More

    ಕಿಶೋರಿಯರು ಆರೋಗ್ಯದ ಕಾಳಜಿ ವಹಿಸಿ

    ದೇವರಹಿಪ್ಪರಗಿ: ಕಿಶೋರಿಯರು ಸೇರಿದಂತೆ ಹದಿಹರೆಯದವರು ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳಿಗೆ ಮುಜುಗರ ಪಡದೆ ಹಿರಿಯರ ಹಾಗೂ ವೈದ್ಯರ ಸಲಹೆ ಪಡೆದು ತಮ್ಮ ವೈಯಕ್ತಿಕ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕೆಂದು ವೈದ್ಯಾಧಿಕಾರಿ ಬಿ. ಎನ್. ಕಾಖಂಡಕಿ ಹೇಳಿದರು.

    ತಾಲೂಕಿನ ಕೋರವಾರದಲ್ಲಿ ಆರೋಗ್ಯ ಇಲಾಖೆಯ ರಾಷ್ಟ್ರೀಯ ಕಿಶೋರ ಸ್ವಾಸ್ಥೃ ಕಾರ್ಯಕ್ರಮದಡಿ ಹದಿಹರೆಯದವರಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ಆಪ್ತಸಮಾಲೋಚನೆ ಮತ್ತು ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಹದಿಹರೆಯ ಇದು ಭಾವನಾತ್ಮಕ, ಮಾನಸಿಕ, ಸಾಮಾಜಿಕ ಮುಖ್ಯವಾಗಿ ಶಾರೀರಿಕ ಬದಲಾವಣೆಯ ಕಾಲ. ಇಲ್ಲಿ ನಾವು ಉತ್ತಮ ಪಾಠ, ಹವ್ಯಾಸ ಬೆಳೆಸಿಕೊಂಡು ಸರ್ವತೋಮುಖವಾಗಿ ಬೆಳೆದು ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ ಎಂದರು.

    ಹಿರಿಯ ಆರೋಗ್ಯ ಸಹಾಯಕ ಎಂ.ಡಿ. ಮೋತಿಬಾಯಿ, ಆಪ್ತ ಸಮಾಲೋಚಕ ಸಂತೋಷ ತೆಂಗಳಿ ಮಾತನಾಡಿ, ಹದಿಹರೆಯದವರಲ್ಲಿ ಉಂಟಾಗುವ ಶಾರೀರಿಕ, ಮಾನಸಿಕ ಬದಲಾವಣೆಗಳು, ಅದರಿಂದಾಗುವ ಪರಿಣಾಮಗಳ ಕುರಿತು ಮಾತನಾಡಿ, ಕಿಶೋರಿಯರು ತಮ್ಮ ವೈಯಕ್ತಿಕ ಸ್ವಾಸ್ಥೃ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಿದರು.

    ಅಪ್ಪಾಸಾಬ ಮಾಂಗ, ಕೆ.ಎಸ್. ಕಟ್ಟಿಮನಿ, ಎಂ.ಎಚ್. ಸಾಲವಾಡಗಿ, ಎ.ಎಸ್. ಪಾಟೀಲ, ದಾನಮ್ಮ ನಂದಗೌಡರ, ಸಂಗಮ್ಮ ಶಂಬೇವಾಡ, ಎಸ್.ಎನ್. ನದ್ಾ, ರೇಷ್ಮಾ ಟಕ್ಕಳಕಿ, ಸಾಹಿರಾಬಾನು ಮರ್ತೂರ ಸಹಿತ ಗ್ರಾಮದ ಎಲ್ಲ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts