More

    ಮೂವರು ಸಮಾಜ ಸೇವಕರಿಗೆ ದೇವರಾಜ ಅರಸು ಪ್ರಶಸ್ತಿ

    ಬೆಂಗಳೂರು: ರಾಜ್ಯದ ಮೂವರು ಸಮಾಜ ಸೇವಕರಿಗೆ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಡಿ.ದೇವರಾಜ ಅರಸು ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು 2019-20, 2020-21ನೇ ಸಾಲಿಗೆ ಬಾಕಿ ಇದ್ದ ಪ್ರಶಸ್ತಿಗಳ ಮತ್ತು ಈ ವರ್ಷದ ಪ್ರಶಸ್ತಿಯ ವಿವರಗಳನ್ನು ಇಂದು ಪ್ರಕಟಿಸಿದರು.

    2019-20ನೇ ಸಾಲಿಗೆ ಬೆಳಗಾವಿ ಜಿಲ್ಲೆಯ ಅಥಣಿಯ ಬಸವಪ್ರಭು ಲಖಮಗೌಡ ಪಾಟೀಲ ಅವರಿಗೆ ಪ್ರಶಸ್ತಿ ಲಭಿಸಿದೆ. ವೃತ್ತಿಯಿಂದ ವಕೀಲರಾದ ಪಾಟೀಲ ಅವರು, ಬಡವರಿಗೆ ಮತ್ತು ಶೋಷಿತರಿಗೆ ಕಾನೂನು ನೆರವು ಶಿಬಿರಗಳನ್ನು, ಜನತಾ ನ್ಯಾಯಾಲಯಗಳನ್ನು ನಡೆಸಿದ್ದಾರೆ. ವಿಮೋಚನಾ ದೇವದಾಸಿ ಪುನರ್ವಸತಿ ಸಂಘದ ಸ್ಥಾಪಕರಾಗಿದ್ದು, ಲೈಂಗಿಕ ಶೋಷಣೆಗೊಳಗಾಗಿದ್ದ ಮಹಿಳೆಯರ, ಮಕ್ಕಳ ಪುನರ್ವಸತಿಗಾಗಿ ದುಡಿದಿದ್ದಾರೆ. ಮಲಾಬಾ ಗ್ರಾಮದಲ್ಲಿ ಬಾಲ ಕಾರ್ಮಿಕರಿಗಾಗಿ ಶಾಲೆ ಸ್ಥಾಪಿಸಿದ್ದಾರೆ.

    ಇದನ್ನೂ ಓದಿ: ‘ರಕ್ಷಾ ಬಂಧನ’: ಯುಪಿ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯೋಗಿ

    2020-21 ನೇ ಸಾಲಿಗೆ ಬೆಂಗಳೂರಿನ ಸುಮಂಗಲಿ ಆಶ್ರಮದ ಸ್ಥಾಪಕರಾದ ಎಸ್.ಜಿ.ಸುಶೀಲಮ್ಮ ಅವರಿಗೆ ಪ್ರಶಸ್ತಿ ಲಭಿಸಿದೆ. ಸುಶೀಲಮ್ಮ ಅವರು ಸುಮಂಗಲಿ ಆಶ್ರಮದ ಮೂಲಕ ದಿಕ್ಕಿಲ್ಲದ ನೊಂದ ಹೆಣ್ಣುಮಕ್ಕಳಿಗೆ ಆಸರೆ ನೀಡಿ, ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಈವರೆಗೆ 15 ಲಕ್ಷಕ್ಕೂ ಹೆಚ್ಚು ಜನ ಅವರ ಸೇವೆಯ ಫಲಾನುಭವಿಗಳಾಗಿದ್ದಾರೆ.

    2021-22 ಸಾಲಿನ ಪ್ರಶಸ್ತಿಯು ಬೆಂಗಳೂರಿನ ಕೆ.ಭಾಸ್ಕರ್ ದಾಸ್ ಎಕ್ಕಾರು ಅವರಿಗೆ ಲಭಿಸಿದೆ. ಇವರು ಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿದ್ದು, ಅಲೆಮಾರಿ ಸಮುದಾಯದ ಜನರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಚೆನ್ನದಾಸರ್​ ಸಮುದಾಯದ ಅಭಿವೃದ್ಧಿಗಾಗಿ ಸಂಘ ಸ್ಥಾಪಿಸಿ ಶ್ರಮಿಸುತ್ತಿದ್ದಾರೆ.

    ಮತ್ತೆ ಕರಾಳತೆಯ ಭೀತಿ: ತಾಲಿಬಾನ್​ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!

    ಮಗನ ಅಗಲಿಕೆ ತಾಳಲಾರದೆ, ಅವನ ದಾರಿಯಲ್ಲೇ ನಡೆದ ತಾಯಿ! ಇದು ಮನ ಕಲಕುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts