More

    ಶಿಕ್ಷಕ ಸಮಸ್ಯೆಗಳಿಗೆ ಸ್ಪಂದಿಸಿ

    ದೇವರಹಿಪ್ಪರಗಿ: ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ನೀಡುವ ಜತೆಗೆ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಸಂಘ ಕಾರ್ಯನಿರ್ವಹಿಸಲಿ ಎಂದು ಸಿಂದಗಿ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ ಹೇಳಿದರು. ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಘದ ನೂತನ ಪದಾಧಿಕಾರಿಗಳು ಶೈಕ್ಷಣಿಕ ಕಾರ್ಯಗಳನ್ನು ಉತ್ಸಾಹದಿಂದ ಕೈಗೊಳ್ಳುವ ಮೂಲಕ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಬೇಕು ಎಂದರು. ಸಂಘದ ನೂತನ ಅಧ್ಯಕ್ಷ ಎ.ಎಚ್. ವಾಲೀಕಾರ, ಸಿಂದಗಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಯು.ವೈ. ಶೇಖ ಮಾತನಾಡಿದರು. ಸದಯ್ಯನಮಠದ ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಜಿ.ಎಸ್. ಬೇವನೂರ ಅಧ್ಯಕ್ಷತೆ ವಹಿಸಿದ್ದರು. ನಂತರ ಸಿಂದಗಿ ತಾಲೂಕು ಹಾಗೂ ದೇವರಹಿಪ್ಪರಗಿ ತಾಲೂಕಿನ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

    ಸಿಂದಗಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಎಂ.ಎಲ್. ಪಟೇಲ, ಎಸ್.ಎನ್. ಬಸವರೆಡ್ಡಿ, ಎಸ್.ಎಸ್. ಕತ್ನಳ್ಳಿ, ಸಂತೋಷಕುಮಾರ ಬೀಳಗಿ, ಶಿವಾನಂದ ಕೋಟಿನ್, ನಾಗೇಶ ನಾಗೂರ, ಕೆ.ಆರ್. ಕೊಕಟನೂರ, ಸಿ.ಬಿ. ಗಡಗಿ, ಎಸ್.ಡಿ. ಮುಳಸಾವಳಗಿ, ಜಿ.ಪಿ. ಬಿರಾದಾರ, ಎಂ.ಜಿ. ಯಂಕಂಚಿ, ಪಿ.ಸಿ. ತಳಕೇರಿ, ಶಿವಶರಣ ಪೂಜಾರಿ, ರೇಣುಕಾ ಇಂಡಿ, ಪಾರ್ವತಿ ಪೂಜಾರಿ, ಜಯಶ್ರೀ ನಾಯಿಕ, ಕಾವೇರಮ್ಮ ಚವಾಣ್, ಸುಜಾತಾ ಬಾಗಲಕೋಟೆ, ಜಿ.ಡಿ. ಗಚ್ಚಿನಮಠ, ಆರ್.ಎಸ್. ಒಡೆಯರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts