More

    ಕರೊನಾ ಮುಂಜಾಗ್ರತೆ ವಹಿಸಿ

    ದೇವರಹಿಪ್ಪರಗಿ: ಕರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ವದಂತಿ ಹಬ್ಬಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ವೈ.ಬಿ. ನಾಗಠಾಣ ಎಚ್ಚರಿಕೆ ನೀಡಿದರು.
    ಕರೊನಾ ವೈರಸ್ ಹರಡದಂತೆ ಜನರಲ್ಲಿ ಮುಂಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಹಾಗೂ ಪಪಂ ಸದಸ್ಯರ ಜತೆ ತುರ್ತು ಸಭೆ ನಡೆಸಿ ಅವರು ಮಾತನಾಡಿದರು.
    ಜಿಲ್ಲಾಧಿಕಾರಿ ಆದೇಶದಂತೆ ಕೆಲ ಜನಸಂದಣಿ ಸ್ಥಳಗಳ ಮೇಲೆ ನಿರ್ಬಂಧ ಹೇರಬೇಕಾಗಿದೆ. ಜಾತ್ರೆ, ಮದುವೆ, ಕ್ರೀಡಾಕೂಟ ಹಾಗೂ ಬಸ್ ನಿಲ್ದಾಣದಲ್ಲಿ ಹತ್ತಾರು ಜನ ಸೇರಿಕೊಂಡು ನಿಲ್ಲುವುದು ನಿಷೇಧ ಮಾಡಬೇಕು. ಪಟ್ಟಣದಲ್ಲಿ ಕಟ್ಟುನಿಟ್ಟಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಸಂಪೂರ್ಣ ನಿಷೇಧ ಮಾಡಬೇಕು. ಪ್ರತಿಯೊಂದು ವಾರ್ಡ್‌ಗಳಲ್ಲಿ ಎಲ್ಲಿಯೂ ಗಲೀಜು ನೀರು ನಿಲ್ಲಬಾರದು. ಎಲ್ಲಾದರು ಆ ತರಹ ಕಂಡುಬಂದರೆ ಪಪಂ ಕಾರ್ಮಿಕರು ಅದನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಔಷಧ ಸಿಂಪಡಿಸಬೇಕು ಎಂದರು.
    ಡಾ.ಸಂತೋಷ ಯಡಹಳ್ಳಿ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಎಲ್.ಡಿ. ರಿಸೆಲ್ದಾರ, ಪಪಂ ಸದಸ್ಯರಾದ ರಾಜೀವ ಗುತ್ತೇದಾರ, ಬಸಿರ್‌ಷೇಠ ಬೇಪಾರಿ, ರಿಯಾಜ ಯಲಗಾರ, ಭಾಸ್ಕರ ಗುಡಿಮನಿ, ಗುರುರಾಜ ಗಡೇದ, ರಿಯಾಜ ನಾಯ್ಕೋಡಿ, ಭಾಷಾಸಾಬ ಹಳ್ಳಿ, ಮಹಾದೇವ ನಾಯ್ಕೋಡಿ, ಫಿರೋಜ ಮುಲ್ಲಾ, ಕಾಶಿನಾಥ ಕಡ್ಲೇವಾಡ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts