲ್ಲಿ ಆಯ್ಕೆಗೊಂಡ ರೈತರಿಗೆ ಪೈಪ್ ಮತ್ತು ಸ್ಪಿಂಕ್ಲರ್‌ಗಳನ್ನು ವಿತರಣೆ ಮಾಡಿದರು.

    ಮಾಜಿ ಜಿ.ಪಂ ಅಧ್ಯಕ್ಷರಾದ ಕೆ.ರಾಜಶೇಖರ್ ಹಿಟ್ನಾಳ, ಮುಖಂಡರುಗಳಾದ ಭರಮಪ್ಪ ಹಟ್ಟಿ, ವೆಂಕನಗೌಡ ಹಿರೇಗೌಡ್ರು,ಬಾಲಚಂದ್ರ ಮುನಿರಾಬಾದ್, ಪ್ರಸನ್ನ ಗಡಾದ, ಗಾಳೆಪ್ಪ ಪೂಜಾರ್, ತೋಟಪ್ಪ ಸಿಂಟ್ರ, ಪ್ರಕಾಶ್ ಸ್ವಾಮಿ ಇನಾಮ್ದಾರ್,

    ಯಲ್ಲಪ್ಪ ಜಿರ್, ಗುರುಬಸವರಾಜ್ ಹಳ್ಳಿಕೇರಿ, ಅನ್ವರ್ ಗಡಾದ, ಮಹಾಂತೇಶ್ ಕವಲೂರು, ಹೊನ್ನಕೆರಪ್ಪ ಕವಲೂರು, ನಜಿರ್ ಅಳವಂಡಿ, ಭೀಮಣ್ಣ ಬೋಚನಹಳ್ಳಿ, ಪರಶುರಾಮ್ ಮೆಕ್ಕಿ, ಜಿಲ್ಲಾ ಕೆಡಿಪಿ ಸದಸ್ಯ ಕುರ್ಗೋಡ್ ರವಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕು ಪಂಚಾಯತ್ ಇಓ ದುಂಡೇಶ್ ತುರಾದಿ, ಅಳವಂಡಿ ಪಿಎಸ್‌ಐ ನಾಗಪ್ಪ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts