More

    ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಿ

    ಆಲೂರು: ಪಟ್ಟಣ ಮುಖ್ಯರಸ್ತೆಯಿಂದ ನಾಲ್ಕನೇ ವಾರ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯೆ ತಾಹಿರಾ ಬೇಗಂ ಆಗ್ರಹಿಸಿದರು.

    ನಾಲ್ಕನೇ ವಾರ್ಡಿನಲ್ಲಿರುವ ಮುಖ್ಯರಸ್ತೆಯಿಂದ ಕವಲು ರಸ್ತೆಗೆ ಚರಂಡಿ ನಿರ್ಮಾಣ ಮಾಡಲು, ಜಿಲ್ಲಾ ನಗರಾಭಿವೃದ್ಧಿ ಕೋಶ (ಡಿಯುಡಿಸಿ) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುನೀಲ್ ಗುರುವಾರ ಸ್ಥಳ ಪರಿಶೀಲನೆ ನಡೆಸುವ ವೇಳೆ ರಸ್ತೆ ಅಭಿವೃದ್ಧಿ ಕುರಿತು ತಾಹಿರಾ ಬೇಗಂ ಚರ್ಚಿಸಿದರು.

    ಈಗಾಗಲೇ ನಗರೋತ್ಥಾನ ಯೋಜನೆಯಲ್ಲಿ ಅಗತ್ಯವಿರುವೆಡೆ ರಸ್ತೆ, ಚರಂಡಿ ಮಾಡಲು ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಇಂಜಿನಿಯರ್, ಮುಖ್ಯಾಧಿಕಾರಿಗೆ ಒತ್ತಾಯಿಸಿದರೂ ವಾರ್ಡ್ ಸದಸ್ಯರ ಮಾತಿಗೆ ಕ್ಯಾರೇ ಎನ್ನದೆ ಅಗತ್ಯವಿಲ್ಲದೆಡೆ ರಸ್ತೆ ನಿರ್ಮಾಣ ಮಾಡಲು ಯೋಜನೆಯಲ್ಲಿ ಸೇರಿಸಿದ್ದಾರೆ. ಕೂಡಲೇ ಇದನ್ನು ಪರಿಶೀಲಿಸಿ ವೆಂಕಟೇಶ್ವರ ಕಲ್ಯಾಣ ಮಂಟಪದ ಪಕ್ಕದಲ್ಲಿ ಹಾದು ಹೋಗಿರುವ ಸಂಪರ್ಕ ರಸ್ತೆ ದುರಸ್ತಿ ಮತ್ತು ಚರಂಡಿ ಮೇಲೆ ಸಿಮೆಂಟ್ ಸ್ಲಾೃಬ್ ಅಳವಡಿಸುವಂತೆ ಒತ್ತಾಯಿಸಿದರು.

    ಪಟ್ಟಣದ ಮುಖ್ಯರಸ್ತೆಯ ವೆಂಕಟೇಶ್ವರ ಕಲ್ಯಾಣ ಮಂಟಪದ ಪಕ್ಕದಲ್ಲಿ ಸ್ಲ್ಯಾಬ್ನಿಂದ ಮುಚ್ಚಿದ ಚರಂಡಿಯನ್ನು ಒಂದು ವರ್ಷದ ಹಿಂದೆ ತೆರವುಗೊಳಿಸಿದರು. ಚರಂಡಿ ನಿರ್ಮಿಸಿದ ನಂತರ ಸ್ಲ್ಯಾಬ್ ಹಾಕಿಕೊಡುವುದಾಗಿ ಇಂಜಿನಿಯರ್ ಭರವಸೆ ನೀಡಿದ್ದರು. ಲಕ್ಷಾಂತರ ರೂ. ವೆಚ್ಚ ಮಾಡಿ ಚರಂಡಿ ಮೇಲೆ ಸ್ವತಃ ಸ್ಲಾೃಬ್ ಹಾಕಿಸಲಾಗಿತ್ತು. ಒಂದು ವರ್ಷವಾದರೂ ಚರಂಡಿ ಮೇಲೆ ಸ್ಲ್ಯಾಬ್ ಅಳವಡಿಸದೆ ಚರಂಡಿಯಲ್ಲಿ ಗಲೀಜು ಶೇಖರಣೆಯಾಗುತ್ತಿದೆಯಲ್ಲದೆ ವಾಹನಗಳು ಓಡಾಡಲು ತೊಂದರೆಯಾಗಿದೆ. ತಿರುವು ರಸ್ತೆಯಾಗಿರುವುದರಿಂದ ಆಗಾಗ್ಗೆ ವಾಹನಗಳು ಚರಂಡಿಗೆ ಬಿದ್ದು ಅಪಘಾತಕ್ಕೀಡಾಗಿವೆ. ಹೀಗಾಗಿ ಕೂಡಲೇ ಸ್ಲಾೃಬ್ ಅಳವಡಿಕೆಗೆ ಕ್ರಮ ವಹಿಸಬೇಕೆಂದು ಮಾಲೀಕರು ಮನವಿ ಮಾಡಿಕೊಂಡರು.

    ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಸುನೀಲ್ ಮತ್ತು ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಯೋಜನಾ ವರದಿಯನ್ನು ಪರಿಶೀಲಿಸಿ ರಸ್ತೆ ಮತ್ತು ಸ್ಲ್ಯಾಬ್ ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಖಾಲೀದ್‌ಪಾಷ, ಸರ್ವರ್‌ಪಾಷ, ಕರ್ನಾಟಕ ರಕ್ಷಣ ವೇದಿಕೆ(ಪ್ರವೀಣ್‌ಶೆಟ್ಟಿ ಬಣ)ಅಧ್ಯಕ್ಷ ಎಚ್.ವಿ.ರಾಘವೇಂದ್ರ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts