More

    ಸೇವಾ ಮನೋಭಾವ ಬೆಳೆಸಿಕೊಳ್ಳಿ

    ಮುಧೋಳ: ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳುವುದರಿಂದ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ನಮ್ಮ ಏಳಿಗೆಯಾಗುತ್ತದೆ ಎಂದು ಪ್ರಾಚಾರ್ಯ ಎಂ.ಎಂ.ಹಿರೇಮಠ ಹೇಳಿದರು.

    ತಾಲೂಕಿನ ಶಿರೋಳ ಗ್ರಾಮದ ವಿಠ್ಠಲ ಮಂದಿರದಲ್ಲಿ ಬಿವಿವಿ ಸಂಘದ ದಾನಮ್ಮದೇವಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ ವತಿಯಿಂದ ಏಳು ದಿನಗಳವರೆಗೆ ನಡೆದ ಎನ್‌ಎಸ್‌ಎಸ್ ಘಟಕ 1 ಮತ್ತು 2 ವಾರ್ಷಿಕ ಸೇವಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

    ವಿದ್ಯಾರ್ಥಿನಿಯರು ತಮ್ಮ ಮನೆ ಹಾಗೂ ಮನೆ ಸುತ್ತಮುತ್ತ ಸ್ವಚ್ಛ ಮಾಡುವ ಜತೆಗೆ ಸುಂದರ ಪರಿಸರ ನಿರ್ಮಾಣಕ್ಕಾಗಿ ಜನ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.

    ಶಿಬಿರಾಧಿಕಾರಿ ಪ್ರೊ.ಎಸ್.ಕೆ.ಸಾರವಾಡ ವಾಚನ ಮಾಡಿದರು. ಶಿಬಿರಾರ್ಥಿಗಳಾದ ಶಾಹಿನ್ ಬೆಳ್ಳಗಿ, ಸುಪ್ರಿತಾ ಕೆಂಚರೆಡ್ಡಿ, ಸಾವಿತ್ರಿ ನರಗಟ್ಟಿ, ನಿಂಗಮ್ಮ ಪರೀಟ, ಲಖ್ಖಾನಿ ದಳವಾಯಿ, ಭಾಗ್ಯಾ ಗಾಣಿಗೇರ, ಭೀಮಾ ಹೊಸಕೋಟೆ ತಮ್ಮ ಅನಿಸಿಕೆ ಹಂಚಿಕೊಂಡರು.

    ಎಸ್.ಆರ್.ಕಂಠಿ ಮಹಾವಿದ್ಯಾಲಯದ ಜೀವಶಾಸ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಚ್.ಹಿರೇಮಠ, ಪತ್ರಿಕಾ ವಿಭಾಗದ ಮುಖ್ಯಸ್ಥ ಪ್ರೊ.ವಿಶ್ವನಾಥ ಮುನವಳ್ಳಿ, ಎನ್‌ಎಸ್‌ಎಸ್ 1 ಮತ್ತು 2ರ ಮುಖ್ಯಸ್ಥ ಪ್ರೊ.ಎಸ್.ಕೆ. ಸಾರವಾಡ ಹಾಗೂ ಪ್ರೊ.ಸುಧಾ ಗಂಜಿಹಾಳ ಹಾಗೂ ಶಿರೋಳ ಗ್ರಾಮದ ಮುಖಂಡರು ಇದ್ದರು. ಶಿಬಿರಾಧಿಕಾರಿ ಪ್ರೊ.ಎಸ್.ಎಸ್. ಗಂಜಿಹಾಳ ಸ್ವಾಗತಿಸಿದರು. ಪ್ರೊ.ಎ.ಸಿ.ಕೆರೂರ ಹಾಗೂ ಪ್ರೊ.ಎಂ.ಎಸ್. ಕತ್ತಿ ನಿರೂಪಿಸಿದರು. ಪ್ರೊ.ಎನ್.ಎನ್.ಬಾರಕೇರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts